More

    PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಬ್ಯಾಂಕಾಕ್​: ಥೈಲ್ಯಾಂಡ್​ ಮಹಾರಾಜ ವಾಜಿರಲಾಂಗ್‌ಕಾರ್ನ್‌ನ ಪತ್ನಿ ಸಿನೀನಾತ್ ವೊಂಗ್ವಾಜಿರಾಪಕ್ಡಿಯ ಅಶ್ಲೀಲ ಫೋಟೋಗಳು ನನ್ನ ಬಳಿ ಇವೆ ಎಂದು ಹೇಳಿಕೊಂಡಿರುವ ಥೈಲ್ಯಾಂಡ್​ ಕಾರ್ಯಕರ್ತರೊಬ್ಬರು ಕೆಲ ಫೋಟೋಗಳನ್ನು ಡೈಲಿ ಮೇಲ್​ ಆನ್​ಲೈನ್​ ನ್ಯೂಸ್​ ವೆಬ್​ಸೈಟ್​ ಜತೆ ಶೇರ್​ ಮಾಡಿಕೊಂಡಿದ್ದಾರೆ.

    ರಾಜನ ಪತ್ನಿಯ ಒಟ್ಟು 1400 ಫೋಟೋಗಳು ಸೋರಿಕೆಯಾಗಿರುವ ವಿಚಾರ ಈ ವಾರ ಭಾರಿ ಸುದ್ದಿಯಾಗಿದ್ದು, ಫೋಟೋಗಳಿಂದಾಗಿ ರಾಜ ವಾಜಿರಲಾಂಗ್‌ಕಾರ್ನ್‌ ಪತ್ನಿ ಹಾಗೂ ರಾಣಿ ಸುಥಿದಾ ಮತ್ತು ರಾಜನ ಉಪಪತ್ನಿಯರ ನಡುವಿನ ಒಳಜಗಳಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!

    PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಈಗಾಗಲೇ ಜೈಲು ವಾಸ ಅನುಭವಿಸಿ ಮರಳಿ ರಾಜನ ಆಶ್ರಯ ಸೇರಿರುವ ಸಿನೀನಾತ್​ನ ನಗ್ನ ಚಿತ್ರಗಳು ರಾಜಪ್ರಭುತ್ವ ವಿರೋಧಿ ಜನರ ಕೈಗೆ ಸೇರಿದೆ. ಸುಮಾರು 1,400 ಚಿತ್ರಗಳು ಸಿಕ್ಕಿವೆ ಎನ್ನಲಾಗಿದ್ದು, ಇದರಲ್ಲಿ ನೂರಾರು ಚಿತ್ರಗಳು ನಗ್ನ ಚಿತ್ರಗಳಾಗಿವೆ. ಈ ಫೋಟೋಗಳನ್ನು ಸಿನೀನಾತ್​, ರಾಜ ವಾಜಿರಲಾಂಗ್‌ಕಾರ್ನ್‌ ಗೆ ಕಳುಹಿಸಿಲು ತೆಗೆದುಕೊಂಡಿದ್ದು ಎನ್ನಲಾಗಿದೆ. 2012ರಿಂದ 2014ರ ವೇಳೆಯಲ್ಲಿ ತೆಗೆಯಲಾಗಿರುವ ಈ ಚಿತ್ರಗಳು ಇದೀಗ ಸಾರ್ವಜನಿಕವಾಗಿ ಹರಿದಾಡಲಾರಂಭಿಸಿವೆ.

    ಇದನ್ನೂ ಓದಿ: ಲವ್ವರ್​ ವಿರುದ್ಧ ದೂರು ಕೊಡಲು ಪೀಡಿಸಿದ ತಂದೆ: ಠಾಣೆಯ ಬಾತ್​ರೂಮ್​ಗೆ ಹೋದ ಹುಡುಗಿಯಿಂದ ಬಿಗ್​ ಶಾಕ್​!

    PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಈ ಬಗ್ಗೆ ಡೈಲಿ ಮೇಲ್​ ಜತೆ ಮಾತನಾಡಿರುವ ಜಪಾನ್​ನ ಪ್ರಮುಖ ರಾಜ ವಿಮರ್ಶಕ ಹಾಗೂ ರಾಜಪ್ರಭುತ್ವವನ್ನು ಟೀಕಿಸಿ ಥೈಲ್ಯಾಂಡ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಪವಿನ್ ಚಚವಾಲ್ಪೊಂಗ್‌ಪುನ್, ನಗ್ನ ಫೋಟೋಗಳನ್ನು ಅನಾಮಧೇಯನ ಹೆಸರಿನಲ್ಲಿ ಎಸ್​ಡಿ ಕಾರ್ಡ್​ ಜತೆಗೆ ಪತ್ರವೊಂದರ ಮೂಲಕ ಕಳೆದ ಆಗಸ್ಟ್​ನಲ್ಲಿ ನನಗೆ ಕಳುಹಿಲಾಗಿತ್ತು. ಸಿನೀನಾತ್​ ಜೈಲಿನಲ್ಲಿರುವಾಗ ಆಕೆಯ ಫೋನ್​ ಹ್ಯಾಕ್​ ಮಾಡಿ ಫೋಟೋಗಳನ್ನು ಪಡದುಕೊಳ್ಳಲಾಗಿತ್ತು ಎಂದು ಪತ್ರದಲ್ಲಿ ಬರೆಯಲಾಗಿತ್ತು ಎಂದು ಪವಿನ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

    PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಸಿನೀತಾತ್​ ರಾಜನ ಆಶ್ರಯಕ್ಕೆ ಮರಳದಿರುವಂತೆ ತಡೆಯುವ ಕುತಂತ್ರ ಇದರ ಹಿಂದಿತ್ತು ಎನ್ನಲಾಗಿದೆ. ರಾಜನ ಪತ್ನಿ ಹಾಗೂ ರಾಣಿ ಸುಥಿದಾ ಕೈವಾಡ ಇದರಲ್ಲಿ ಕೇಳಿಬಂದಿದ್ದು, ಸಿನೀತಾತ್​ ವಿರೋಧಿ ಗುಂಪುಗಳಿಗೆ ನಗ್ನ ಫೋಟೋಗಳನ್ನು ಕಳುಹಿಸುವ ಮೂಲಕ ಸಿನೀತಾತ್​ ವ್ಯಕ್ತಿತ್ವ ಹರಣಕ್ಕೆ ರಾಣಿ ಸುಥಿದಾ ಬಯಸಿದ್ದಳು ಎನ್ನಲಾಗಿದೆ. ವಿಮರ್ಶಕ ಪವಿನ್​ ಹೇಳುವಂತೆ ರಾಜಪ್ರಭುತ್ವದ ಇನ್ನೊಂದು ಮುಖವಾಡವನ್ನು ತೋರಿಸುವ ಸಲುವಾಗಿ ಕೆಲವು ಫೋಟೋಗಳನ್ನು ನಾನು ಹಂಚಿಕೊಂಡಿದ್ದೇನೆಂದು ಡೈಲಿ ಮೇಲ್​ಗೆ ತಿಳಿಸಿದ್ದಾರೆ.

    ಕೆಲವೊಂದು ಚಿತ್ರಗಳಲ್ಲಿ ಸಿನೀತಾತ್​ ಸಂಪೂರ್ಣ ನಗ್ನವಾಗಿದ್ದರೆ, ಅನೇಕ ಫೋಟೋಗಳಲ್ಲಿ ತುಂಡುಡುಗೆ ತೊಟ್ಟು, ಶೇವ್​ ಮಾಡಿರದ ಕಂಕುಳನ್ನು ಪ್ರದರ್ಶಿಸಿರುವ ಫೋಟೋಗಳಿವೆ. ಎಲ್ಲ ಫೋಟೋಗಳು ಸಹ ಸೆಲ್ಫಿ ಮಾದರಿಯಾಗಿದ್ದು, ಕೆಲವೊಂದು ಬಾತ್​ರೂಮ್​ ಅಥವಾ ಆಕೆಯ ಕಾರಿನಲ್ಲಿ ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿ: ಹೋಟೆಲ್​ ರೂಂನ ಬೆಡ್​ಶೀಟ್​ನಲ್ಲಿ ಹೆಂಡತಿಯ ಮೃತದೇಹ ಸುತ್ತಿಟ್ಟು ಪರಾರಿಯಾದ ಗಂಡ! ಬಾಗಿಲು ತೆರೆದ ಸಿಬ್ಬಂದಿಗೆ ಕಾದಿತ್ತು ಶಾಕ್​!

    PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಹ್ಯಾಕ್​ ಮಾಡಿ ಫೋಟೋಗಳನ್ನು ಪಡೆದುಕೊಂಡಿದ್ದ ಹ್ಯಾಕರ್​ ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅನಿಸುತ್ತಿದೆ. ಇದೀಗ ಸಿನೀತಾತ್​ ಜೈಲಿನಿಂದ ಬಿಡುಗಡೆಯಾಗಿ ಮರಳಿ ರಾಜನ ಆಶ್ರಯ ಸೇರಿರುವ ಸರಿಯಾದ ಸಮಯವನ್ನು ನೋಡಿ ಎಲ್ಲವನ್ನು ಬಹಿರಂಗ ಮಾಡಿದ್ದಾನೆ. ಇದೊಂದು ಕಾಕತಾಳೀಯ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಪವಿನ್​ ಹೇಳಿದ್ದಾರೆ.

    ಇನ್ನ ಥಾಯ್ ರಾಜಪ್ರಭುತ್ವದ ಬಗ್ಗೆ ವಿಮರ್ಶಾತ್ಮಕ ಲೇಖನಗಳನ್ನು ಬರೆದ ಬ್ರಿಟಿಷ್ ಪತ್ರಕರ್ತ ಆಂಡ್ರ್ಯೂ ಮ್ಯಾಕ್ಗ್ರೆಗರ್ ಮಾರ್ಷಲ್​ ಅವರ ಕೈಗೂ ಫೋಟೋಗಳು ಸಿಕ್ಕಿವೆ. ಈ ಕುರಿತಾಗಿ ಮಾಷ್ಳ್​ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ ಕೂಡ.

    ಇದನ್ನೂ ಓದಿ: ಚೀನಾ ಮಹಿಳೆಯಿಂದ ಹನಿಟ್ರ್ಯಾಪ್: ಸುಂದರಿಯ ಬಲೆಗೆ ಬಿದ್ದವರ್ಯಾರು?

    PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಸಿನೀನಾತ್​ ಅವರು ಕಳೆದ ವರ್ಷ ಜೈಲು ಸೇರಿದ್ದರು. ನಾಲ್ಕನೇ ಹೆಂಡತಿ ರಾಣಿ ಸುಥಿದಾ ಅವರನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಿನೀನಾತ್​ ಅವರನ್ನು ವಾಜಿರಲಾಂಗ್‌ಕಾರ್ನ್‌ ಕುಟುಂಬಕ್ಕೆ ಸೇರಿಸಿಕೊಂಡಿದ್ದರು. ಜೈಲು ಸೇರಿದ ಆಕೆ ಇದೀಗ ಬಿಡುಗಡೆಯಾಗಿ ಬಂದಿದ್ದಾರೆ. ಜೈಲುವಾಸ ಅನುಭವಿಸಿದರೂ ಆಕೆಗೆ ಮತ್ತೊಮ್ಮೆ ರಾಜಮನೆತನದ ಗೌರವ ಕೊಡಲು ವಾಜಿರಲಾಂಗ್‌ಕಾರ್ನ್‌ ಸಿದ್ಧವಾಗಿದ್ದಾರೆ. ಇದನ್ನು ತಪ್ಪಿಸಬೇಕು ಎನ್ನುವ ಕಾರಣದಿಂದಲೇ ಆಕೆಯ ನಗ್ನ ಚಿತ್ರಗಳನ್ನು ಸಾರ್ವಜನಿಕಗೊಳಿಸಲಾಗಿದೆ ಎನ್ನಲಾಗಿದೆ. ಯಾರಿಂದ ಈ ಫೋಟೋಗಳು ಸಾರ್ವಜನಿಕವಾದವು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts