More

    ಲಂಡನ್‌ನಿಂದಲೂ ಚೀನಾಕ್ಕೆ ಗುದ್ದು: ಹುವೈ ಕಂಪನಿ ಬ್ಯಾನ್‌!

    ಲಂಡನ್: ಚೀನಾಕ್ಕೆ ವಿಶ್ವದ ಎಲ್ಲೆಡೆಯಿಂದಲೂ ನಡುಕ ಶುರುವಾಗಿದೆ. ಗಡಿ ಸಂಘರ್ಷಕ್ಕೆ ಇಳಿದು ಭಾರತದ ಜತೆ ವೈರತ್ವ ಕಟ್ಟಿಕೊಂಡಿರುವ ಚೀನಾ ಕರೊನಾ ವೈರಸ್‌ ಹರಡಿಸಿ ಇಡೀ ವಿಶ್ವದ ಜತೆ ವೈರತ್ವ ಕಂಡುಕೊಂಡಿದೆ.

    ಇದಾಗಲೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಚೀನಾ ಉತ್ಪನ್ನದ ಮೇಲೆ ನಿಷೇಧ ಹೇರಲು ಶುರು ಮಾಡಿವೆ. ಇದೀಗ ಬ್ರಿಟನ್‌ ಸರದಿ, ಬ್ರಿಟನ್ನಿನಲ್ಲಿ 5ಜಿ ಟೆಂಡರ್‌ನಿಂದ ಚೀನಾ ಕಂಪನಿ ಹ್ಯುವೈ ಅನ್ನು ಹೊರಗಿಡಲಾಗಿದೆ.ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆದೇಶದ ಮೇರೆಗೆ 5ಜಿ ನೆಟ್ವರ್ಕ್ ಟೆಂಡರ್ ಪ್ರಕ್ರಿಯೆಯಿಂದ ಚೀನಾದ ಹ್ಯುವೈ ಕಂಪನಿಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ: ಚೀನಾದ ಕಪಿಮುಷ್ಠಿಯಲ್ಲಿ ನೇಪಾಳ- ಭಾರತದ ಟಿ.ವಿ.ಚಾನೆಲ್‌ಗಳು ಬ್ಯಾನ್‌!

    ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ ನೀಡಿದ ವರದಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. . ಟೆಲಿಕಾಂ ಜಾಲದಿಂದ ಹ್ಯುವೈ ತಂತಿಗಳನ್ನು ಕಟ್ ಮಾಡುವ ಪ್ರಕ್ರಿಯೆಗೆ ಇದಾಗಲೇ ಚಾಲನೆ ದೊರೆತಿದ್ದು, ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 31ರ ನಂತರ ಹ್ಯುವೈ 5ಜಿ ಕಿಟ್ ಖರೀದಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

    ಯುಎಸ್ ಸೆಮಿಕಂಡೆಕ್ಟರ್ ತಂತ್ರಜ್ಞಾನ ಆಧಾರಿತವಾಗಿ ನಿರ್ಮಾಣಗೊಂಡಿರುವ ಉತ್ಪನ್ನಗಳ ಬಳಕೆಯ ಮೇಲೆ ಹ್ಯುವೈ ಸಂಸ್ಥೆಗೆ ಅಮೆರಿಕವು ಇದೇ ಮೇ ತಿಂಗಳಿನಲ್ಲಿ ನಿರ್ಬಂಧ ವಿಧಿಸಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಲಂಡನ್‌ನ ಸೈಬರ್ ಸೆಕ್ಯುರಿಟಿ, ತಮ್ಮ ದೇಶದ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದು ಸರಿಯಲ್ಲ ಎಂಬುದಾಗಿ ವಿಸ್ಕೃತ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ರಿಟನ್‌ ಸರ್ಕಾರದ ಕಾರ್ಯದರ್ಶಿ ಆಲಿವರ್ ಡೌಡೇನ್ ಹೇಳಿದ್ದಾರೆ.

    ಚೀನಾದ ತಂತ್ರಜ್ಞಾನ, ಹ್ಯುವೈ ಬಳಸುತ್ತಿರುವ ವಿಧಾನ ಎಲ್ಲವೂ ಸುರಕ್ಷಿತವಾಗಿಲ್ಲ ಎಂದು ಜಿಸಿಎಚ್ ಕ್ಯೂ ವರದಿ ಮಾಡಿದೆ. ಬ್ರಿಟನ್‌ನಲ್ಲಿ 5 ಜಿ ನೆಟ್‌ವರ್ಕ್‌ ಹೆಣೆಯಲು ಹ್ಯುವೈಗೆ ಟೆಂಡರ್ ನೀಡಲು ಇಲ್ಲಿಯ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಈಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

    ಗಲ್ವಾನ್‌ ಘರ್ಷಣೆ: ಸತ್ತವರ ಸಂಖ್ಯೆ ಮುಚ್ಚಿಡಲು ಛೇ ಇದೆಂಥ ನೀಚ ಕೃತ್ಯ!

    ಭೂಮಿಯೊಳಗಿಂದ ಮನುಷ್ಯರ ಚೀರಾಟ? ಬೆಚ್ಚಿಬಿದ್ದಿದ್ದಾರೆ ಚೀನಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts