More

    ನೀತಿ ಸಂಹಿತೆ ಉಲ್ಲಂಘನೆ: ನಗದು ಸೇರಿ 447 ಕೋಟಿ ರೂ. ಮೌಲ್ಯದ ವಸ್ತು ಮುಟ್ಟುಗೋಲು

    ಬೆಂಗಳೂರು: ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬೆನ್ನು ಬಿದ್ದಿರುವ ಚುನಾವಣಾ ಆಯೋಗ ಈವರೆಗೆ ನಗದು ಸೇರಿದಂತೆ 446.92 ಕೋಟಿ ರೂ. ವಸ್ತು ವಶಕ್ಕೆ ಪಡೆದಿದೆ.

    ಪೊಲೀಸ್/ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡ, ಅಬಕಾರಿ, ಆದಾಯ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡಗಳು ನಿರಂತರ ದಾಳಿ ನಡೆಸುತ್ತಿವೆ.
    ಈವರೆಗೆ 96.19 ಕೋಟಿ ರೂ. ನಗದು, 178.84 ಕೋಟಿ ರೂ. ಬೆಲೆಯ ಮದ್ಯ, 11.54 ಕೋಟಿ ರೂ. ಮೊತ್ತದ ಡ್ರಗ್ಸ್, 76.75 ಕೋಟಿ ರೂ. ಮೌಲ್ಯದ ಚಿನ್ನ, 1.18 ಕೋಟಿ ರೂ. ಮೊತ್ತದ ಬೆಳ್ಳಿ, 1.22 ಕೋಟಿ ರೂ. ಬೆಲೆ ಬಾಳುವ ವಜ್ರ, 8.64 ಕೋಟಿ ರೂ. ಬೆಲೆಯ ಉಚಿತ ಉಡುಗೊರೆ, 72.55 ಕೋಟಿ ರೂ. ಮೊಬಲಿಗಿನ ಇತರೆ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

    ಕ್ಷಿಪ್ರ ಪಡೆ, ಸ್ಥಿರ ಕಣ್ಗಾವಲು ತಂಡ, ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲಬಾಳುವ ಲೋಹ, ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 2ಡ,226 ಪ್ರಕರಣ ದಾಖಲಿಸಿವೆ.

    32,443 ಮತದಾರರು ಮನೆಯಿಂದ ಮತದಾನ:

    ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಈವರೆಗೆ 85 ವರ್ಷಕ್ಕಿಂತ ಮೇಲ್ಪಟ್ಟ 21,875 ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ. 23,213 ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅನುಮೋದೆ ನೀಡಲಾಗಿತ್ತು. 10,897 ನೋಂದಾಯಿತ ದಿವ್ಯಾಂಗ ಮತದಾರರ ಪೈಕಿ ಈವರೆಗ 10,558 ಮಂದಿ ಮತದಾನ ಮಾಡಿದ್ದಾರೆ. ಈವೆಗೆ ಒಟ್ಟು 32,443 ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts