More

    ಸಂಬಳ ಕೋಡೋಕೆ ಕಾಸಿಲ್ಲ ಎನ್ನುವ ಸರ್ಕಾರಕ್ಕೆ ಇದ್ಯಾಕೆ ಬೇಕು..? ಸಾಮಾನ್ಯರ ಆಕ್ರೋಶಕ್ಕೂ ಕಾರಣವಿಲ್ಲದಿಲ್ಲ…!

    ನವದೆಹಲಿ: ದೇಶವನ್ನು ಕರೊನಾ ಸಂಕಷ್ಟ ಇನ್ನಿಲ್ಲದಂತೆ ಕಾಡುತ್ತಿದೆ. ಎಲ್ಲರೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತೆಯೇ ಸರ್ಕಾರಗಳು ಇದಕ್ಕೆ ಹೊರತಾಗಿಲ್ಲ.

    ಕೆಲ ದಿನಗಳ ಹಿಂದಷ್ಟೇ ದೆಹಲಿ ಡಿಸಿಎಂ ಮನೀಷ್​ ಸಿಸೋಡಿಯಾ ಸರ್ಕಾರಿ ನೌಕರರ ಸಂಬಳಕ್ಕೆ ಕೇಂದ್ರ ಸರ್ಕಾರ ಸಾಲ ನೀಡಲಿ ಎಂದು ಮನವಿ ಮಾಡಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರದ ಸಂಪುಟ ಸದಸ್ಯ ವಿಜಯ್​ ವಾಡೆಟ್ಟಿವಾರ್​ ಕೂಡ ನೌಕರರಿಗೆ ಸಂಬಳ ನೀಡಲು ಸಾಲ ಮಾಡಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.

    ಇದನ್ನೂ ಓದಿ; ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ

    ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಕರೊನಾ ರೋಗಿಗಗಳಿದ್ದಾರೆ. ಇನ್ನು ಮುಂಬೈನ ಸ್ಥಿತಿಯಂತೂ ಚಿಂತಾಜನಕವಾಗಿದೆ. ಹೀಗಿರುವಾಗಲೇ ಅಲ್ಲಿನ ಸರ್ಕಾರ ಆರು ಲಕ್ಸುರಿ ಕಾರುಗಳ ಖರೀದಿಗೆ ಮುಂದಾಗಿದೆ. ಸಹಜವಾಗಿಯೇ ಇದು ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ.

    ಸಹಾಯಕ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗಾಗಿ ಆರು ಇನ್ನೊವಾ ಕ್ರಿಸ್ಟಾ ಕಾರುಗಳನ್ನು ಖರೀದಿಸುತ್ತಿದೆ. ಇದಕ್ಕಾಗಿ 1.37 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಸಿಎಂ ಉದ್ಧವ್​ ಠಾಕ್ರೆ ಹಾಗೂ ಹಣಕಾಸು ಇಲಾಖೆ ಒಪ್ಪಿಗೆ ದೊರೆತಿದೆ.

    ಇದನ್ನೂ ಓದಿ; ಪಬ್​ಜಿ ಆಟವಾಡುತ್ತಲೇ ಇರಲು ಪಾಲಕರ ಬ್ಯಾಂಕ್​ ಖಾತೆಯಿಂದ 16 ಲಕ್ಷ ರೂ. ಖರ್ಚು ಮಾಡಿದ ಬಾಲಕ…! 

    ರಾಜ್ಯ ಸಚಿವೆ ಅದರಲ್ಲೂ ಧಾರಾವಿ ಕ್ಷೇತ್ರವನ್ನು ಪ್ರತಿನಿಧಿಸುವ ವರ್ಷಾ ಗಾಯಕ್ವಾಡ್​ಗೆ ಹೊಸ ಕಾರು ಖರೀದಿಸಲು 22.83 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ. ಇದಕ್ಕೆ ವಿಪಕ್ಷ ಬಿಜೆಪಿ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ತೀವ್ರ ಟೀಕೆಗೆ ಗುರಿಯಾಗಿದೆ.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts