More

    ಬೆಂಗಳೂರು ಎಂಬ ಎಮೋಷನ್​ ಬಗ್ಗೆ ಚಿತ್ರ ನಿರ್ಮಾಣ; ಡಿ. 30ಕ್ಕೆ ಬಿಡುಗಡೆ

    ಬೆಂಗಳೂರು: ಬೆಂಗಳೂರು ಕೋಟ್ಯಂತರ ಜನರಿಗೆ ವಾಸಸ್ಥಾನ. ಈ ಊರಿನ ಕುರಿತು ಆಗಾಗ ಚಿತ್ರಗಳು ಬಂದಿದ್ದುಂಟು. ಈಗ ಹೊಸಬರ ತಂಡವೊಂದು ‘ಮೇಡ್​ ಇನ್​ ಬೆಂಗಳೂರು’ ಎಂಬ ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದು, ಇದೇ ಮ0ರಂದು ಬಿಡುಗಡೆ ಮಾಡವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಚಂದನವನದಲ್ಲಿ ಮುಂದುವರೆದ ದಾಸ ಪರಂಪರೆ; ಜಗನ್ನಾಥ ದಾಸರ ನಂತರ ವೆಂಕಟದಾಸರ ಕುರಿತ ಚಿತ್ರ

    ಈ ಚಿತ್ರವನ್ನು ನಿರ್ಮಿಸಿರುವುದು ಬಾಲಕೃಷ್ಣ ಬಿ.ಎಸ್​. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಾವು ಮೂರು ಜನ ಸ್ನೇಹಿತರು ಸೇರಿ ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಕಂಪನಿ ಆರಂಭಿಸಿದ್ದೆವು. ನಿರ್ದೇಶಕ ಪ್ರದೀಪ್ ಶಾಸ್ತ್ರಿ ಸ್ಟಾರ್ಟ್ ಅಪ್ ಹಾಗೂ ಬೆಂಗಳೂರಿನ ಮೇಲಿರುವ ಎಮೋಷನ್ ಕುರಿತಾದ ಈ ಚಿತ್ರದ ಕಥೆ ಹೇಳಿದರು. ನನಗೆ ನಾವು ಕಂಪನಿ ಆರಂಭಿಸಿದ ದಿನಗಳು ನೆನಪಾದವು. ಕಥೆ ಇಷ್ಟವಾಗಿ ಸಿನಿಮಾ ಆರಂಭ ಮಾಡಿದ್ದೆವು’ ಎನ್ನುತ್ತಾರೆ.

    ಬೆಂಗಳೂರು ಎಂದರೆ ಎಮೋಷನ್​ ಎಂದು ವ್ಯಾಖ್ಯಾನಿಸುವ ನಿರ್ದೇಶಕ ಪ್ರದೀಪ್​ ಶಾಸ್ತ್ರಿ, ‘ಈ ಊರು ಅನೇಕರಿಗೆ ಜೀವನ ನೀಡಿದೆ. ಬೆಂಗಳೂರು ಹಾಗೂ ಸ್ಟಾರ್ಟ್ ಅಪ್ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಹಿರಿಯ ಕಲಾವಿದರು ಹಾಗೂ ಮಧುಸೂದನ್, ಪುನೀತ್ ಮಾಂಜಾ, ವಂಶೀಧರ್, ಹಿಮಾಂಶಿ ಅವರಂತಹ ಕಿರಿಯ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ’ ಎನ್ನುತ್ತಾರೆ.

    ಇದನ್ನೂ ಓದಿ: ಕೊನೆಗೂ ಸುದ್ದಿ ನಿಜವಾಯ್ತು; ಧನ್ಯಾಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತಂತೆ!

    ತಾನು ಕೂಡಾ ಮೇಡ್​ ಇನ್​ ಬೆಂಗಳೂರು ಎನ್ನುವ ಹಿರಿಯ ನಟ ಸಾಯಿಕುಮಾರ್​, ‘ನಾನು ಹುಟ್ಟಿದ್ದು ಆಂಧ್ರದಲ್ಲಿ. ಆದರೆ, ಜೀವನ ನೀಡಿದ್ದು ಬೆಂಗಳೂರು. ಈ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ’ ಎಂದು ಮಾಹಿತಿ ನೀಡುತ್ತಾರೆ.

    ‘ನಾಗಕನ್ಯೆ ಶ್ರೀವಾಸವಿ’ಯಾದ ನಿಮಿಕಾ ರತ್ನಾಕರ್​; ಕಿರುಚಿತ್ರದಲ್ಲಿ ನಟನೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts