More

    ಇಸ್ರೇಲ್-ಪ್ಯಾಲೆಸ್ಟೈನ್​ ಯುದ್ಧ; 40ಕ್ಕೆ ಏರಿದ ಸಾವಿನ ಸಂಖ್ಯೆ

    ನವದೆಹಲಿ: ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕರು ಶನಿವಾರ ಮುಂಜಾನೆ ಇಸ್ರೇಲ್ ಕಡೆಗೆ 5000 ರಾಕೆಟ್‌ಗಳನ್ನು ಹಾರಿಸಿ ಯುದ್ಧದ ಪರಿಸ್ಥಿತಿ ಸೃಷ್ಟಿಸಿದ್ದಾರೆ.

    ಇಸ್ರೇಲ್​ ಮೇಲೆ ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಚಳುವಳಿ ಹಮಾಸ್ ಶನಿವಾರ ಮುಂಜಾನೆ ಇಸ್ರೇಲ್ ಮೇಲೆ ತನ್ನ ಅತಿದೊಡ್ಡ ದಾಳಿಯನ್ನು ಪ್ರಾರಂಭಿಸಿದೆ. ಇತ್ತ ಇಸ್ರೇಲ್​ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

    Israel

    ಇದನ್ನೂ ಓದಿ: ಏಷ್ಯನ್ ಗೇಮ್ಸ್| ಮಳೆಯಿಂದಾಗಿ ಫೈನಲ್ ಪಂದ್ಯ ರದ್ದು; ಟೀಂ ಇಂಡಿಯಾಗೆ ಚಿನ್ನದ ಪದಕ

    ಇಸ್ರೇಲ್​ನಲ್ಲಿ ಇಂದು ರಾಕೆಟ್ ದಾಳಿಯ ನಂತರ 40 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ವಾಯುದಾಳಿ ಮಾಡಿ 161 ಪ್ಯಾಲೆಸ್ತೀನಿಯನ್ನರನ್ನು ಕೊಂದಿದ್ದು, ಉಭಯ ದೇಶಗಳು ನಡೆಸಿರುವ ದಾಳಿಯಲ್ಲಿ 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

    ನಾವು ಯುದ್ಧದಲ್ಲಿ ತೊಡಗಿದ್ದು ಇದರಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಶತ್ರುಗಳು ಎಂದಿಗೂ ಸಾಧ್ಯವಾಗದ ಬೆಲೆ ತೆರುತ್ತಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋ ಹೇಳಿಕೆ ಒಂದನ್ನು ಪ್ರಕಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts