More

    ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ

    ರಾಂಚಿ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರ ತಂದೆ ತಾಯಿಗೆ ಕರೊನಾ ಸೋಂಕು ದೃಢವಾಗಿದೆ. ವರದಿ ಬಂದ ತಕ್ಷಣ ದಂಪತಿ ರಾಂಚಿಯ ಪ್ಲಸ್​ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದಿರುವುದಾಗಿ ತಿಳಿಸಲಾಗಿದೆ.

    ಧೋನಿಯವರ ತಂದೆ ಪಾನ್​ ಸಿಂಗ್​ ಹಾಗೂ ತಾಯಿ ದೇವಕಿ ದೇವಿ ಅವರ ಆರೋಗ್ಯ ಸ್ಥಿರವಾಗಿದೆ. ಕರೊನಾ ದೃಢವಾಗಿದೆ ಹಾಗೂ ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಆಕ್ಸಿಜನ್​ ಲೆವೆಲ್​ ಉತ್ತಮವಾಗಿದೆ ಮತ್ತು ಶ್ವಾಸಕೋಶಗಳು ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ರಾಂಚಿಯ ಪ್ಲಸ್​ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಐಪಿಎಲ್​ ಟೂರ್ನಮೆಂಟ್​ ನಡೆಯುತ್ತಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕನಾಗಿ ಧೋನಿ ಕ್ರಿಕೆಟ್​ನಲ್ಲಿ ಬಿಜಿಯಾಗಿದ್ದಾರೆ.

    ದೇಶದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು ಸೋಂಕು ಅತಿ ವೇಗದಲ್ಲಿ ಹರಡಲಾರಂಭಿಸಿದೆ. ಸೋಂಕು ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಲ ಪ್ರಯತ್ನಗಳನ್ನು ಮಾಡುತ್ತಿವೆ. ಹಲವು ರಾಜ್ಯಗಳಲ್ಲಿ ಆಸ್ಪತ್ರೆ ಬೆಡ್​ ಮತ್ತು ಆಕ್ಸಿಜನ್​ ಕೊರತೆ ಕಂಡುಬಂದಿದೆ. ಸಾರ್ವಜನಿಕರು ಸೋಂಕಿನ ಬಗ್ಗೆ ಎಚ್ಚರವಾಗಿರಬೇಕು, ಲಾಕ್​ಡೌನ್​ ಅನ್ನು ಕೊನೆಯ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರದಂದು ಹೇಳಿದ್ದಾರೆ. (ಏಜೆನ್ಸೀಸ್​)

    ಏನಿದು ರಶ್ಮಿಕಾರ ಹೊಸ ಅವತಾರ!? ತಮಿಳುನಾಡಿನಲ್ಲಿ ರಾರಾಜಿಸಿದ ಚಸ್ಮಾ ಸುಂದರಿಯ ಹೇರ್​ಲೆಸ್​ ಫೋಟೋ

    ಕೋವಿಡ್​ಗೆ ಬಲಿಯಾದ ಡಾಕ್ಟರ್​: ಸಾವಿಗೂ ಮುನ್ನ ವೈದ್ಯೆಯ ಫೇಸ್​ಬುಕ್​ ಪೋಸ್ಟ್​ ಕಣ್ಣೀರು ತರಿಸುವಂತಿದೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts