More

    ಮಾಡಾಳ್ ವಿರೂಪಾಕ್ಷಪ್ಪ ಜೈಲಿನಿಂದ ಬಿಡುಗಡೆ; ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ

    ಬೆಂಗಳೂರು: ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿಕೊಂಡು ಜೈಲುಪಾಲಾಗಿರುವ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೊನೆಗೂ ಜಾಮೀನು ಲಭ್ಯವಾದ್ದರಿಂದ ಜೈಲಿನಿಂದ ಬಿಡುಗಡೆಗೊಂಡಿದ್ದು, ಇಂದು ಜೈಲಿನಿಂದ ಹೊರಬಂದಿದ್ದಾರೆ.

    ಕೆಎಸ್​ಡಿಎಲ್​ ಗುತ್ತಿಗೆಯಲ್ಲಿ ಲಂಚ ಪಡೆದ ಆರೋಪದ ಮೇಲೆ ಮಾರ್ಚ್ 27ರಂದು ಬಂಧನವಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ, ಇಂದಿನವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ ಇಂದು ಅವರಿಗೆ ಜಾಮೀನು ಮಂಜೂರಾದ್ದರಿಂದ ಸುಮಾರು 15 ದಿನಗಳ ಜೈಲುವಾಸದ ಬಳಿಕ ಅವರು ಅಲ್ಲಿಂದ ಬಿಡುಗಡೆಗೊಂಡಿದ್ದಾರೆ.

    ಇದನ್ನೂ ಓದಿ: ಗಡುವು ನೀಡಿದ್ದ ಶೆಟ್ಟರ್ ಬಳಿಗೆ ಇನ್ನೂ ಬರಲಿಲ್ಲ ಆ ಮೂವರು!

    ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಮಾಡಾಳ್ ವಿರೂಪಾಕ್ಷಪ್ಪಗೆ ಇಂದು ಷರತ್ತುಬದ್ಧ ಜಾಮೀನು ಸಿಕ್ಕಿದ್ದು ನ್ಯಾ. ಜಯಂತ್ ಕುಮಾರ್ ಅವರು ಆ ಕುರಿತ ಆದೇಶ ಹೊರಡಿಸಿದ್ದರು. ಜಾಮೀನು ನೀಡುವಾಗ ನ್ಯಾಯಮೂರ್ತಿಗಳು 5 ಷರತ್ತುಗಳನ್ನ ವಿಧಿಸಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯಗೆ ವಾಯುಯಾನ ಕಂಟಕ?; ನಿನ್ನೆ ವಿಮಾನ, ಇಂದು ಹೆಲಿಕಾಪ್ಟರ್​ ಪ್ರಯಾಣದಲ್ಲಿ ಸಮಸ್ಯೆ!

    ಆ ಪ್ರಕಾರ ಮಾಡಾಳ್ 3 ವಾರಕ್ಕೊಮ್ಮೆ ಲೋಕಾಯುಕ್ತ ಕಚೇರಿಗೆ ಹಾಜರಾಗಬೇಕಾಗಿದ್ದು, ಪಾಸ್‌ಪೋರ್ಟ್ ಸರೆಂಡರ್ ಮಾಡುವಂತೆ‌ ಷರತ್ತು ವಿಧಿಸಲಾಗಿತ್ತು. ಅಲ್ಲದೇ 5 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ‌ ಷರತ್ತು ಹಾಕಲಾಗಿತ್ತು.

    ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಮುಂದಿನ 5 ದಿನ ರಾಜ್ಯದ ಎಲ್ಲೆಲ್ಲಿ ಮಳೆಯಾಗಲಿದೆ? 

    ಜಾಮೀನು ಸಿಕ್ಕಿದ್ದು, ಆರೋಪದಿಂದ ಮುಕ್ತನಾಗುವ ಭರವಸೆ ಇದೆ. ನಾನು ನಾಲ್ಕು ಗೋಡೆ ಮಧ್ಯೆ ಇದ್ದಿದ್ದರಿಂದ ರಾಜಕಾರಣದಲ್ಲಿ ಏನು ನಡೆದಿದೆ ಎಂದು ತಿಳಿದಿಲ್ಲ. ಮನೆಗೆ ತಲುಪಿದ ಬಳಿಕ ಮಾಹಿತಿ ಪಡೆದು ಮುಂದಿನ ರಾಜಕೀಯ ನಡೆ ಕುರಿತು ವಿಚಾರ ಮಾಡುತ್ತೇನೆ, ಸದ್ಯ ಏನನ್ನೂ ಹೇಳುವ ಪರಿಸ್ಥಿತಿ ಇಲ್ಲ ಎಂದು ಮಾಡಾಳ್ ತಿಳಿಸಿದ್ದಾರೆ.

    ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts