More

    ಮಹೇಶ್​ ಬಾಬು ಅಭಿನಯದ ಹೊಸ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್​ …

    ಹೈದರಾಬಾದ್: ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನದಲ್ಲಿ ಮಹೇಶ್​ ಬಾಬು ನಟಿಸುತ್ತಿರುವುದು ಗೊತ್ತೇ ಇರಬಹುದು. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಪ್ರಗತಿಯಲ್ಲಿದೆ. ಈ ಚಿತ್ರದ ಹೆಸರು ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಚಿತ್ರತಂಡವು ಚಿತ್ರದ ಹೆಸರನ್ನು ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ, ಅದಕ್ಕಿಂತ ಮೊದಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡದವರು ಘೋಷಿಸಿದ್ದಾರೆ.

    ಇದನ್ನೂ ಓದಿ: ರೇಸ್​ ಕೋರ್ಸ್​ ರಸ್ತೆ ಇನ್ನು ಮುಂದೆ ಅಂಬರೀಶ್​ ರಸ್ತೆ; ನಾಮಫಲಕ ಅನಾವರಣಗೊಳಿಸಿದ ಸಿಎಂ

    ಟಾಲಿವುಡ್​ನಲ್ಲಿ ಪ್ರತೀ ವರ್ಷ ಸಂಕ್ರಾಂತಿಗೆ ಚಿತ್ರ ಮಾಡುವುದಕ್ಕೆ ದೊಡ್ಡ ಪೈಪೋಟಿಯೇ ಇರುತ್ತದೆ. ಮುಂದಿನ ವರ್ಷದ ಸಂಕ್ರಾಂತಿಗೆ ಈಗಿನಿಂದಲೇ ಪೈಪೋಟಿ ಶುರುವಾಗಿದ್ದು, 2024ರ ಜನವರಿ 13ರಂದು ತಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಮಹೇಶ್​ ಬಾಬು ಈಗಲೇ ಘೋಷಿಸಿದ್ದಾರೆ. 10 ತಿಂಗಳ ಮೊದಲೇ ಬಿಡುಗಡೆ ದಿನಾಂಕವನ್ನು ಘೋಷಿಸಿರುವುದರಿಂದ, ಅದೇ ದಿನ ಯಾರಾದರೂ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಾರೋ? ಅಥವಾ ಪೈಪೋಟಿಗೆ ಹೆದರಿ ಹಿಂದೆ ಸರಿಯುತ್ತಾರೋ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

    ಅಂದಹಾಗೆ, ಇದು ತ್ರಿವಿಕ್ರಮ್​ ಶ್ರೀನಿವಾಸ್​ ಮತ್ತು ಮಹೇಧ್​ ಬಾಬು ಜತೆಯಾಟದ ಮೂರನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ‘ಅಥುಡು’ ಮತ್ತು ‘ಖಲೇಜ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಮಹೇಶ್​ ಬಾಬು ಅವರ 28ನೇ ಚಿತ್ರವಾಗಿರುವುದರಿಂದ, ಸದ್ಯಕ್ಕೆ ‘ಎಸ್​ಎಸ್​ಎಂಬಿ 28’ ಎಂಬ ಹೆಸರನ್ನು ತಾತ್ಕಾಲಿಕವಾಡಿ ಇಡಲಾಗಿದ್ದು, ನಿಜ ಹೆಸರು ಇನ್ನಷ್ಟೇ ಘೋಷಣೆಯಾಗಬೇಕಿದೆ.

    ಇದನ್ನೂ ಓದಿ: ‘ಗೇಮ್​ ಚೇಂಜರ್​’ ಆದ ರಾಮ್​ಚರಣ್​ ತೇಜ; ಸಂಕ್ರಾಂತಿಗೆ ಚಿತ್ರ ಬಿಡುಗಡೆ ಸಾಧ್ಯತೆ

    ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಾಯಕಿಯರಾಗಿ ನಟಿಸುತ್ತಿದ್ದು, ಚಿತ್ರಕ್ಕೆ ಥಮನ್​ ಅವರ ಸಂಗೀತವಿದೆ. ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್​ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ.

    ನಾಯಕಿಯಾದ ವೀರಪ್ಪನ್​ ಮಗಳು; ‘ಮಾವೀರನ್​ ಪಿಳ್ಳೈ’ ಚಿತ್ರದಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts