More

    ಹಮಾಸ್ ಉಗ್ರರ ದಾಳಿ; ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ನಿಲ್ಲುತ್ತೇವೆ ಎಂದ ಪ್ರಧಾನಿ ಮೋದಿ

    ನವದೆಹಲಿ: ಇಸ್ರೇಲ್​ ಮೇಲೆ ಗಾಜಾಪಟ್ಟಿಯಲ್ಲಿರುವಗ ಹಮಾಸ್​ ಉಗ್ರರು ದಾಳಿ ಮಾಡಿ ಕನಿಷ್ಠ 40 ಮಂದಿ ಮೃತಪಟ್ಟಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಇಸ್ರೇಲ್​ನಲ್ಲಿ ನಡೆದ ಭಯೋತ್ಪಾದಕರ ದಾಳಿ ವಿಚಾರ ಕೇಳಿ ಆಘಾತ ಉಂಟಾಗಿದೆ. ಘಟನೆಯಲ್ಲಿ ಮೃತಪಟ್ಟಿರುವ ಬಲಿಪಶು ಹಾಗೂ ಅವರ ಕುಟುಂಬದವರೊಂದಿಗೆ ನಮ್ಮ ಆಲೋಚನೆ ಹಾಗೂ ಪ್ರಾರ್ಥನೆಗಳು ಸದಾ ಇರುತ್ತವೆ. ಈ ಕಷ್ಟದ ಸಮಯದಲ್ಲಿ ಭಾರತವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ವಿದೇಶದಿಂದ ಜಿರಾಫೆ ಮಲ ತಂದು ಏರ್​ಪೋರ್ಟಿನಲ್ಲಿ ಸಿಕ್ಕಿಬಿದ್ದ ಮಹಿಳೆ; ಕಾರಣ ಕೇಳಿ ಅಧಿಕಾರಿಗಳೇ ಶಾಕ್

    ಇಸ್ರೇಲ್​ನಲ್ಲಿ ಇಂದು ರಾಕೆಟ್ ದಾಳಿಯ ನಂತರ 40 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ವಾಯುದಾಳಿ ಮಾಡಿ 161 ಪ್ಯಾಲೆಸ್ತೀನಿಯನ್ನರನ್ನು ಕೊಂದಿದ್ದು, ಉಭಯ ದೇಶಗಳು ನಡೆಸಿರುವ ದಾಳಿಯಲ್ಲಿ 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

    ನಾವು ಯುದ್ಧದಲ್ಲಿ ತೊಡಗಿದ್ದು ಇದರಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಶತ್ರುಗಳು ಎಂದಿಗೂ ಸಾಧ್ಯವಾಗದ ಬೆಲೆ ತೆರುತ್ತಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋ ಹೇಳಿಕೆ ಒಂದನ್ನು ಪ್ರಕಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts