More

    ಕನ್ನಡದ ಶಕ್ತಿ ಕೇಂದ್ರ ಚಿದಾನಂದ ಮೂರ್ತಿಯವರ ಪ್ರಮುಖ ಕೃತಿಗಳು, ಲಭಿಸಿದ ಪ್ರಶಸ್ತಿಗಳು

    ಬೆಂಗಳೂರು: ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಸುಮಾರು ಐದು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ದುಡಿದು, ನೂರಾರು ಸಂಶೋಧನೆಗಳಿಗೆ ಕಾರಣರಾಗಿದ್ದರು. ಚಿದಾನಂದಮೂರ್ತಿಯವರು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದರು. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ನಾಟಕ ಇತಿಹಾಸ, ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದರು.

    ಮೇಲ್ನೋಟಕ್ಕೆ ಚಳವಳಿಗಾರ, ಹೋರಾಟಗಾರ ಎನಿಸಿದರೂ ಅವರಲ್ಲಿ ಅಗಾಧ ಪಾಂಡಿತ್ಯವಿತ್ತು. ಸಂಶೋಧಿಸುವ ಛಲವಿತ್ತು. ಹೀಗಾಗಿ ಚಿದಾನಂದ ಮೂರ್ತಿಯವರು ಹಲವು ಕೃತಿಗಳಿಗೆ ಜೀವ ನೀಡಿದ್ದು, ಅನೇಕ ಪ್ರಶಸ್ತಿಗಳ ಗೌರವಕ್ಕೂ ಪಾತ್ರರಾಗಿದ್ದಾರೆ.

    ಕೃತಿಗಳು
    1. ಶೂನ್ಯಸಂಪಾದನೆಯನ್ನು ಕುರಿತು
    2. ಭಾಷಾವಿಜ್ಞಾನದ ಮೂಲತತ್ತ್ವಗಳು
    3. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ
    4. ಬಸವಣ್ಣನವರು
    5. ಸಂಶೋಧನತರಂಗ (ಎರಡು ಸಂಪುಟಗಳು)
    6. ವಚನಸಾಹಿತ್ಯ
    7. ಗ್ರಾಮೀಣ
    8. ವಾಗರ್ಥ
    9. ಪೂರ್ಣ ಸೂರ್ಯಗ್ರಹಣ
    10. ವೀರಗಲ್ಲು ಮತ್ತು ಮಾಸ್ತಿಗಲ್ಲು
    11. ಪಗರಣ
    12. ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿ ಸಂಗೀತವಿಚಾರ
    13. ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ
    14. ಲಿಂಗಾಯತ ಅಧ್ಯಯನಗಳು
    15. ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ
    16. ಹೊಸತು ಹೊಸತು
    17. ಛಂದೋತರಂಗ
    18. ವಚನಶೋಧ (1, 2)
    19. ಕನ್ನಡಾಯಣ
    20. ವೀರಶೈವಧರ್ಮ ಮತ್ತು ಭಾರತೀಯ ಸಂಸ್ಕೃತಿ
    21. ಪಾಂಡಿತ್ಯರಸ
    22. ಕರ್ನಾಟಕ ನೇಪಾಳ: ಸಾಂಸ್ಕೃತಿಕ ಸಂಬಂಧ
    23. ಸ್ಥಾವರಜಂಗಮ
    24. ಭಾಷಿಕ ಬೃಹತ್ ಕರ್ನಾಟಕ
    25. ಹಂಪಿ ಉಳಿಸಿ; ಭಾರತ ಉಳಿಸಿ
    26. ಅಪಾರ್ಥ, ಅಕ್ರಮಣಗಳಿಗೆ ಒಳಗಾಗಿರುವ ಹಿಂದುಧರ್ಮ
    27. ಗೋ-ಗೋಮಾತೆ-ಗೋಹತ್ಯಾನಿಷೇಧ ಕಾನೂನು
    28. ಕರ್ನಾಟಕ ನಾಡಗೀತೆ- ಒಂದು ವಿಶ್ಲೇಷಣೆ
    29. ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ
    30. ಚಿದಾನಂದಾಯಣ
    31. ಸಂಪ್ರಬಂಧ ಸಂಚಯ
    32. ಹೊಸ ಬೆಳಕಿನಲ್ಲಿ ಬಸವಣ್ಣ
    33. ಹೊಸ ಬೆಳಕಿನಲ್ಲಿ ಹಂಪಿ
    34. ಮೂಲದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು
    300ಕ್ಕೂ ಹೆಚ್ಚು ಸಂಶೋಧನ ಲೇಖನಗಳು (ಕನ್ನಡ ಮತ್ತು ಇಂಗ್ಲಿಷ್​ನಲ್ಲಿ)

    ಪ್ರಶಸ್ತಿಗಳು
    1977: ಕನ್ನಡ ಸಾಹಿತ್ಯ ಪರಿಷತ್ ವಜ್ರಮಹೋತ್ಸವ ಪ್ರಶಸ್ತಿ
    1984: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
    1985: ಕನ್ನಡ ರಾಜ್ಯೋತ್ಸವ ಪ್ರಶಸ್ತಿ
    1993: ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
    1993: ಭೂಸನೂರು ಮಠ ಸ್ಮಾರಕ ಪ್ರಶಸ್ತಿ
    1996: ಬೆಂಗಳೂರು ಅರ್ಬನ್ ಆರ್ಟ್ ಕಮಿಷನ್ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ
    ಗೊರುಚ ಗ್ರಾಮ ವಿಕಾಸ ಪ್ರತಿಷ್ಠಾನ ಸೇವಾ ಪ್ರಶಸ್ತಿ
    1997: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
    1999: ಅನಕೃ ಪ್ರಶಸ್ತಿ
    2000: ಸೇಡಿಯಾಪು ಸಂಶೋಧನ ಪ್ರಶಸ್ತಿ
    2000 ಲಕ್ಕೇಗೌಡ ಸೇವಾ ಪ್ರಶಸ್ತಿ
    2001: ಮಾಸ್ತಿ ಪ್ರಶಸ್ತಿ
    2001 ಸಿರಿವಾರ ಚುಕ್ಕಿ ಪ್ರಶಸ್ತಿ
    2001 ಶಂ.ಭಾ. ಜೋಶಿ ಪ್ರಶಸ್ತಿ
    2002: ಪಂಪ ಪ್ರಶಸ್ತಿ
    2004: ನಾಡೋಜ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts