More

    ಮಧ್ಯಪ್ರದೇಶ ರಾಜಕೀಯ ಹೈಡ್ರಾಮಕ್ಕೆ ತಾತ್ಕಾಲಿಕ ಬ್ರೇಕ್​: ವಿಶ್ವಾಸಮತ ಯಾಚನೆಗೆ ತಡೆ, ಕರೊನಾ ನೆಪ ಹೇಳಿ ಕಲಾಪ ಮುಂದೂಡಿಕೆ

    ಭೋಪಾಲ್​: ಶಾಸಕರ ರಾಜೀನಾಮೆಯಿಂದ ಪತನದ ಅಂಚಿನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್​ ಸಿಕ್ಕಂತಾಗಿದೆ. ಇಂದು ನಡೆಯಬೇಕಿದ್ದ ವಿಶ್ವಾಸ ಮತ ಯಾಚನೆಯನ್ನು ಅಮಾನತ್ತಿನಲ್ಲಿ ಇಡಲಾಗಿದ್ದು, ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಮಾರ್ಚ್​ 26ರವರೆಗೆ ಕಲಾಪವನ್ನು ಮುಂದೂಡಲಾಗಿದೆ.​

    ಗವರ್ನರ್​ ಲಾಲ್​ಜಿ ಟಂಡನ್​ ನಿರ್ದೇಶನದ ಮೇರೆಗೆ ವಿಶ್ವಾಸಮತ ಯಾಚನೆ ನಡೆಯುತ್ತದೆಯೇ? ಎಂಬ ಪ್ರಶ್ನೆ ವಿಧಾನಸಭೆಯಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಬಹುಮತ ಸಾಬೀತನ್ನು ಮುಂದೂಡಲಾಗಿದೆ.

    ಇದರ ನಡುವೆಯೂ ಇಂದು ವಿಧಾನಸಭೆಗೆ ಆಗಮಿಸಿದ ಗವರ್ನರ್​ ಕಮಲ್​ನಾಥ್​ ಸರ್ಕಾರವನ್ನು ಬಹುಮತ ಸಾಬೀತುಪಡಿಸಲು ಕೇಳಿದರು. ಅಲ್ಲದೆ, ಸನದವನ್ನು ಉದ್ದೇಶಿಸಿ ಮಾತನಾಡುತ್ತಾ ಆರಂಭದಲ್ಲೇ ಎಲ್ಲರೂ ಸಂವಿಧಾನವನ್ನು ಅನುಸರಿಸಬೇಕು ಎಂದರು. ಇದರ ಬೆನ್ನಲ್ಲೇ ಗವರ್ನರ್​ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್​ ಶಾಸಕರು ಸದನವನ್ನು ಗೌರವಿಸಿ ಎಂದರು. ಘೋಷಣೆ ಕೂಗುತ್ತಿದ್ದಂತೆಯೇ ಗವರ್ನರ್​ ಸದನ ಬಿಟ್ಟು ಹೊರನಡೆದರು.

    ಭಾನುವಾರವಷ್ಟೆ ಸಿಎಂ ಕಮಲ್​ನಾಥ್​ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. ಗವರ್ನರ್​ ಕಳುಹಿಸಿದ ಪತ್ರಕ್ಕೆ ಸಾಂವಿಧಾನಿಕ ಸಿಂಧುತ್ವ ಇರುವುದಿಲ್ಲ. ರಾಜ್ಯ ವಿಧಾನಸಭೆಗೆ ಅವರು ನಿರ್ದೇಶಿಸುವಂತಿಲ್ಲ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಎಂದು ಕಾಂಗ್ರೆಸ್​ ಶಾಸಕರುಗಳು ಸಭೆಯಲ್ಲಿ ಸಿಎಂ ಕಮಲ್​ನಾಥ್​ಗೆ ಒತ್ತಾಯಿಸಿದ್ದರು.

    ಬಿಜೆಪಿಯವರು ಕಾಂಗ್ರೆಸ್​ ಶಾಸಕರನ್ನು ಹಿಡಿದಿಟ್ಟುಕೊಂಡಿರುವುದರಿಂದ ವಿಶ್ವಾಸಮತ ಯಾಚನೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಹಾಗೆಯೇ ಸ್ಪೀಕರ್ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ರಾಜ್ಯಪಾಲರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಎಂ ಕಮಲ್​ನಾಥ್​ ಇಂದು ಬೆಳಗ್ಗೆ ಗವರ್ನರ್​ಗೆ ಪತ್ರ ಬರೆದಿದ್ದರು.

    ಒಂದು ವೇಳೆ ಸರ್ಕಾರ ವಿಶ್ವಾಸ ಮತಯಾಚನೆ ಮಾಡಲು ಮುಂದಾಗದೇ ಇದ್ದಲ್ಲಿ ಪ್ರತಿಪಕ್ಷವೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದರಿಂದ ಬಿಜೆಪಿಗೆ ಸಿಎಂ ಕಮಲ್​ನಾಥ್​ ಅವಿಶ್ವಾಸ ನಿರ್ಣಯ ಮಂಡಿಸಲು ಸವಾಲು ಎಸೆದರು. (ಏಜೆನ್ಸೀಸ್​)

    ಯೆಸ್​ ಬ್ಯಾಂಕ್​ ಪ್ರಕರಣದಲ್ಲಿ ಉದ್ಯಮಿ ಅನಿಲ್​ ಅಂಬಾನಿಗೆ ಸಂಕಷ್ಟ: ವಿಚಾರಣೆಗೆ ಬರುವಂತೆ ಇಡಿ ಸಮನ್ಸ್​

    ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಸುರೇಶ್​ ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts