More

    ಮನುಷ್ಯರ ಕಾಲಿನಂತೆ ಕಾಣುವ ಶೂ; ಲಕ್ಷ…ಲಕ್ಷ ಬೆಲೆ ಬಾಳುತ್ತದೆ ಈ ಬ್ರ್ಯಾಂಡ್ ಶೂ..

    ನವದೆಹಲಿ: ಮಾರುಕಟ್ಟೆಗೆ ಹೊಸ ಹೊಸ ಟ್ರೆಂಡ್​​ಗಳು ಬರುತ್ತವೆ. ಕೆಲವು ಫ್ಯಾಶನ್ ಜನರ ಗಮನ ಸೆಳೆಯುತ್ತವೆ. ಇನ್ನು ಕಲವು ಗ್ರಾಹಕರನ್ನು ಹಿಡಿದಿಡುವುದು ಸವಾಲಿನ ಕೆಲಸವಾಗುತ್ತದೆ. ಆದರೆ ಇಲ್ಲೊಂದು ಕಂಪನಿ ಮನುಷ್ಯರ ಕಾಲಿನಂತೆ ಕಾಣುವ ಶೂ ತಯಾರಿಸಿ ಮಾರುಕಟ್ಟೆಗೆ ತಂದಿದೆ. ಈ ವಸ್ತುಗಳು ನೋಡಲು ಭಿನ್ನತೆ ಹೊಂದಿರುವ ಜೊತೆಗೆ ಬೆಲೆಯಲ್ಲೂ ದುಬಾರಿಯಾಗಿರುತ್ತವೆ.

    ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ವಿಚಿತ್ರ ಫ್ಯಾಷನ್ ನೊಂದಿಗೆ ಬಂದಿದೆ. ಅದು ಮಹಿಳೆಯರ ಕಾಲಿನಂತೆ ಕಾಣುವ ಬಿಳಿ ಬಣ್ಣದ ಸಾಕ್ಸ್ ಹಾಗೂ ಕಪ್ಪು ಸ್ಟಿಲೆಟ್ಟೊದ ಶೂಗಳನ್ನು ಪರಿಚಯಿಸಿದೆ.

    ಈ ಶೂ ವಿಶೇಷತೆ ಏನು?: ಈ ಶೂ, ಸಾಕ್ಸ್ ಸಮೇತ ಕಾಲುಗಳಂತೆ ಕಾಣುವ ಫ್ಯಾಷನ್ ಇದಾಗಿದೆ. ಎರಡು ಸ್ಕಿನ್ ಟೋನ್ ನಲ್ಲಿ ಇದು ನಿಮಗೆ ಲಭ್ಯವಿದೆ. ನಿಮ್ಮ ಮೊಣಕಾಲಿನವರೆಗೆ ಇದು ಬರುತ್ತದೆ. ಇದನ್ನು ಧರಿಸಿದ ಮೇಲೆ ಮತ್ತೆ ನೀವು ಸಾಕ್ಸ್ ಶೂ ಹಾಕ್ಬೇಕಾಗಿಲ್ಲ. ಇದರ ಬೆಲೆ ಸುಮಾರು 2 ಲಕ್ಷ ರೂಪಾಯಿ.

    ಕಂಟೆಂಟ್ ಕ್ರಿಯೆಟರ್ ಈ ಉತ್ಪನ್ನವನ್ನು ಅನ್‌ಬಾಕ್ಸ್ ಮಾಡಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅನೇಕರು ಶೂ ವಿನ್ಯಾಸವನ್ನು ಇಷ್ಟಪಟ್ಟಿದ್ದಾರೆ. ಇದು ವಿಚಿತ್ರವಾಗಿದ್ರೂ ಚೆನ್ನಾಗಿದೆ. ಈಗ ನನಗೆ ಈ ಬೂಟ್ ಬೇಕು ಎನ್ನಿಸುತ್ತಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

    ಸಿಲ್ಕ್ ಸ್ಮಿತಾ ಹುಟ್ಟುಹಬ್ಬದಂದು ಮತ್ತೊಂದು ಬಯೋಪಿಕ್ ಅನೌನ್ಸ್; ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts