More

    ಲವ್​ನಲ್ಲಿ ಜಿಹಾದ್​ಗೆ ಜಾಗವೇ ಇಲ್ಲ – ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ‘ಪ್ರೇಮ’ ಪಾಠ !

    ಜೈಪುರ : ಲವ್ ಜಿಹಾದ್​ ತಡೆಯುವುದಕ್ಕೆ ಒಂದೊಂದೇ ರಾಜ್ಯಗಳು ಕಾನೂನು ಬಿಗಿಗೊಳಿಸುತ್ತಿರುವಾಗಲೇ ರಾಜಸ್ಥಾನದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್​ ಇದನ್ನು ವಿರೋಧಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜಸ್ಥಾನದಲ್ಲಿ ಇಂತಹ ಕಾನೂನನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿದ ಅವರು, ಲವ್​ ಜಿಹಾದ್ ಎಂಬ ಪದವನ್ನು ಬಿಜೆಪಿ ಸೃಷ್ಟಿಸಿದ್ದು. ಇದು ದೇಶ ಮತ್ತು ಕೋಮು ಸಾಮರಸ್ಯವನ್ನು ಹಾಳುವುದಕ್ಕಾಗಿಯೇ ಮಾಡಿದ್ದಾರೆ. ಮದುವೆ ಎನ್ನುವುದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರ. ಇದರ ಮೇಲೆಯೂ ಕಾನೂನು ಹೇರುವುದು ಸಂಪೂರ್ಣವಾಗಿ ಅಸಾಂವಿಧಾನಿಕವಾದುದು. ಯಾವುದೇ ಕೋರ್ಟ್ ಕೂಡ ಈ ಕಾನೂನಿನ ಪರವಾಗಿ ನಿಲ್ಲದು. ಲವ್​ನಲ್ಲಿ ಜಿಹಾದ್​ಗೆ ಜಾಗವೇ ಇಲ್ಲ !

    ಇದನ್ನೂ ಓದಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಶೀಘ್ರ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುಳಿವು

    ವಯಸ್ಕರನ್ನೂ ರಾಜ್ಯ ಸರ್ಕಾರದ ಮರ್ಜಿಯಲ್ಲಿ ಇಟ್ಟುಕೊಳ್ಳುವಂತಹ ವಾತಾವರಣವನ್ನು ಅವರು ನಿರ್ಮಿಸುತ್ತಿದ್ದಾರೆ. ವಿವಾಹವೆನ್ನುವುದು ವೈಯಕ್ತಿಕ ನಿರ್ಧಾರ ಮತ್ತು ಅದನ್ನು ತಡೆಯುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವೈಯಕ್ತಿಕ ಸ್ವಾತಂತ್ರ್ಯವನ್ನು ಹಿಡೆದೆಳದುಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ಕೋಮು ಸಾಮರಸ್ಯ ಕದಡುವ ಹುನ್ನಾರ ಇದರಲ್ಲಿ ಅಡಕವಾಗಿರುವಂತೆ ಭಾಸವಾಗುತ್ತಿದೆ.

    ಇದನ್ನೂ ಓದಿ: ಲವ್ ಜಿಹಾದ್​ಗೆ ಸಜೆ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಒಲವು

    ಸಾಂವಿಧಾನಿಕ ಚೌಕಟ್ಟು ಮರೆತು ಸಾಮಾಜಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿರುವಂತೆ ತೋರುತ್ತಿದೆ. ಯಾವುದೇ ರೀತಿಯಲ್ಲೂ ಈ ದೇಶದ ಪೌರನೊಂದಿಗೆ ಸರ್ಕಾರ ಈ ರೀತಿ ತಾರತಮ್ಯ ತೋರಬಾರದು ಎಂದು ಗೆಹ್ಲೋಟ್ ಟ್ವೀಟ್​ಗಳಲ್ಲಿ ಹೇಳಿಕೊಂಡಿದ್ದಾರೆ.

    ಗ್ರಾಮದಲ್ಲಿದ್ದವರಿಗೆಲ್ಲ ಕರೊನಾ ವೈರಸ್ ಸೋಂಕು- ಒಬ್ಬ ಮಾತ್ರ ಬಚಾವ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts