More

    ತಿಂಗಳ ಮೊದಲ ದಿನವೇ ಜನರಿಗೆ ಗುಡ್  ನ್ಯೂಸ್! ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ! ಹೀಗಿದೆ ಹೊಸ ದರ ವಿವರ

    ನವದೆಹಲಿ:  ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಅಗ್ಗವಾಗಿದೆ. 2024ರ ಲೋಕಸಭಾ ಚುನಾವಣೆಯ ಸಂಭ್ರಮದಲ್ಲಿರುವ ಜನತೆಗೆ ಇದೊಂದು ಸಂತಸದ ಸುದ್ದಿ. ಸಿಲಿಂಡರ್ ಬೆಲೆಯಲ್ಲಿ 32 ರೂಪಾಯಿ ಇಳಿಕೆಯಾಗಿದ್ದು, ವಾಣಿಜ್ಯ ಬಳಕೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರ ಕಡಿಮೆಯಾಗಿದೆ.    

    ಬೆಲೆ ಇಳಿಕೆಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, IOC ಯಿಂದ ಬಂದಿರುವ ಅಪ್ ಡೇಟ್ಸ್ ಪ್ರಕಾರ, ಇಂದಿನಿಂದ 19 ಕೆಜಿ ಸಿಲಿಂಡರ್ ದೆಹಲಿಯಲ್ಲಿ 1764.50 ರೂ., ಕೋಲ್ಕತ್ತಾದಲ್ಲಿ 1879 ರೂ., ಮುಂಬೈನಲ್ಲಿ 1717.50 ರೂ. ಮತ್ತು ಚೆನ್ನೈನಲ್ಲಿ 1930 ರೂ.ಗೆ ಲಭ್ಯವಿರುತ್ತದೆ. ಮಾರ್ಚ್ 1, 2024 ರಂದು ಕೊನೆಯ ಬಾರಿಗೆ ಸಿಲಿಂಡರ್ ಬೆಲೆ 25 ರೂ.ಹೆಚ್ಚಿಸಲಾಗಿತ್ತು.    

    ದೇಶದಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ನಿರಂತರವಾಗಿ ಏರಿಕೆ ಮತ್ತು ಇಳಿಕೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಲ್ಲೂ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಇಳಿಕೆಯಾಗಿದೆ.

    ಗೃಹಬಳಕೆಯ ಗ್ಯಾಸ್ ಸಿಲಿಂಡರ್  

    ಕಳೆದ ತಿಂಗಳು ಮಹಿಳಾ ದಿನಾಚರಣೆಯಂದು ಸರ್ಕಾರ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡಿತ್ತು. 6 ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಸಿಲಿಂಡರ್ ಬೆಲೆ ಕಡಿತಗೊಳಿಸಲಾಗಿತ್ತು. ಈಗ ದೇಶಾದ್ಯಂತ 14 ಕೆಜಿ ಸಿಲಿಂಡರ್ ಸುಮಾರು 800 ರೂ.ಗೆ ಲಭ್ಯವಿದೆ.     

    ‘ನಾನು ಅಧಿಕಾರಕ್ಕಾಗಿ ಅಥವಾ ಮತಕ್ಕಾಗಿ ಹೀಗೆ ಮಾಡುತ್ತಿಲ್ಲ’:  ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಹೀಗಂದಿದ್ದೇಕೆ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts