More

    ಪರೀಕ್ಷೆಯಲ್ಲದೇ ಸಿಕ್ತು ‘ಪಾಸ್‌’ ಮಾರ್ಕ್ಸ್‌ಕಾರ್ಡ್‌- ತನಿಖೆಗೆ ವಿದ್ಯಾರ್ಥಿಗಳು ಸುಸ್ತು

    ಅಮರಾವತಿ (ಮಹಾರಾಷ್ಟ್ರ): ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಪರೀಕ್ಷೆಗಳು ರದ್ದುಗೊಂಡಿದ್ದು, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗುತ್ತಿದೆ.

    ಆದರೆ ಅಮರಾವತಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾತ್ರ ವಿಚಿತ್ರ ನಡೆದಿದೆ. ಅದೇನೆಂದರೆ, ಪ್ರಥಮ ಮತ್ತು ದ್ವಿತೀಯ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ ಎಂದೂ ಹೇಳಿಲ್ಲ, ಅಥವಾ ಪರೀಕ್ಷೆ ಮಾಡದೇ ಅವರು ತೇರ್ಗಡೆಯಾಗುವುದಾಗಿಯೂ ಘೋಷಣೆ ಆಗಿರಲಿಲ್ಲ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಕೆಲವು ಕೃಷಿ ಕಾಲೇಜುಗಳು ಮಾರ್ಕ್ಸ್‌ಕಾರ್ಡ್‌ ನೀಡಿದ್ದು, ಅದರ ಮೇಲೆ ‘ಕೋವಿಡ್‌-19 ಪ್ರಮೋಟೆಡ್‌’ (ಕೋವಿಡ್‌-16 ಬಡ್ತಿ) ಎಂದು ಸೀಲು ಹಾಕಲಾಗಿದೆ.

    ಈ ಅಂಕಪಟ್ಟಿಯ ಬಗ್ಗೆ ತಿಳಿಯುತ್ತಲೇ ಕೃಷಿ ಸಚಿವ ದಾದಾಸಾಹೇಬ್ ಭೂಸ್ ಕೆಂಡಾಮಂಡಲವಾಗಿದ್ದು ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಅವರು ಮಹಾರಾಷ್ಟ್ರ ಕೃಷಿ ಶಿಕ್ಷಣ ಮತ್ತು ಸಂಶೋಧನಾ ಮಂಡಳಿಯ ಮಹಾನಿರ್ದೇಶಕರು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ವಿದ್ಯಾರ್ಥಿಗಳಿಗೆ ನೀಡಲಾದ ಪ್ರಮಾಣಪತ್ರಗಳ ಮೇಲೆ ‘ಕೋವಿಡ್ -19 ಬಡ್ತಿ ಪ್ರಮಾಣೀಕರಿಸಲು ರಾಜ್ಯ ಸರ್ಕಾರದಿಂದ ಯಾವುದೇ ನಿರ್ದೇಶನಗಳಿಲ್ಲ. ಸರ್ಕಾರದ ಆದೇಶವಿಲ್ಲದೇ ಈ ರೀತಿ ಮಾಡಿದ್ದು ಯಾರು ಎಂಬುದಾಗಿ ಪ್ರಶ್ನಿಸಿದ್ದಾರೆ.

    ಧಾಪೋಲಿಯ ಬಾಲಾ ಸಾವಂತ್ ಕೊಂಕನ್ ಕೃಷಿ ವಿಶ್ವವಿದ್ಯಾಲಯ, ರಾಹುರಿಯಲ್ಲಿ ಮಹಾತ್ಮ ಫುಲೆ ಕೃಷಿ ವಿಶ್ವವಿದ್ಯಾಲಯ, ಪರಭಾನಿಯ ಮರಾಠವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಅಕೋಲಾದ ಡಾ.ಪಂಜಬ್ರಾವ್ ದೇಶಮುಖ್ ಕೃಷಿ ವಿಶ್ವವಿದ್ಯಾಲಯ ತನ್ನ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸಿದೆ. ಕೋವಿಡ್ -19 ವೈರಸ್‌ ದೃಷ್ಟಿಯಿಂದ ಯಾವುದೇ ಪರೀಕ್ಷೆಯಿಲ್ಲದೆ ಕೃಷಿ ವಿಶ್ವವಿದ್ಯಾಲಯಗಳ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲಾಗಿದೆ.

    ಇದನ್ನೂ ಓದಿ: ಕೋರ್ಟ್‌ ಮೊರೆಹೋದ ಗ್ಯಾಂಗ್‌ರೇಪ್‌ ಸಂತ್ರಸ್ತೆಯೇ ಅರೆಸ್ಟ್‌!

    250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಮಾರ್ಕ್ಸ್‌ಕಾರ್ಡ್‌ ಹೋಗಿದೆ. ಈ ಬಗ್ಗೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಗೆ ಯಾರೋ ವಿಷಯ ತಿಳಿಸಿದಾಗಲೇ ಅರಿವಿಗೆ ಬಂದಿದೆ. ಸರ್ಕಾರದಿಂದ ಯಾವುದೇ ಆದೇಶವಿರದಿದ್ದರೂ ಈ ರೀತಿ ಮಾಡಿರುವುದು ಏಕೆ ಎನ್ನುವುದು ಅವರ ಪ್ರಶ್ನೆ
    ಆದರೆ ಈ ರೀತಿ ಪರೀಕ್ಷೆ ಮಾಡದೇ ವಿದ್ಯಾರ್ಥಿಗಳಿಗೆ ತೇರ್ಗಡೆ ಮಾಡಿದರೆ ಅವರ ಭವಿಷ್ಯಕ್ಕೆ ಧಕ್ಕೆ ಆಗುತ್ತದೆ. ಅವರ ವೃತ್ತಿಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ನಿಜವಾಗಿಯೂ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ದೂರಲಾಗಿದೆ.

    ಈ ಬಗ್ಗೆ ಸರ್ಕಾರವನ್ನು ಟೀಕಿಸಿರುವ ಬಿಜೆಪಿ ಮುಖಂಡ ಮತ್ತು ಮಾಜಿ ರಾಜ್ಯ ಶಿಕ್ಷಣ ಸಚಿವ ಆಶಿಶ್ ಶೆಲಾರ್ ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ. ಈ ಮಧ್ಯೆ ಕೃಷಿ ಪದವೀಧರರ ಸಂಘದ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಕಡುಸ್ಪತಿಲ್ ಅವರು, ಇದು ನಮ್ಮ ಗಮನಕ್ಕೂ ಬರಲಿಲ್ಲ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಯಾರೋ ಒಬ್ಬರು ಈ ರೀತಿ ವ್ಯವಹಾರ ಮಾಡಿದ್ದಾರೆ. ನಾವು ಯಾರಿಗೂ ನಿರ್ದೇಶನ ಕೊಟ್ಟಿಲ್ಲ. ಆದ್ದರಿಂದ ಸೂಕ್ತ ತನಿಖೆ ಮಾಡಲಾಗುವುದು ಎಂದಿದ್ದಾರೆ.

    ಪರೀಕ್ಷೆ ಇಲ್ಲದೇ ಪಾಸ್‌ ಆಗಿರುವ ವಿದ್ಯಾರ್ಥಿಗಳು ಮಾತ್ರ ಇದೀಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.!

    ಲಂಡನ್‌ನಿಂದಲೂ ಚೀನಾಕ್ಕೆ ಗುದ್ದು: ಹುವೈ ಕಂಪನಿ ಬ್ಯಾನ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts