More

    ಎಂ. ಸಂಜೀವ ಶೆಟ್ಟಿ ಮಳಿಗೆಯಿಂದ ಇನ್ನಷ್ಟು ಉತ್ತಮ ಸೇವೆ – ಉದ್ಯಮಿ ವಾಮನ್ ಪೈ ಆಶಯ – ಪುತ್ತೂರು ದರ್ಬೆ ವೃತ್ತದ ಬಳಿ ನೂತನ ಮಳಿಗೆ ಶುಭಾರಂಭ

    ಪುತ್ತೂರು: ವ್ಯಾಪಾರ ಎಂಬುದು ಒಂದು ತಪಸ್ಸಾಗಿದ್ದು, ಕಮಿಟ್ಮೆಂಟ್ ಹಾಗೂ ಡೆಡಿಕೇಶನ್ ಎರಡೂ ಬೇಕು. ಎಂ.ಸAಜೀವ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5ನೇ ಶಾಖೆ ದರ್ಬೆ ವೃತ್ತದ ಬಳಿ ಶುಭಾರಂಭಗೊAಡಿದೆ. ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಸಂಜೀವ ಶೆಟ್ಟಿ ಮಳಿಗೆ ಮನೆಮಾತಾಗಿದ್ದು, ಮಕ್ಕಳು ಇದರಲ್ಲಿ ತೊಡಗಿಸಿಕೊಂಡಾಗ ಉನ್ನತಿಯಾಗುತ್ತದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಎಂದು ಉದ್ಯಮಿ ವಾಮನ್ ಪೈ ಹೇಳಿದರು.


    80 ವರ್ಷಗಳ ವಸ್ತç ಪರಂಪರೆಯಲ್ಲಿ ಪ್ರಸಿದ್ಧಿ ಪಡೆದ `ಎಂ. ಸಂಜೀವ ಶೆಟ್ಟಿ’ ಸಾರೀಸ್/ ರೆಡಿಮೇಡ್ಸ್ನ ದರ್ಬೆ ವೃತ್ತದ ಬಳಿ ನೂತನವಾಗಿ ಪ್ರಾರಂಭಗೊAಡ ಮಳಿಗೆ ಉದ್ಘಾಟಿಸಿ ಮಾತನಾಡಿದರು.


    ಉದ್ಯಮಿ ವಿಶ್ವಾಸ್ ಶೆಣೈ ಮಾತನಾಡಿ, ಸಂಸ್ಥೆ ದ.ಕ.ದಲ್ಲಿ ಹೆಸರುವಾಸಿಯಾಗಿದೆ. ದರ್ಬೆ ಪರಿಸರದಲ್ಲಿ ಇಂಥ ಮಳಿಗೆ ಅಗತ್ಯವಿದ್ದು, ಇದೀಗ ಶುಭಾರಂಭಗೊAಡಿದೆ. ಈ ನಿಟ್ಟಿನಲ್ಲಿ ದರ್ಬೆ ಪರಿಸರದ ಸಹಕಾರ ಯಾವತ್ತೂ ಸಂಸ್ಥೆಗೆ ಇದೆ ಎಂದರು.
    ಸAಸ್ಥೆಯ ಮುರಳೀಧರ ಮಾತನಾಡಿ, ಫ್ಯಾಶನ್‌ಗಳು ಆಗಾಗ ಬದಲಾವಣೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಸ್ತç ಉದ್ಯಮದಲ್ಲಿ ತೊಡಗಿಕೊಂಡವರು ಅಪ್ ಡೇಟ್ ಆಗುತ್ತಿರಬೇಕು. ಕಳೆದ 80 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತç ನಾವು ಒದಗಿಸುತ್ತಾ ಬಂದಿದ್ದೇವೆ ಎಂದರು.


    ಪಾಪ್ಯುಲರ್ ಸ್ವೀಟ್ಸ್ ಮಾಲೀಕ ನರಸಿಂಹ ಕಾಮತ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್, ಕೆ.ಎಂ.ಇಸ್ಮಾಯಿಲ್, ನರೇಂದ್ರ ಚೋಪ್ರಾ, ಕಟ್ಟಡ ಮಾಲಕರಾದ ಸುಮತಿ ಡಿ.ನಾÊಕ್, ಕವನ್ ನಾÊಕ್, ಶ್ವೇತಾ ಶುಭ ಹಾರೈಸಿದರು. ಕುಟುಂಬದ ಹಿರಿಯ ಸದಸ್ಯ ಸತೀಶ್, ಸಂಸ್ಥೆಯ ಶಿವಶಂಕರ್, ಗಿರಿಧರ ಉಪಸ್ಥಿತರಿದ್ದರು. ಸಂಜೀವ ಶೆಟ್ಟಿ ಹಿರಿಯ ಪುತ್ರ ಮುರಳೀಧರ್ ಸ್ವಾಗತಿಸಿ, ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.


    ಆಧುನಿಕತೆಗೆ ತಕ್ಕಂತೆ ಯುವ ಪೀಳಿಗೆಗೆ ಬೇಕಾದ ವಸ್ತçಗಳು, ಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ ವಸ್ತç ಒಂದೇ ಮಳಿಗೆಯಲ್ಲಿ ಒದಗಿಸುವ ಮೂಲಕ ಪುತ್ತೂರು ಹಾಗೂ ಜಿಲ್ಲೆಯ ಎಲ್ಲ ಜನರ ಅನುಕೂಲ ಮಾಡಿಕೊಟ್ಟಿದ್ದಾರೆ. ವಸ್ತç ಉದ್ಯಮ ಹತ್ತೂರಿಗೆ ಪರಿಚಯಿಸಿದ ಕೀರ್ತಿ ದಿ.ಸಂಜೀವ ಶೆಟ್ಟರಿಗೆ ಸಲ್ಲುತ್ತದೆ. ವಸ್ತç ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದ.ಕ.ಜಿಲ್ಲೆಯಲ್ಲಿ ಪ್ರಾಮಾಣಿಕತೆ ಮತ್ತು ಸಮಯಪ್ರಜ್ಞೆಯ ವ್ಯಾಪಾರ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಜತೆಗೆ ಕುಟುಂಬದವರು ಅದೇ ದಾರಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ.
    | ಸಂಜೀವ ಮಠಂದೂರು
    ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts