More

    ಮಹಾದೇವ ಈಶ್ವರ ದೇವಾಲಯ ವಾರ್ಷಿಕೋತ್ಸವ

    ಸುಂಟಿಕೊಪ್ಪ: ಕೆದಕಲ್-ನೇಗದಾಳು ಗ್ರಾಮದಲ್ಲಿನ ಮಹಾದೇವ ಈಶ್ವರ ದೇವಾಲಯದ 8ನೇ ವಾರ್ಷಿಕೋತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

    ದೇವಾಲಯದ ಪ್ರಧಾನ ಅರ್ಚಕ ಅವಿನಾಶ್ ಆರಾಧ್ಯ ಅವರ ನೇತೃತ್ವದಲ್ಲಿ ಗರ್ಭಗುಡಿಯ ಶುದ್ಧಪೂಜೆ ನೆರವೇರಿತು. ನಂತರ ಕೆರೆಯಿಂದ ಗಂಗಾಜಲ ತಂದು ಕುಂಭಪೂಜೆ ಮಾಡಲಾಯಿತು. ನಂತರ ಗಣಪತಿ ಹೋಮ, ರುದ್ರಾಭಿಷೇಕ, ಹೂವಿನ ಪೂಜೆ, ನೈವೇದ್ಯ ಪೂಜೆ ನಡೆಯಿತು.

    ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೆದಕಲ್, ಸುಂಟಿಕೊಪ್ಪ, ಬಾಳೆಕಾಡು, ಗದ್ದೆಹಳ್ಳ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪೂಜಾ ಕೈಂಕಾರ್ಯಗಳಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts