More

    ಕಳ್ಳನ ಲವರ್‌ಗೂ ಚಿನ್ನದ ವ್ಯಾಪಾರಿಯ ಲವರ್‌ಗೂ ಇತ್ತು ಪರಿಚಯ; ಆಕೆ ಕೊಟ್ಟ ಮಾಹಿತಿ ಮೇರೆಗೆ ಚಿನ್ನ ದೋಚಿದ್ದ ಮೂವರ ಬಂಧನ

    ಬೆಂಗಳೂರು: ಇದೊಂಥರಾ ‘ದುಷ್ಮನ್‌ ಕಹಾ ಹೈ ಎಂದರೆ ಬಗಲ್‌ ಮೇ ಹೈ’ ಎಂಬ ರೀತಿಯ ಪ್ರಕರಣ. ಇಲ್ಲಿ ಚಿನ್ನದ ವ್ಯಾಪಾರಿಯ ಲವರ್‌ಗೂ ಹಾಗೂ ಆತನಿಂದ ಚಿನ್ನ ದೋಚಿದ್ದವನ ಲವರ್‌ಗೂ ಇದ್ದ ಪರಿಚಯವೇ ದುರ್ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಲಾಗಿದೆ. ಆದರೆ ಸ್ನೇಹಿತೆಯ ಭೇಟಿಗೆ ಬಂದಿದ್ದ ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಆಭರಣ ದೋಚಿದ್ದ ಮೂವರು ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದು, ಚಂದ್ರಾ ಲೇಔಟ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಕೆ.ಜಿ. ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನ ಬಟ್ಟೆ ವ್ಯಾಪಾರಿ ಜಾಕೀರ್ ಹುಸೇನ್ (30), ವೆಂಕಟೇಶಪುರದ ಕೋಳಿ ಅಂಗಡಿ ನೌಕರ ಶಾಬಾಜ್ ಖಾನ್ ( 25) ಹಾಗೂ ವೆಲ್ಡಿಂಗ್ ಶಾಪ್ ನೌಕರ ಫಾಜಿಲ್ (23) ಬಂಧಿತರು. ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 103.3 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳ ಮೂಲದ ಚಿನ್ನದ ವ್ಯಾಪಾರಿ ತಪನ್ ಮಿಶ್ರಾ, ನರ್ಗತಪೇಟೆಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇದ್ದ ಕಾರಣಕ್ಕೆ ಊರಿಗೆ ಹೊರಟ್ಟಿದ್ದರು. ಅದಕ್ಕೂ ಮೊದಲು ಸ್ನೇಹಿತೆಯನ್ನು ಒಮ್ಮೆ ಭೇಟಿ ಮಾಡುವ ಸಲುವಾಗಿ ಮಾರ್ಚ್ 13ರ ಸಂಜೆ ಚಂದ್ರಾ ಲೇಔಟ್ ಸಮೀಪದ ಭೈರವೇಶ್ವರನಗರ 9ನೇ ಕ್ರಾಸ್‌ನಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದರು. ಆರೋಪಿ ಜಾಕೀರ್ ಮತ್ತು ಆತನ ಸಹಚರರು ಬೈಕ್‌ನಲ್ಲಿ ಬಂದು ವ್ಯಾಪಾರಿಯನ್ನು ಅಡ್ಡಗಟ್ಟಿ ಪ್ರಾಣ ಬೆದರಿಕೆ ಹಾಕಿ 3 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ 3 ಸಾವಿರ ರೂ. ಸುಲಿಗೆ ಮಾಡಿದ್ದರು.

    ಇದನ್ನೂ ಓದಿ: ವಧು ವರರ ಬಟ್ಟೆ ಬಿಚ್ಚುವುದು ಇಲ್ಲಿನ ಸಂಪ್ರದಾಯ! ಈ ದೇಶದ ಯುವಜನತೆಗೆ ಮದುವೆಯೇ ಶಾಪವಂತೆ!

    ಈ ಕುರಿತು ವ್ಯಾಪಾರಿ ಕೊಟ್ಟ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೊಬೈಲ್ ಫೋನ್‌ ಕರೆ ಮತ್ತು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಜಾಕೀರ್ ಹುಸೇನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಿಬ್ಬರು ಸೆರೆ ಸಿಕ್ಕಿದ್ದಾರೆ. ವಿಚಾರಣೆ ವೇಳೆ ಚಿನ್ನದ ವ್ಯಾಪಾರಿಗೂ ಮತ್ತು ಆರೋಪಿ ಜಾಕೀರ್‌ಗೂ ಪರಿಚಯ ಇರುವುದು ಬೆಳಕಿಗೆ ಬಂದಿದೆ.

    ಚಂದ್ರಾ ಲೇಔಟ್‌ಗೆ ಸ್ನೇಹಿತೆಯನ್ನು ಭೇಟಿ ಮಾಡಲು ಚಿನ್ನದ ವ್ಯಾಪಾರಿ ಬರುವ ವಿಷಯ ಜಾಕೀರ್ ಹುಸೇನ್‌ಗೆ ತನ್ನ ಸ್ನೇಹಿತೆಯ ಮೂಲಕ ಗೊತ್ತಾಗಿರುತ್ತದೆ. ಆರೋಪಿಯ ಸ್ನೇಹಿತೆ ಮತ್ತು ವ್ಯಾಪಾರಿಯ ಗೆಳತಿ ಇಬ್ಬರೂ ಪರಿಚಯಸ್ಥರೇ ಆಗಿದ್ದರು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗಿಯಾಗಲು ಚಿನ್ನದ ವ್ಯಾಪಾರಿ, ಹುಟ್ಟೂರಿಗೆ ಹೋಗುತ್ತಿದ್ದರು. ಅದಕ್ಕೂ ಮೊದಲು ಸ್ನೇಹಿತೆಯನ್ನು ನೋಡಲು ಬರುವ ವಿಷಯ ತಿಳಿದು ಜಾಕೀರ್ ಕೃತ್ಯ ಎಸಗಿದ್ದ. ತಪನ್ ಊರಿಗೆ ಹೊರಟಿರುವ ಕಾರಣಕ್ಕೆ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂದು ಆರೋಪಿಗಳು ಭಾವಿಸಿದ್ದರು. ಪ್ರಕರಣದಲ್ಲಿ ತಪನ್ ಸ್ನೇಹಿತೆಯ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪ್ಪನಿಗೆ ಕಂಠಪೂರ್ತಿ ಕುಡಿಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಗಳು!

    ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts