More

    ಆನ್​ಲೈನ್​ ಗೇಮ್​ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ! ಅಮ್ಮ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ

    ಭೋಪಾಲ್: ಆನ್​ಲೈನ್ ಗೇಮ್​ಗಳಿಂದ ಹಣ ಪಡೆದುಕೊಂಡವರಿಗಿಂತ ಹಣ ಕಳೆದುಕೊಂಡವರೇ ಜಾಸ್ತಿ ಎನ್ನಲಾಗುತ್ತದೆ. ಈಗಿನ ಚಿಕ್ಕ ಮಕ್ಕಳೂ ಆನ್​ಲೈನ್ ಆಟದ ಚಟಕ್ಕೆ ಬಿದ್ದುಬಿಟ್ಟಿದ್ದಾರೆ. ಅದೇ ರೀತಿ ಆನ್​​ಲೈನ್ ಆಟದ ಹುಚ್ಚಿಗೆ ಬಿದ್ದು, 40 ಸಾವಿರ ರೂಪಾಯಿ ಕಳೆದುಕೊಂಡ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಛತಾರ್ ಪುರ್ ಜಿಲ್ಲೆಯಲ್ಲಿ ಶಾಂತಿನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಶಾಲೆ ಇಲ್ಲದ ಕಾರಣ ಮನೆಯಲ್ಲೇ ಇರುತ್ತಿದ್ದ 13 ವರ್ಷದ ಬಾಲಕ ಆನ್​ಲೈನ್ ಗೇಮ್ ಆಟವಾಡಲು ಆರಂಭಿಸಿದ್ದಾರೆ. ಫ್ರೀ ಫೈರ್ ಹೆಸರಿನ ಆಟವನ್ನು ಆಡಲಾರಂಭಿಸಿದ್ದಾನೆ. ಆ ಆಟಕ್ಕೆ ಹಂತ ಹಂತವಾಗಿ ಸರಿ ಸುಮಾರು 40 ಸಾವಿರ ರೂಪಾಯಿ ವ್ಯಯಿಸಿದ್ದಾನೆ.

    ಇತ್ತೀಚೆಗೆ ಅದೇ ರೀತಿ ಆಟಕ್ಕೆಂದು ಅಮ್ಮನ ಖಾತೆಯಿಂದ ನೇರವಾಗಿ 1500 ರೂಪಾಯಿ ವಿತ್​​ಡ್ರಾ ಮಾಡಿದ್ದಾನೆ. ಕೆಲಸದಲ್ಲಿದ್ದ ತಾಯಿಯ ಮೊಬೈಲ್​ಗೆ ಅದರ ಮೆಸೇಜ್ ಬಂದಿದೆ. ಅದನ್ನು ಕಂಡ ಆಕೆ ಗಾಬರಿಗೊಂಡು ಮಗನಿಗೆ ಕರೆ ಮಾಡಿದ್ದಾಳೆ. ಆಗ ಆತ ಆನ್​ಲೈನ್ ಗೇಮ್​ಗೆ ಹಣ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಅದಕ್ಕೆ ಆಕೆ ಮಗನಿಗೆ ಬೈದು ಫೋನ್ ಕಟ್ ಮಾಡಿದ್ದಾಳೆ.

    ಆನ್​ಲೈನ್​ ಗೇಮ್​ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ! ಅಮ್ಮ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ

    ಅಮ್ಮ ಬೈದಿದ್ದರಿಂದ ಬೇಜಾರಾದ ಮಗ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾನು ಅಮ್ಮನ ಖಾತೆಯಿಂದ ಆನ್​ಲೈನ್ ಆಟಕ್ಕಾಗಿ 40 ಸಾವಿರ ರೂಪಾಯಿ ತೆಗೆದಿದ್ದಾಗಿ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.(ಏಜೆನ್ಸೀಸ್)

    ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಮೀರಾಗೆ ಆ ಟ್ರಕ್ಸ್​ ಚಾಲಕರು ಬೇಕಂತೆ..

    ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ನಭಾ ನಟೇಶ್: ಬಾಲಿವುಡ್​ ಎಂಟ್ರಿಗೆ ಕನ್ನಡತಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts