More

    ಮಹಾತ್ಮರ ಬದುಕು ಜಗತ್ತಿಗೆ ಮಾದರಿ

    ಅರಕಲಗೂಡು: ವಿಶ್ವವೇ ಕೊಂಡಾಡುವ ಅಂಹಿಸಾವಾದಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಬದುಕು ಮತ್ತು ಸಿದ್ಧಾಂತಗಳು ಎಲ್ಲ ಕಾಲಕ್ಕೂ ಅನುಕರಣೀಯ ಎಂದು ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ಹೊಡೆನೂರು ತಿಳಿಸಿದರು.

    ಪಟ್ಟಣದ ಕೋಟೆ ಗಣೇಶೋತ್ಸವ ಸಮಿತಿ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯ, ಅಹಿಂಸೆ. ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದ ಮಹಾತ್ಮ ಗಾಂಧಿ ಅವರು ಜಗತ್ತು ಕಂಡ ಅಪರೂಪದ ವ್ಯಕ್ತಿ. ಕೆಲವೇ ದಿನ ಪ್ರಧಾನಿಯಾಗಿದ್ದರೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ದೇಶವನ್ನು ದಿಟ್ಟತನದಿಂದ ಮುನ್ನಡೆಸಿದರು. ಈ ಮಹಾತ್ಮರ ಬದುಕು ಜಗತ್ತಿಗೆ ಮಾದರಿಯಾದುದು ಎಂದರು.

    ವಿವಿಧ ಕ್ಷೇತ್ರದ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ, ಸಿಪಿಐ ರಘುಪತಿ, ಸಬ್ ಇನ್ಸ್‌ಪೆಕ್ಟರ್ ಕಾಳೇಗೌಡ, ಹಾಸನ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ನವೀನ್ ಉಲಿವಾಲ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಪಪಂ ಮಾಜಿ ಅಧ್ಯಕ್ಷ ಮಂಜುಶೆಟ್ಟಿಗೌಡ, ಪಪಂ ಸದಸ್ಯ ರಮೇಶ್ ವಾಟಾಳ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಕುಮಾರ್, ಸಮಿತಿ ಮುಖಂಡರಾದ ಎ.ಜೆ.ಬಾಲು, ಚಂದ್ರು, ಜಗದೀಶ್, ನವೀನ್, ಮನು ಇದ್ದರು. ಮಹಾಗಣಪತಿ ಹೋಮ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts