More

    ಮದ್ವೆಯ ಅಬ್ಬರದ ಸಂಗೀತದಿಂದ ಆದಷ್ಟು ದೂರವಿರಿ! ಸಂಶೋಧನೆಯಿಂದ ಬಯಲಾಗಿದೆ ಆಘಾತಕಾರಿ ಸಂಗತಿ

    ನವದೆಹಲಿ: ಮದುವೆ ವೇದಿಕೆ ಮೇಲೆ ವಧುವಿನೊಂದಿಗೆ ಹಾರ ಬದಲಾವಣೆ ಮಾಡುವಾಗ ಬಿಹಾರದ ಸೀತಾಮರ್ಹಿ ಮೂಲದ ನಿವಾಸಿ ಸುರೇಂದ್ರ ಕುಮಾರ್ (22)​ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಘಟನೆ 2023, ಮಾರ್ಚ್​ 4ರಂದು ನಡೆದಿತ್ತು. ಹೆಚ್ಚಿನ ಡೆಸಿಬಲ್​ನ ಡಿಜೆ ಮ್ಯೂಸಿಕ್​ನಿಂದ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎಂದು ವರನ ಕುಟುಂಬಸ್ಥರು ಆರೋಪ ಮಾಡಿದ್ದರು.

    ಇದೇ ರೀತಿಯ ಇನ್ನೊಂದು ಘಟನೆ ತೆಲಂಗಾಣದಲ್ಲಿ ನಡೆಯಿತು. 19 ವರ್ಷದ ಯುವಕ ಸಂಬಂಧಿಕರ ಮದುವೆಯಲ್ಲಿ ಡಾನ್ಸ್​ ಮಾಡುವಾಗ ಕುಸಿದುಬಿದ್ದು ಮೃತಪಟ್ಟಿದ್ದ. ಕಳೆದ ವರ್ಷ ನವೆಂಬರ್​ 25ರಂದು ವಾರಣಾಸಿಯ ಪಿಪ್ಲಾನಿ ಕಾತ್ರಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಡಾನ್ಸ್​ ಮಾಡುವಾಗ ಅಕಾಲಿಕ ಸಾವಿಗೀಡಾಗಿದ್ದ. ಈ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

    ಆಘಾತಕಾರಿ ಸಂಗತಿ ಏನೆಂದರೆ, ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ದಿಢೀರ್​ ಕುಸಿದು ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯಾಘಾತದ ಸುದ್ದಿಗಳೇ ಹೆಚ್ಚಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಮದುವೆ ಸೇರಿದಂತೆ ಕಾರ್ಯಕ್ರಮಗಳಲ್ಲಿನ ಅಬ್ಬರದ ಸಂಗೀತವನ್ನು ತಾಳಲಾರದೇ ಅಸುನೀಗಿದ್ದಾರೆ.

    ಇದನ್ನೂ ಓದಿ: ಬಿರುಬೇಸಿಗೆ ಶುರು: ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಏನು ಮಾಡ್ಬೇಕು? ಮಾಡಬಾರದು? ಇಲ್ಲಿದೆ ಉಪಯುಕ್ತ ಮಾಹಿತಿ

    2019ರ ನವೆಂಬರ್​ನಲ್ಲಿ ಯುರೋಪಿಯನ್​ ಹಾರ್ಟ್​ (ಹೃದಯ) ಜರ್ನಲ್​ನಲ್ಲಿ ಒಂದು ಸಂಶೋಧನಾ ವರದಿ ಪ್ರಕಟವಾಯಿತು. ಅದರಂತೆ ಯಾವುದೇ ಪ್ರಕಾರದ ಸಂಗೀತ, ಅದು ಅಬ್ಬರದ ಸಂಗೀತವಾಗಿರಲಿ ಅಥವಾ ಮೃದುವಾದ ಸಂಗೀತವಾಗಿರಲಿ, ಅದು ಒಬ್ಬ ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ.

    ಸುಮಾರು 500 ಆರೋಗ್ಯಯುತ ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಯಿತು. ಅಷ್ಟೂ ಮಂದಿ ಕೂಡ ನಿರಂತವಾಗಿ ಅಬ್ಬರದ ಸಂಗೀತ ಅಥವಾ ಗಿಜುಗುಡುವ ಮಾರುಕಟ್ಟೆಯ ಮಧ್ಯೆ ಕೆಲಸ ಮಾಡುವವರು. ಸುಮಾರು 5 ವರ್ಷಗಳವರೆಗೆ ಈ ಅಧ್ಯಯನವನ್ನು ನಡೆಸಲಾಗಿದೆ. ಅಂತಿಮವಾಗಿ ಬಂದಿರುವ ಫಲಿತಾಂಶ ಏನೆಂದರೆ, ಯಾವುದೇ ಹೃದ್ರೋಗದ ಲಕ್ಷಣಗಳಿಲ್ಲದ ಜನರು ಹೃದಯರಕ್ತನಾಳದ ಕಾಯಿಲೆಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬುದು.

    ಹೃದಯರಕ್ತನಾಳದ ಅಪಾಯಕ್ಕೆ (ವಾಯು ಮಾಲಿನ್ಯ ಸೇರಿದಂತೆ) ಕಾರಣವಾಗುವ ಇತರ ಅಂಶಗಳಿಗೆ ತಾಳೆ ಹಾಕಿ ನೋಡಿದಾಗ ಸರಾಸರಿ 24 ಗಂಟೆಗಳ ಶಬ್ದದ ಮಟ್ಟದಲ್ಲಿ ಪ್ರತಿ 5-ಡೆಸಿಬಲ್ ಹೆಚ್ಚಳವು ಶೇ.34 ರಷ್ಟು ಏರಿಕೆಯೊಂದಿಗೆ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಗಂಭೀರ ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅವರು ಕಂಡುಕೊಂಡರು. ಇಷ್ಟೇ ಅಲ್ಲದೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಅಮಿಗ್ಡಾಲಾ (ಮೆದುಳಿನ ಒಳಗಿನ ಬೂದು ದ್ರವ್ಯ) ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಶಬ್ದವು ಈ ಭಾಗವನ್ನು ಕುಗ್ಗಿಸಲು ಕಾರಣವಾಗುತ್ತದೆ, ಹೀಗಾಗಿ ಹೆಚ್ಚಿನ ಡೆಸಿಬಲ್​ ಆಕ್ರಮಣಶೀಲತೆ ಮತ್ತು ಮೂಡ್ ಸ್ವಿಂಗ್​ಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಇದೇ ರೀತಿಯ ಅಧ್ಯಯನವನ್ನು ಜರ್ಮನಿಯ ಮೈಂಜ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ 35 ರಿಂದ 74 ವರ್ಷ ವಯಸ್ಸಿನ ಸುಮಾರು 15,000 ಜನರ ಮೇಲೆ ನಡೆಸಲಾಯಿತು. ಸಂಗೀತ ಅಥವಾ ಶಬ್ದ ಒಂದು ನಿರ್ದಿಷ್ಟ ಮಿತಿಯ ನಂತರ ಹೆಚ್ಚಾದರೆ, ಅದು ಮಾನವ ಹೃದಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಒಬ್ಬ ವ್ಯಕ್ತಿಯು ಜೋರಾದ ಸಂಗೀತಕ್ಕೆ ಒಡ್ಡಿಕೊಂಡಾಗ ಅವರ ಹೃದಯ ಬಡಿತವು ವೇಗವಾಗಿ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

    ಅನಿಮಿಯತ ಹೃದಯಬಡಿತವನ್ನು ಆರ್ಟಿಯಲ್​ ಫೈಬ್ರಿಲೇಷನ್​ ಎಂದು ಕರೆಯಲಾಗುತ್ತದೆ. ಇದರಿಂದ ಹೃದಯಾಘಾತ, ಮೆದುಳಿನ ಸ್ಟ್ರೋಕ್​ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆ ಎದುರಾಗುತ್ತವೆ. ರಕ್ತದ ಒತ್ತಡವನ್ನು ಹೆಚ್ಚಿಸುವ ಯಾವುದೇ ಚಟುವಟಿಕೆಯು ಅನಿಮಿಯತ ಹೃದಯಬಡಿತವನ್ನು ಪ್ರಚೋದಿಸುತ್ತದೆ. ಅಬ್ಬರದ ಸಂಗೀತದಿಂದಲೂ ಇದು ಸಂಭವಿಸುತ್ತದೆ. ಹೃದಯಬಡಿತ ಹೆಚ್ಚಾದಾಗ ರಕ್ತವು ಹೃದಯದ ಮೇಲಿನ ಎರಡು ಕೋಣೆಗಳಿಗೆ ಸರಿಯಾಗಿ ತಲುಪುವುದಿಲ್ಲ. ಇದರಿಂದಾಗಿ ಕೆಳಗಿನ ಕೋಣೆಗಳ ರಕ್ತದ ಹರಿವಿಗೆ ತೊಂದರೆಗೊಳಗಾಗುತ್ತದೆ ಮತ್ತು ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಅಕ್ರಮ ತಡೆಗೆ ಐರಿಸ್ ಸ್ಕ್ಯಾನರ್​: ಕಡಿಮೆ ಪಡಿತರ ಕೊಟ್ಟರೆ ಸೈರನ್ ಕೂಗುವ ಯಂತ್ರ

    ಅಬ್ಬರದ ಸಂಗೀತವನ್ನು ಆದಷ್ಟು ನಿರ್ಲಕ್ಷಿಸಿ
    ಅತಿಯಾದ ಸಂಗೀತಕ್ಕೆ ಒಡ್ಡಿಕೊಳ್ಳುವುದನ್ನು ಆದಷ್ಟು ನಿರ್ಲಕ್ಷಿಸುವುದು ಒಳ್ಳೆಯದು. ಅತಿಯಾದ ಶಬ್ದವು ಅಥವಾ ಸಂಗೀತವು ಕಿವಿಯಲ್ಲಿನ ಸಂವೇದನಾ ಕೋಶಗಳು ಮತ್ತು ರಚನೆಗಳನ್ನು ಆಯಾಸಗೊಳಿಸುತ್ತದೆ. ನಿರಂತರವಾಗಿ ಹೆಚ್ಚು ಡೆಸಿಬಲ್​ಗೆ ಒಡ್ಡಿಕೊಂಡರೆ ಅವುಗಳು ಹಾನಿಯಾಗಿ, ಶಾಶ್ವತವಾಗಿ ಕಿವುಡರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅನೇಕ ಸಮಯಗಳವರೆಗೆ ಹೆಡ್​ಫೋನ್ ಬಳಸುವ ಹವ್ಯಾಸವೂ ಕೂಡ ತುಂಬಾ ಅಪಾಯಕಾರಿ.

    ಒಬ್ಬ ವ್ಯಕ್ತಿ 100 ಡೆಸಿಬಲ್ ಅಥವಾ 15 ನಿಮಿಷಗಳ ಕಾಲ ಸಂಗೀತವನ್ನು ಕೇಳುವುದನ್ನು ತಪ್ಪಿಸಬೇಕು ಏಕೆಂದರೆ ಅದು ಶ್ರವಣ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 50-70 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವನ್ನು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ, ಇದು ವ್ಯಕ್ತಿಯ ಹೃದಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಎರಡು ಯುವಜನರಲ್ಲಿ ಒಬ್ಬರು ಜೋರಾಗಿ ಸಂಗೀತ ಮತ್ತು ಇತರ ಮನರಂಜನಾ ಶಬ್ದಗಳಿಗೆ ದೀರ್ಘಕಾಲದ ಮತ್ತು ಅತಿಯಾದ ಒಡ್ಡುವಿಕೆಯಿಂದ ಶ್ರವಣ ನಷ್ಟದ ಅಪಾಯವನ್ನು ಹೊಂದಿರುತ್ತಾರೆ. (ಏಜೆನ್ಸೀಸ್​)

    ನಿನಗೋಸ್ಕರ ಯಾವ ಮಟ್ಟಕ್ಕಾದ್ರೂ ಹೋಗ್ತೀನಿ… I Love You ಜಾಕ್ವೆಲಿನ್​ ಎಂದ ಮಹಾವಂಚಕ ಸುಕೇಶ್​

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನ ಹತ್ಯೆ​ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ಬರೀ ಲೈಂಗಿಕ ಕ್ರಿಯೆಯದ್ದೇ ಉಲ್ಲೇಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts