More

    ಜಿಹಾದಿಗಳು ನವರಾತ್ರಿ ಉತ್ಸವಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು: ವಿಹಿಂಪ

    ಅಹಮದಾಬಾದ್: ಮುಂಬರುವ ನವರಾತ್ರಿ ಉತ್ಸವಗಳಲ್ಲಿ ಜಿಹಾದಿಗಳು ಯಾವುದೇ ಕಾರಣಕ್ಕೂ ಗರ್ಭಾ ಪೆಂಡಾಲ್​ಗಳನ್ನು ಪ್ರವೇಶಿಸಿದಂತೆ ಸರ್ಕಾರ ಹಾಗೂ ಪೊಲೀಸ್​ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್​ ಆಗ್ರಹಿಸಿದೆ.

    ಗುಜರಾತ್​ನ ಅಹಮದಬಾದ್​ನಲ್ಲಿ ಈ ಕುರಿತು ಮಾತನಾಡಿದ ವಿಹಿಂಪ ಮುಖಂಡರು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಭೆ ಹಾಗೂ ಸಮಾರಂಭಗಳಲ್ಲಿ ಹೆಚ್ಚು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಈ ಕುರಿತು ಮಾತನಾಡಿರುವ ವಿಹಿಂಪ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ನವರಾತ್ರಿಯ ಸಮಯದಲ್ಲಿ ಗರ್ಭಾ ನೃತ್ಯವು ದೇವಿಗೆ ಪೂಜೆ ಸಲ್ಲಿಸುವ ಒಂದು ವಿಶಿಷ್ಟ ಕಲೆಯಾಗಿದೆ. ಕೆಲವು ಜಿಹಾದಿಗಳು ಇಂತಹ ಕಾರ್ಯಕ್ರಮ ಹಾಗೂ ವಿಶೇಷ ಸಂದರ್ಭಗಳನ್ನು ದುರುಪಯೋಗ ಪಡಿಸಿಕೊಂಡು ವಿಕೃತಿ ಮೆರೆಯಲು ಸಂಚು ಹಾಕಿದ್ದಾರೆ.

    ಜಿಹಾದಿಗಳು ನವರಾತ್ರಿ ಉತ್ಸವಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು: ವಿಹಿಂಪ

    ಇದನ್ನೂ ಓದಿ: ಬಿಹಾರದ ಮಾದರಿಯಲ್ಲೇ ರಾಜಸ್ಥಾನದಲ್ಲೂ ಜಾತಿಗಣತಿ ನಡೆಸಲಾಗುವುದು: ಸಿಎಂ ಅಶೋಕ್ ಗೆಹ್ಲೋಟ್

    ನಾನು ಈ ಮೂಲಕ ಕಾರ್ಯಕ್ರಮದ ಸಂಘಟಕರಿಗೆ ಮನವಿ ಮಾಡುವುದೇನೆಂದರೆ ಪೆಂಡಾಲ್, ಅಡುಗೆ ಹಾಗೂ ಬೌನರ್ಸ್​ಗಳು ಮುಸ್ಲಿಮರು ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಸರ್ಕಾರಿ ಗುರುತಿನ ಚೀಟಿಯನ್ನು ಪರಿಶೀಲಿಸಿ ಆ ನಂತರ ಅವರನ್ನು ಒಳಗೆ ಬಿಡಬೇಕು ಎಂದಿದ್ದಾರೆ.

    ಗರ್ಭಾ ಕಾರ್ಯಕ್ರಮಗಳನ್ನು ಮುಸ್ಲಿಮರು ಹಿಂದೂಗಳನ್ನು ಗುರಿಯಾಗಿಸಿ ಲವ್​ ಜಿಹಾದ್​ಗೆ ಪರಿವರ್ತಿಸದಂತೆ ಗುಜರಾತ್​ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಕಾರ್ಯಕ್ರಮಕ್ಕೆ ಆ ರಿತಿಯ ವ್ಯಕ್ತಿಗಳು ಯಾರಾದರೂ ಬಂದು ನಾವು ಅವರನ್ನು ತಡೆದರೆ ಅಶಾಂತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಹಿಂಪ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts