More

    ಲಂಡನ್​ ವೈರಸ್​ನಿಂದಾಗಿ ಮುಂಬೈನಂತೆ ಇಲ್ಲೂ ನೈಟ್​ ಕರ್ಫ್ಯೂ ಇರತ್ತಾ? ಸಿಎಂ ಏನೆಂದ್ರು ಕೇಳಿ…

    ಬೆಂಗಳೂರು: ಚೀನಾದ ಕರೊನಾ ವೈರಸ್​ ಭೀತಿಯ ನಡುವೆಯೇ ಇದೀಗ ಲಂಡನ್​ ಕೋವಿಡ್​ ದೇಶಾದ್ಯಂತ ಸಂಚಲನ ಮೂಡಿಸಿದೆ. ಲಂಡನ್​ ವೈರಸ್​ ಇದಾಗಲೇ ಚೆನ್ನೈ ವ್ಯಕ್ತಿಯಲ್ಲಿ ಪತ್ತೆಯಾಗಿರುವುದು ಕೂಡ ಭಾರಿ ಆತಂಕಕ್ಕೆ ಕಾರಣವಾಗಿದೆ.

    ಇದಾಗಲೇ ಮುಂಜಾಗರೂಕತಾ ಕ್ರಮವಾಗಿ ಮುಂಬೈನಲ್ಲಿ ರಾತ್ರಿಯ ವೇಳೆ ಕರ್ಫ್ಯೂ ಜಾರಿ ಮಾಡಲಾಗಿದೆ. ಹೊಸ ವರ್ಷಾಚರಣೆ ಸೇರಿದಂತೆ ರಾತ್ರಿಯ ವೇಳೆ ಯಾವುದೇ ರೀತಿಯಲ್ಲಿ ಆಚರಣೆ ಮಾಡದಂತೆ ಕೆಲ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರ ಮಧ್ಯೆಯೇ ಕೆಲವು ರಾಜ್ಯಗಳು ಕೂಡ ನೈಟ್​ ಕರ್ಫ್ಯೂಗೆ ಚಿಂತನೆ ನಡೆಸುತ್ತಿದೆ.

    ಇದೇ ರೀತಿ ಕರ್ನಾಟಕದಲ್ಲಿಯೂ ರಾತ್ರಿಯ ವೇಳೆ ಕರ್ಫ್ಯೂ ಇರತ್ತಾ ಎನ್ನುವ ಪ್ರಶ್ನೆ ಕಾಡಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಉತ್ತರಿಸಿದ್ದು, ಮುಂಬೈ ಮಾದರಿಯಲ್ಲಿ ನಮ್ಮ ರಾಜ್ಯಕ್ಕೆ ನೈಟ್​ ಕರ್ಫ್ಯೂ ಜಾರಿ ಅವಶ್ಯಕತೆ ಇಲ್ಲ. ಹೊರದೇಶಗಳಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ನೋಡಿ ಪರಿಶೀಲಿಸಿ ತಪಾಸಣೆ ಮಾಡುವ ಕಾರ್ಯ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಎಚ್ಚರಿಕೆ ವಹಿಸುತ್ತಿದ್ದೇವೆ. ಜನರು ಕೂಡ ತೀವ್ರ ಎಚ್ಚರಿಕೆಯಿಂದ ಇರುವಂತೆ ಅವರು ಸೂಚಿಸಿದ್ದಾರೆ. ಅದನ್ನು ಪಾಲನೆ ಮಾಡಿ, ಸದ್ಯ ರಾತ್ರಿಯ ವೇಳೆ ಕರ್ಫ್ಯೂ ವಿಧಿಸಲ್ಲ ಎಂದರು.

    ಅದೇ ವೇಳೆ, ಹೊಸ ವರ್ಷಾಚರಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಿಡುವುದಿಲ್ಲ ಎಂದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಬೇಕಿರುವ ಎಚ್ಚರಿಕೆ ವಹಿಸುತ್ತೇವೆ. ಜನರು ಅವರ ಎಚ್ಚರಿಕೆಯಿಂದ ಇರಬೇಕು. ಇಂಥ ಕಠಿಣ ಸ್ಥಿತಿಯಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ಹೀಗಾಗಿ ಜಾಗರೂಕರಾಗಿರಿ ಎಂದರು.

    ಹೊಸ ರೂಪದ ಕರೊನಾದಿಂದಾಗಿ ಜನವರಿ 1ರಿಂದ ಶಾಲೆಗಳ ಆರಂಭದ ಬಗ್ಗೆಯೂ ಮತ್ತೊಮ್ಮೆ ಚಿಂತನೆ ಶುರು ಮಾಡಲಾಗಿದೆ.

    ಹೋಂವರ್ಕ್​ ಇಲ್ಲ, ಶಿಕ್ಷೆಯೂ ಇಲ್ಲ… 30 ಗಂಟೆಯ ‘ಪವಾಡ’: ಶಾಲೆಯಲ್ಲಿ ಆಗದ್ದು ಇಲ್ಲಿ ಸಾಧ್ಯವಾಗಿದೆ!

    ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

    ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts