More

    ಸಮಾನತೆ ಸಾರಿದ ವಚನಕಾರ ಮಾಚಿದೇವ

    ಬೀರೂರು: ಬಸವಾದಿ ಶರಣರ ಕಾಲಘಟ್ಟದಲ್ಲಿ ಶೋಷಿತ ಸಮಾಜದ ಧ್ರುವತಾರೆಯಾಗಿ ಉದಯಿಸಿದವರು ಮಡಿವಾಳ ಮಾಚಿದೇವ ಎಂದು ಮಡಿವಾಳ ಸಮಾಜ ಅಧ್ಯಕ್ಷ ಬಿ.ಜಿ.ರಾಜಶೇಖರಪ್ಪ ತಿಳಿಸಿದರು.

    ಪಟ್ಟಣದ ಸಂತೆ ಮೈದಾನ ಆವರಣದಲ್ಲಿರುವ ಮಡಿವಾಳ ಮಾಚಿದೇವ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಾಚಿದೇವ ಜಯಂತಿ ಕಾರ್ಯಕ್ರಮದ ಪೂಜೆ ನೆರವೇರಿಸಿ ಮಾತನಾಡಿದರು.
    ಜಾತಿಪದ್ಧತಿ, ಅಸ್ಪಶ್ಯತೆ, ಶೋಷಣೆ ವಿರುದ್ಧ ವಚನಗಳ ಮೂಲಕ ಜಾಗೃತ ಸಮಾಜ ನಿರ್ಮಾಣಕ್ಕೆ ತಳಹದಿಹಾಕಿದ್ದರು. ಲಭ್ಯವಿರುವ 346 ವಚನಗಳಲ್ಲಿ ಸಮಸಮಾಜ ನಿರ್ಮಾಣದ ಕನಸುಗಳನ್ನು ವ್ಯಕ್ತಪಡಿಸುವ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಅವರ ವಿಚಾರಧಾರೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಯಂತಿ ಆಚರಣೆಯನ್ನು ಸಾರ್ಥಕಗೊಳಿಸಬೇಕಿದೆ ಎಂದರು.
    ಧಾರ್ಮಿಕ ಚಿಂತಕ ಬಿ.ಸೋಮಣ್ಣ ಮಾತನಾಡಿ, ಕಾಯಕನಿಷ್ಠೆಗೆ ಸಿಗುವ ಮಹತ್ವವೇ ಹೆಚ್ಚು. ಶೋಷಿತ ಸಮುದಾಯಗಳು ಎಲ್ಲ ರಂಗಗಳಲ್ಲಿ ಪ್ರಗತಿ ಹೊಂದಲು ಶಿಕ್ಷಣವನ್ನು ಅಸವನ್ನಾಗಿ ಬಳಸಿಕೊಂಡು ತಮ್ಮ ವೃತ್ತಿ ಗೌರವ ಉಳಿಸಿಕೊಳ್ಳುವ ಜತೆಗೆ ಮಕ್ಕಳನ್ನು ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ಸತ್ಪ್ರಜೆಯಾಗಿ ರೂಪುಗೊಳಿಸಬೇಕು. ಮುಂದಿನ ದಿನಗಳಲ್ಲಿ ಸಮಾಜದ ಹಿರಿಯರನ್ನು, ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
    ದೇವಾಲಯದಲ್ಲಿ ಮೂಲ ಮೂರ್ತಿಗೆ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಕಾರ್ಯದರ್ಶಿ ಆರ್.ತಿಪ್ಪೇಶ್, ಖಜಾಂಚಿ ನಂಜುಂಡಪ್ಪ, ಹಿರಿಯರಾದ ಪ್ರಕಾಶ್, ನಟರಾಜ್, ಓಂಕಾರ್, ಹೇಮಂತ್, ಜಯಮ್ಮ, ವೀಣಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts