More

    ಮಾಧ್ವ ವಿವಿ ಕೇಂದ್ರವಾಗಿ ಇನ್ನಂಜೆ

    ಶಿರ್ವ: ಉಡುಪಿ ಶ್ರೀ ಸೋದೆ ಮಠದ ಮೂಲಕ ಶೈಕ್ಷಣಿಕವಾಗಿ ದತ್ತು ಪಡೆದುಕೊಂಡಿರುವ ಇನ್ನಂಜೆ ಗ್ರಾಮದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೆಜಿಯಿಂದ ಪಿಜಿಯವರೆಗಿನ ಶಿಕ್ಷಣ ಒದಗಿಸುವುದೇ ಶ್ರೀ ಮಠದ ಮುಖ್ಯ ಉದ್ದೇಶವಾಗಿದೆ. ಆ ಮೂಲಕ ಮುಂದಿನ ಹತ್ತು ವರ್ಷದಲ್ಲಿ ಇನ್ನಂಜೆ ಗ್ರಾಮವನ್ನು ಮಾಧ್ವ ಯುನಿವರ್ಸಿಟಿ ಕೇಂದ್ರವನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಲಾಗಿದೆ ಎಂದು ಉಡುಪಿ ಸೋದೆ ಮಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

    ಇನ್ನಂಜೆ ಎಸ್.ವಿ.ಎಚ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜಾ ಪೂರ್ವಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

    ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಎಸ್.ವಿ.ಎಚ್ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿ ಹಾಗೂ ದಾನಿ ಪದ್ಮನಾಭ ಭಟ್ ಬಿಳಿಯಾರು, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ್ ವಾಗ್ಳೆ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಿ.ಜಿ. ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರಪುರ, ಗಣ್ಯರಾದ ಉದಯ ಶೆಟ್ಟಿ, ರವಿವರ್ಮ ಶೆಟ್ಟಿ, ದಿವ್ಯೇಶ್ ಶೆಟ್ಟಿ, ರಾಮಕೃಷ್ಣ ಶರ್ಮ ಬಂಟಕಲ್ಲು, ಶಂಕರಪುರ ರೋಟರಿ ಕ್ಲಬ್ ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ನಿಕಟಪೂರ್ವಾಧ್ಯಕ್ಷ ಸಂದೀಪ್ ಬಂಗೇರ, ಇಂಜಿನಿಯರ್ ಭಗವಾನ್‌ದಾಸ್, ಗುತ್ತಿಗೆದಾರ ಶಶಿಧರ್, ಪಿಟಿಎ ಅಧ್ಯಕ್ಷ ಚಂದ್ರ ಪೂಜಾರಿ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥೆ ಕೀರ್ತಿ ಪೈ ಮೊದಲಾದವರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ರತ್ನ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಇನ್ನಂಜೆ ಎಸ್.ವಿ.ಎಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪುಂಡರೀಕಾಕ್ಷ ಕೊಡಂಚ ಸ್ವಾಗತಿಸಿದರು. ಪ್ರೌಢ ಶಾಲಾ ಮುಖ್ಯಶಿಕ್ಷಕ ನಟರಾಜ ಉಪಾಧ್ಯಾಯ ವಂದಿಸಿದರು.

    ಒಂದು ಊರಿಗೆ ದೇವಸ್ಥಾನ ಹೇಗೆ ಮುಖ್ಯವೋ, ಶಾಲೆಯೂ ಅಷ್ಟೇ ಮುಖ್ಯವಾಗಿದೆ. ಇನ್ನಂಜೆ ಗ್ರಾಮದಲ್ಲಿ 1943ರಲ್ಲಿ ಪ್ರಾರಂಭಗೊಂಡಿರುವ ಎಸ್.ವಿ.ಎಚ್ ಸಮೂಹ ಸಂಸ್ಥೆಯು ಊರವರು, ಹಳೇ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ದಾನಿಗಳು ಮತ್ತು ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ 78 ವರ್ಷಗಳಿಂದ ವಿಶಿಷ್ಟ ದಾಖಲೆಯೊಂದಿಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾಗಿ ಬೆಳೆದು ಬಂದಿದೆ. ಭವಿಷ್ಯದಲ್ಲೂ ಸಂಸ್ಥೆಯನ್ನು ಮಾದರಿಯಾಗಿ ಬೆಳೆಸುವ ಇಚ್ಛೆಯಿದೆ.
    ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸೋದೆ ಮಠಾಧಿಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts