More

    ಭೂಮಿಯೊಳಗಿಂದ ಮನುಷ್ಯರ ಚೀರಾಟ? ಬೆಚ್ಚಿಬಿದ್ದಿದ್ದಾರೆ ಚೀನಿಯರು!

    ಬೀಜಿಂಗ್‌: ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಚೀನಾದಲ್ಲಿ ಇದೀಗ ವಿಚಿತ್ರ ಘಟನೆಯೊಂದು ನಡೆದಿದ್ದು, ಚೀನಿಯರನ್ನು ಬೆಚ್ಚಿ ಬೀಳಿಸಿದೆ.

    ಅದೇನೆಂದರೆ ಆಗ್ನೇಯ ಚೀನಾದಲ್ಲಿರುವ ಗ್ಯೂಝೌ ಪರ್ವತದಿಂದ ವಿಚಿತ್ರ ರೀತಿಯ ಭಯಾನಕ ಶಬ್ದಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಇದೇ ಜುಲೈ 2ರಂದು ರಿಕ್ಟರ್‌ ಮಾಪನದಲ್ಲಿ 4.5 ತೀವ್ರತೆಯ ಭೂಕಂಪ ಆಗಿರುವ ಪರ್ವತದಲ್ಲಿಯೇ ಇಂಥದ್ದೊಂದು ಭಯಾನಕ ಶಬ್ದ ಕೇಳಿಬಂದಿದೆ. ಚೀನಾದ ಕರಾಳ ಭವಿಷ್ಯಕ್ಕೆ ಇದು ಸಾಕ್ಷಿಯೇ ಎಂಬುದಾಗಿ ಅಲ್ಲಿಯ ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.

    ಭೂಮಿಯೊಳಗಿನಿಂದ ವಿಚಿತ್ರ ಶಬ್ದ

    ಆಗ್ನೇಯ ಚೀನಾದಲ್ಲಿರುವ ಗ್ಯೂಝೌ ಪರ್ವತದಿಂದ ವಿಚಿತ್ರ ರೀತಿಯ ಭಯಾನಕ ಶಬ್ದಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಇದೇ ಜುಲೈ 2ರಂದು ರಿಕ್ಟರ್‌ ಮಾಪನದಲ್ಲಿ 4.5 ತೀವ್ರತೆಯ ಭೂಕಂಪ ಆಗಿರುವ ಪರ್ವತದಲ್ಲಿಯೇ ಇಂಥದ್ದೊಂದು ಭಯಾನಕ ಶಬ್ದ ಕೇಳಿಬಂದಿದೆ. ಚೀನಾದ ಕರಾಳ ಭವಿಷ್ಯಕ್ಕೆ ಇದು ಸಾಕ್ಷಿಯೇ ಎಂಬುದಾಗಿ ಅಲ್ಲಿಯ ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.

    Posted by Vijayavani on Saturday, July 11, 2020

    ಈ ಭಯಾನಕ ಶಬ್ದವನ್ನು ಕೇಳಲು ದಿನನಿತ್ಯವೂ ಜನರು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ತಿಳಿಯುವುದಕ್ಕಾಗಿ ಹಲವಾರು ಸಂಶೋಧಕರೂ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ.

    ಎರಡು ವಾರಗಳಿಂದ ಇಂಥದ್ದೊಂದು ಭೀಕರ ಶಬ್ದ ಈ ಪರ್ವತ ಶ್ರೇಣಿಯಿಂದ ಕೇಳಿಬರುತ್ತಿದೆ. ಕೆಲವರು ಇದನ್ನು ಚೀನಾದ ರಾಷ್ಟ್ರೀಯ ಪ್ರಾಣಿ ಡ್ರ್ಯಾಗನ್‌ ಎಂದು ಕರೆದರೆ, ಇನ್ನು ಕೆಲವರು ಹಲವರು ಕಳೆದ 70 ವರ್ಷಗಳಲ್ಲಿ ಚೀನಾದ ಕಮ್ಯುನಿಸ್ಟ್‌ ಸರ್ಕಾರ ಅಮಾಯಕ ಪ್ರಜೆಗಳನ್ನು ಹತ್ಯೆ ಮಾಡುತ್ತಿದ್ದು, ಅವರೆಲ್ಲರ ಆತ್ಮದ ಆಕ್ರಂದನ ಇದು ಎಂದೇ ವಿಶ್ಲೇಷಿಸುತ್ತಿದ್ದಾರೆ.

    1990ರ ದಶಕದ ಆರಂಭದಲ್ಲಿ ಹತ್ಯೇಗೀಡಾದವರ ಕೂಗು ಇದು ಎನ್ನುವುದು ಇನ್ನೊಂದು ವಾದ. ಕಮ್ಯುನಿಸ್ಟರ ಕಪಿಮುಷ್ಠಿಯಲ್ಲಿ ಇರುವ ಚೀನಿಗರು ತಮಗೂ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಆಡಳಿತದಲ್ಲಿ ಪಾರದರ್ಶಕತೆ ಬೇಕು ಎಂದು ಬೀದಿಗಿಳಿದ ಸಂದರ್ಭದಲ್ಲಿ ಚೀನಾದ ಕಮ್ಯುನಿಸ್ಟ್ ಪಾರ್ಟಿ ಅತ್ಯಂತ ನಿರ್ದಯವಾಗಿ, ಸೇನೆಯನ್ನು ದುರ್ಬಳಕೆ ಮಾಡಿ ಗುಂಡಿ ಮಳೆಗೆರೆದು ಹತ್ತಿಕ್ಕಿತ್ತು. ಈ ಭೀಕರ ಹತ್ಯಾಕಾಂಡದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಇವರ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳೇ ಆಗಿದ್ದರು.

    1980ರ ದಶಕದಲ್ಲಿ ಕಮ್ಯುನಿಸ್ಟ್ ನಾಯಕರಲ್ಲೊಬ್ಬರಾದ ಹು ಯೊಬಾಂಗ್ ಅವರೂ ರಾಜಕೀಯ ಪಕ್ಷದ ಉದಾರೀಕರಣಕ್ಕೆ ಶ್ರಮಿಸಿದ್ದರು. ಪಕ್ಷ ಪಾರದರ್ಶಕ ನೀತಿ ಅಳವಡಿಸಿಕೊಳ್ಳಬೇಕು ಎಂದು ವಾದಿಸಿದ್ದರು, 1989ರಲ್ಲಿ ಅವರು ಮೃತಪಟ್ಟ ನಂತರ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆನಂತರ ವಿದ್ಯಾರ್ಥಿಗಳು ಕೂಡ ಉಗ್ರ ಪ್ರತಿಭಟನೆಯಲ್ಲಿ ತೊಡಗಿದಾಗ ಹತ್ಯಾಕಾಂಡವೇ ನಡೆದುಹೋಗಿತ್ತು. ಈ ಘಟನೆಯಲ್ಲಿ ಎರಡು ಸಾವಿರಕ್ಕಿಂತೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದಷ್ಟೇ ಬಹಿರಂಗವಾಗಿದೆಯೇ ವಿನಾ, ಸಾವಿನ ಸಂಖ್ಯೆ ಅಪಾರಪ್ರಮಾಣದ್ದಾಗಿದ್ದು, ಈ ಬಗ್ಗೆ ಮಾಮೂಲಿನಂತೆ ಚೀನಾ ಸರ್ಕಾರ ಯಾವುದೇ ವಿವರಗಳನ್ನು ಕೊಟ್ಟಿಲ್ಲ ಎನ್ನಲಾಗುತ್ತಿದೆ.

    ಚೀನಾದ ಭೀಕರ ದಾಳಿಗೆ ಒಳಗಾಗಿರುವ ಇವರೆಲ್ಲರ ಆತ್ಮ ಇಂಥದ್ದೊಂದು ವಿಚಿತ್ರ ಶಬ್ದ ಮಾಡುತ್ತಿದೆಯೇ ಎಂಬ ಬಗ್ಗೆ ಕೆಲವರು ಸಂದೇಹ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಹತ್ಯಾಕಾಂಡ ನಡೆದದ್ದು 1989ರ ಜೂನ್‌ ತಿಂಗಳಿನಲ್ಲಿ. ಅದೇ ಸಮಯದಲ್ಲಿ ಇಂಥದ್ದೊಂದು ಶಬ್ದ ಬರುತ್ತಿರುವುದು ಅವರ ವಾದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಇದೇ ರೀತಿಯ ನರಮೇಧ 70 ವರ್ಷಗಳಿಂದಲೂ ನಡೆಯುತ್ತಿದ್ದು, ಇಂದಿಗೂ ಇದು ಮುಂದುವರೆದಿದೆ. ಇವರೆಲ್ಲರ ಆತ್ಮವೇ ಇಲ್ಲಿ ಈ ರೀತಿ ಕೂಗುತ್ತಿದೆ ಎನ್ನುವುದು ಅವರ ವಾದ.

    ಆದರೆ ಕೆಲವರು ತಾವು ಈ ಶಬ್ದದ ಬಗ್ಗೆ ಅಧ್ಯಯನ ನಡೆಸಿದ್ದು, ಇದು ಹಕ್ಕಿ ಮಾಡುತ್ತಿರುವ ಶಬ್ದ ಎಂದಿದ್ದಾರೆ. ಹಳದಿ ಕಾಲಿನ ಬಟನ್ ಕ್ವಿಲ್ ಎಂಬ ಚಿಕ್ಕ ಪಕ್ಷಿ ಈ ರೀತಿ ಶಬ್ದ ಮಾಡುತ್ತಿದೆ ಎನ್ನುವುದು ಅವರ ವಾದ. ಹೆಣ್ಣು ಹಕ್ಕಿ ಸಂತಾನೋತ್ಪತ್ತಿ ಅವಧಿಯಲ್ಲಿ ಪುರುಷನನ್ನು ಆಕರ್ಷಿಸಲು ಪ್ರಯತ್ನಿಸುತ್ತದೆ. ಸುಮಾರು 100 ಮೀಟರ್ ದೂರಕ್ಕೆ ಕೇಳುವಂಥ ಶಬ್ದವನ್ನು ಮಾಡುತ್ತದೆ. ಈ ಸಮಯದಲ್ಲಿ ಹೆಣ್ಣು ಹಕ್ಕಿ ಗಂಡು ಹಕ್ಕಿಗೆ ಆಹಾರವನ್ನು ಸಂಗ್ರಹಿಸುತ್ತದೆ ಮತ್ತು ಮೊಟ್ಟೆಗಳನ್ನು ಹಾಕಿದ ನಂತರ ಗೂಡನ್ನು ಬಿಡುತ್ತದೆ. ಇಂಥ ಸಮಯದಲ್ಲಿ ಬರುವ ಶಬ್ದ ಇದು ಎಂದು ಹೇಳಿದ್ದಾರೆ. ಆದರೆ ಆ ಹಕ್ಕಿಯ ವಿವರಣೆಯಲ್ಲಿ ಇಂಥದ್ದೊಂದು ಭಯಾನಕ ಶಬ್ದದ ಬಗ್ಗೆ ಬೇರೆಡೆ ಉಲ್ಲೇಖ ಸಿಗುವುದಿಲ್ಲ.

    ಆದರೆ ಎಲ್ಲರೂ ಒಂದೊಂದು ವಾದ ಮಾಡುತ್ತಿದ್ದರೂ ನಿಜವಾದ ವಾದ ಯಾವುದು ಎಂಬ ಬಗ್ಗೆ ಇದುವರೆಗೆ ಖಚಿತವಾಗಿರುವ ಮಾಹಿತಿ ಸಿಕ್ಕಿಲ್ಲ.

    ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟು ಬಚಾವ್ ಆಗಿದ್ದ ಪಡ್ಡೆ ಹುಡುಗರು ಏನಾದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts