More

    ಉದಯ ಶಂಕರ ಪುರಾಣಿಕ ಅವರಿಗೆ ಮಾಗನೂರು ಬಸಪ್ಪ ಪ್ರಶಸ್ತಿ

    ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುವ 2020ನೇ ಸಾಲಿನ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಗೆ ಮೂಲತಃ ಕೊಪ್ಪಳ ಜಿಲ್ಲೆಯಯವರಾದ ಸಾಹಿತಿ ಹಾಗೂ ವಿಜ್ಞಾನಿ ಡಾ. ಉದಯಶಂಕರ ಪುರಾಣಿಕ ಆಯ್ಕೆಯಾಗಿದ್ದಾರೆ.

    30 ದೇಶಗಳಲ್ಲಿ ಕನ್ನಡ ನಾಡು-ನುಡಿ ಶಿಕ್ಷಣ ಮತ್ತು ಪ್ರಚಾರ ಕೆಲಸದಲ್ಲಿ ತೊಡಗಿರುವ ಡಾ. ಉದಯಶಂಕರ ಪುರಾಣಿಕ ಅವರ ಸೇವೆ ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…

    ಪುರಾಣಿಕ ಅವರು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಬಿಗ್ ಡೇಟಾ, ಮಷಿನ್ ಲರ್ನಿಂಗ್, ಸೈಬರ್ ಅಪರಾಧಗಳ ವಿಧಿ ವಿಜ್ಞಾನ ತಂತ್ರಜ್ಞಾನ, ಮೊಬೈಲ್ ತಂತ್ರಾಂಶಗಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಶ್ರಮಿಸಿದ್ದಾರೆ. ಕನ್ನಡದ ಹಸ್ತಪ್ರತಿಗಳು, ಅಪರೂಪದ ಪುಸ್ತಕಗಳು, ತಾಳೆಗರಿ ಇವುಗಳ ಮೂಲ ಪ್ರತಿಗೆ ಧಕ್ಕೆಯಾಗದಂತೆ ಡಿಜಿಟಲ್ ರೂಪಕ್ಕೆ ತರಲು ಕೋಲ್ಡ್ ಸ್ಕ್ಯಾನಿಂಗ್ ತಂತ್ರಜ್ಞಾನ ಹಾಗೂ ಕನ್ನಡ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದಾರೆ. 2600 ಲೇಖನ ಬರೆದಿದ್ದಾರೆ. 1200 ವಚನಗಳು, 4 ಪುಸ್ತಕಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

    ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು 50 ಸಾವಿರ ರೂ. ಮೊತ್ತ ಹಾಗೂ ಸ್ಮರಣಿಕೆ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂಗಮೇಶ್ವರಗೌಡ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಕಸಾಪ ಅಧ್ಯಕ್ಷರಾದ ಲಿಂಗಯ್ಯ ಬಿ.ಹಿರೇಮಠ, ರಾಜಶೇಖರ ಅಂಗಡಿ, ಕಸಾಪ ದಾವಣಗೆರೆ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎ.ಆರ್.ಉಜ್ಜನಪ್ಪ ಭಾಗವಹಿಸಲಿದ್ದಾರೆ.

    ಮೇ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆ?; ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಟಾಲಿವುಡ್​ ವಿರುದ್ಧ ಸಿಡಿದೆದ್ದ ನಟ ದರ್ಶನ್​, ಫಿಲಂ ಚೇಂಬರ್​ಗೆ​ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts