More

    ರಾಜನ ಪ್ರೇಯಸಿಯ ನಗ್ನ ಚಿತ್ರಗಳು ಸೋರಿಕೆ! ಈ ಕುತಂತ್ರದ ಹಿಂದಿದೆ ದೊಡ್ಡದೊಂದು ಉದ್ದೇಶ

    ಬ್ಯಾಂಗ್ಕಾಕ್​: ಥೈಲ್ಯಾಂಡ್​ನ ರಾಜ ಮಹಾ ವಾಜಿರಲಾಂಗ್‌ಕಾರ್ನ್‌ನ ಬಗ್ಗೆ ನೀವು ಕೇಳಿರುತ್ತೀರಿ. ನಾಲ್ಕು ಹೆಂಡತಿಯರೊಂದಿಗೆ ಓರ್ವ ಪ್ರೇಯಸಿಯನ್ನು ಹೊಂದಿರುವ ಈತ ದೇಶ ವಿದೇಶಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ವ್ಯಕ್ತಿ. ಇದೀಗ ಈತನ ಗರ್ಲ್​ಫ್ರೆಂಡ್​ ಸಿನೀನಾತ್ ವೊಂಗ್ವಾಜಿರಾಪಕ್ಡಿ ದೊಡ್ಡದೊಂದು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಈಗಾಗಲೇ ಜೈಲು ವಾಸ ಅನುಭವಿಸಿ ಬಂದಿರುವ ಸಿನೀನಾತ್​ನ ನಗ್ನ ಚಿತ್ರಗಳು ರಾಜಪ್ರಭುತ್ವ ವಿರೋಧಿ ಜನರ ಕೈಗೆ ಸೇರಿದೆ.

    ಇದನ್ನೂ ಓದಿ: ವಾಟರ್​ ಟ್ಯಾಂಕ್​ನಲ್ಲಿತ್ತು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!

    ರಾಜಪ್ರಭುತ್ವ ವಿರೋಧ ಮಾಡುತ್ತಿರುವ ಅನೇಕರ ಕೈಗೆ ಸಿನೀನಾತ್​ ಅವರ ಸಾವಿರಾರು ಖಾಸಗಿ ಚಿತ್ರಗಳು ಸಿಕ್ಕಿವೆ. ಸುಮಾರು 1,400 ಚಿತ್ರಗಳು ಸಿಕ್ಕಿವೆ ಎನ್ನಲಾಗಿದ್ದು, ಇದರಲ್ಲಿ ನೂರಾರು ಚಿತ್ರಗಳು ನಗ್ನ ಚಿತ್ರಗಳಾಗಿವೆ ಎನ್ನಲಾಗಿದೆ. ಈ ಫೋಟೋಗಳನ್ನು ಸಿನೀನಾತ್​, ರಾಜ ವಾಜಿರಲಾಂಗ್‌ಕಾರ್ನ್‌ ಗೆ ಕಳುಹಿಸಿಲು ತೆಗೆದುಕೊಂಡಿದ್ದು ಎನ್ನಲಾಗಿದೆ. 2012ರಿಂದ 2014ರ ವೇಳೆಯಲ್ಲಿ ತೆಗೆಯಲಾಗಿರುವ ಈ ಚಿತ್ರಗಳು ಇದೀಗ ಸಾರ್ವಜನಿಕವಾಗಿ ಹರಿದಾಡಲಾರಂಭಿಸಿವೆ.

    ಥಾಯ್ ರಾಜಪ್ರಭುತ್ವದ ಬಗ್ಗೆ ವಿಮರ್ಶಾತ್ಮಕ ಲೇಖನಗಳನ್ನು ಬರೆದ ಬ್ರಿಟಿಷ್ ಪತ್ರಕರ್ತ ಆಂಡ್ರ್ಯೂ ಮ್ಯಾಕ್ಗ್ರೆಗರ್ ಮಾರ್ಷಲ್​ ಅವರ ಕೈಗೂ ಫೋಟೋಗಳು ಸಿಕ್ಕಿವೆ. ಈ ಕುರಿತಾಗಿ ಮಾಷ್ಳ್​ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ ಕೂಡ. ರಾಜಪ್ರಭುತ್ವವನ್ನು ಟೀಕಿಸಿ ಥೈಲ್ಯಾಂಡ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಪವಿನ್ ಚಚವಾಲ್ಪೊಂಗ್‌ಪುನ್ ಅವರಿಗೂ ಚಿತ್ರಗಳನ್ನು ಕಳುಹಿಸಿಕೊಡಲಾಗಿದೆ.

    ಇದನ್ನೂ ಓದಿ: ಲಂಡನ್​ ವೈರಸ್​ನಿಂದಾಗಿ ಮುಂಬೈನಂತೆ ಇಲ್ಲೂ ನೈಟ್​ ಕರ್ಫ್ಯೂ ಇರತ್ತಾ? ಸಿಎಂ ಏನೆಂದ್ರು ಕೇಳಿ…

    ಸಿನೀನಾತ್​ ಅವರು ಕಳೆದ ವರ್ಷ ಜೈಲು ಸೇರಿದ್ದರು. ನಾಲ್ಕನೇ ಹೆಂಡತಿ ರಾಣಿ ಸುಥಿದಾ ಅವರನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಿನೀನಾತ್​ ಅವರನ್ನು ವಾಜಿರಲಾಂಗ್‌ಕಾರ್ನ್‌ ಕುಟುಂಬಕ್ಕೆ ಸೇರಿಸಿಕೊಂಡಿದ್ದರು. ಜೈಲು ಸೇರಿದ ಆಕೆ ಇದೀಗ ಬಿಡುಗಡೆಯಾಗಿ ಬಂದಿದ್ದಾರೆ. ಜೈಲುವಾಸ ಅನುಭವಿಸಿದರೂ ಆಕೆಗೆ ಮತ್ತೊಮ್ಮೆ ರಾಜಮನೆತನದ ಗೌರವ ಕೊಡಲು ವಾಜಿರಲಾಂಗ್‌ಕಾರ್ನ್‌ ಸಿದ್ಧವಾಗಿದ್ದಾರೆ. ಇದನ್ನು ತಪ್ಪಿಸಬೇಕು ಎನ್ನುವ ಕಾರಣದಿಂದಲೇ ಆಕೆಯ ನಗ್ನ ಚಿತ್ರಗಳನ್ನು ಸಾರ್ವಜನಿಕಗೊಳಿಸಲಾಗಿದೆ ಎನ್ನಲಾಗಿದೆ. ಯಾರಿಂದ ಈ ಫೋಟೋಗಳು ಸಾರ್ವಜನಿಕವಾದವು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. (ಏಜೆನ್ಸೀಸ್​)

    ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts