More

    ಮೇಡಂ, ನಮ್ಮ ಮನೆ ಮಕ್ಕಳನ್ನು ರಕ್ಷಿಸಿ…

    ಹಳಿಯಾಳ: ‘ಮೇಡಂ ನಮ್ಮ ಊರಲ್ಲಿ ಒಸಿ-ಮಟ್ಕಾ-ಜೂಜಾಟ ಹಾವಳಿ ಜೋರಾಗಿದೆ. ಜತೆಗೆ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದ ಮನೆಯ ಮಕ್ಕಳು, ಯಜಮಾನರು, ಗ್ರಾಮದ ಯುವಕರು ಹಾಳಾಗುತ್ತಿದ್ದಾರೆ. ದಯಮಾಡಿ ಕಠಿಣ ಕ್ರಮ ಕೈಗೊಂಡು ನಮ್ಮ ಮನೆಗಳನ್ನು ರಕ್ಷಿಸಿ…

    ಈ ರೀತಿಯ ದುಃಖ ಹಾಗೂ ಆಕ್ರೋಶ ಭರಿತ ಅಹವಾಲುಗಳು ಕೇಳಿ ಬಂದಿದ್ದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಹಳಿಯಾಳ ಪೊಲೀಸ್ ಠಾಣೆ ಮತ್ತು ದಾಂಡೇಲಿ ಉಪವಿಭಾಗದಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಅವರ ಜನಸಂಪರ್ಕ ಸಭೆಯಲ್ಲಿ.

    ಸಭೆಯಲ್ಲಿ 20ಕ್ಕೂ ಹೆಚ್ಚು ಜನರು ಹಳಿಯಾಳದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಬಹಿರಂಗವಾಗಿ ತಮ್ಮ ದೂರುಗಳನ್ನು ಸಲ್ಲಿಸಿದರು. ಇದರಲ್ಲಿ ಪ್ರಮುಖವಾಗಿ ಒಸಿ-ಮಟ್ಕಾ-ಜೂಜಾಟ, ಅಕ್ರಮ ಸಾರಾಯಿ ಮಾರಾಟದ ಬಗ್ಗೆಯೇ ಹೆಚ್ಚು ದೂರುಗಳು ಕೇಳಿ ಬಂದವು.

    ತಾಲೂಕಿನೆಲ್ಲೆಡೆ ನಡೆಯುತ್ತಿರುವ ಒಸಿ, ಮಟ್ಕಾ, ಜೂಜಾಟ, ಇಸ್ಪೀಟ್ ರಿಕ್ರಿಯೇಷನ್ ಕ್ಲಬ್​ಗಳು, ಅಕ್ರಮ ಸಾರಾಯಿ ಮರಾಟ ತಡೆಗಟ್ಟಬೇಕು. ಶಾಲಾ-ಕಾಲೇಜುಗಳ ಬಳಿ ಓಡಾಡುವ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಬೇಕು. ಪಾರ್ಕ್​ಗಳಲ್ಲಿ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕಬೇಕು. ನಿಯಮ ಬಾಹಿರ ಕಟೌಟ್​ಗಳ ತೆರವು, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು. ಕಾನೂನು ಬಾಹಿರವಾಗಿ ವೈಟ್​ಬೋರ್ಡ್ ವಾಹನ ಬಾಡಿಗೆ ಓಡಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಸಕ್ಕರೆ ಕಾರ್ಖಾನೆಗೆ ತೆರಳುವ ವಾಹನಗಳಿಂದ ಆಗುವ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂಬ ದೂರುಗಳನ್ನು ಸಾರ್ವಜನಿಕರು ಸಲ್ಲಿಸಿದರು.

    ಅಹವಾಲು: ವಾರ್ಡ್ ಮಟ್ಟದಲ್ಲಿ ಸಭೆ ನಡೆಸಿ, ಪ್ರತಿ ತಿಂಗಳಿಗೊಮ್ಮೆ ಎಸ್ಪಿ ಅವರು ಹಳಿಯಾಳ ಠಾಣೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸಿ, ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು. ಟ್ರಾಫಿಕ್ ಸಮಸ್ಯೆ ಪರಿಹರಿಸಬೇಕು ಎಂಬ ಅಹವಾಲುಗಳನ್ನು ಸಲ್ಲಿಸಲಾಯಿತು.

    ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಮುಖ ಕಮಲ ಸಿಕ್ವೇರಾ, ಪಟ್ಟಣದಲ್ಲಿ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಸರಿಪಡಿಸುವಂತೆ ಮನವಿ ಮಾಡಿದರು.

    ದಲಿತ ಸಂಘಟನೆಯ ಮುಖಂಡ ಸುಂದರ ಮಾದರ ಮಾತನಾಡಿದರು.

    ಎಸ್ಪಿ ಡಾ.ಸುಮನ್ ಪೆನ್ನೇಕರ ಮಾತನಾಡಿ, ಸಾರ್ವಜನಿಕರ ಅಹವಾಲು-ದೂರುಗಳಿಗೆ ಧನಾತ್ಮಕವಾಗಿ ಸ್ಪಂದಿಸಲಾಗುವುದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಡಿವೈಎಸ್ಪಿ ಕೆ.ಎಲ್. ಗಣೇಶ, ಸಿಪಿಐಗಳಾದ ಬಿ.ಎಸ್. ಲೋಕಾಪುರ, ದಯಾನಂದ, ಪಿಎಸ್​ಐಗಳಾದ ವಿನೋದ ರೆಡ್ಡಿ, ಉಮಾ ಬಸರಕೋಡ ಇದ್ದರು.

    ಡಿಜೆ ಸಂಪೂರ್ಣ ನಿಷೇಧ

    ಸವೋಚ್ಚ ನ್ಯಾಯಾಲಯದ ಆದೇಶದಂತೆ ಡಿಜೆ ಧ್ವನಿವರ್ಧಕ ಸಂಪೂರ್ಣವಾಗಿ ನಿಷೇಧವಿದೆ. ತಾಳ, ಮದ್ದಳೆ, ಜಾಂಜ್, ಸಾಂಸ್ಕೃತಿಕ ವಾದ್ಯಗಳನ್ನು ಬಳಸಿ ಬರುವ ಗಣೇಶ ಹಬ್ಬವನ್ನು ಧಾರ್ವಿುಕ ಪದ್ಧತಿಯಂತೆ ಅದ್ದ್ದೂರಿಯಾಗಿ ಆಚರಿಸಲು ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಎಸ್​ಪಿ ಪೆನ್ನೇಕರ್ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts