More

    ಸೋಲು-ಗೆಲವು ಸಮಾನಾಗಿ ಸ್ವೀಕರಿಸಿ

    ಮಾನ್ವಿ: ಕ್ರೀಡೆಯಲ್ಲಿ ಸೋಲು ಗೆಲವು ಸಹಜ. ಅವುಗಳನ್ನು ಸಮನಾಗಿ ಸ್ವೀಕರಿಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಯುವಕರಿಗೆ ಸಲಹೆ ನೀಡಿದರು.

    ಇದನ್ನೂ ಓದಿ: ಸೋಲು-ಗೆಲವು ಸಮನಾಗಿ ಸ್ವೀಕರಿಸಿ

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಮಾನ್ವಿ ಪ್ರೀಮಿಯರ್ ಲೀಗ್ ಸೀಜನ್-2 ಎಂಪಿಎಲ್ ಟ್ರೋಫಿ ಕ್ರಿಕೇಟ್ ಟೂರ್ನ್‌ಮೆಂಟ್‌ನ್ನು ಉದ್ಘಾಟಿಸಿ ಮಾತನಾಡಿದರು.

    ಇಂದಿನ ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕ್ರಿಕೆಟ್ ಆಟ ಗೆಲ್ಲುವ ಕ್ರೀಡಾಪಟಿಗಳಿಗೆ ಮೊದಲ ಬಹುಮಾನವಾಗಿ 1 ಲಕ್ಷ ರೂ. ನೀಡಲಾಗುತ್ತದೆ ಎಂದರು. ಕ್ರೀಡಾ ಆಸಕ್ತರು ಆಟಗಳನ್ನು ಹಾಡಲು ಅನುಕೂಲವಾಗಲಿ ಎಂದು ಶಾಸಕರಿದ್ದ ವೇಳೆ 5 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನು ನಿರ್ಮಾಣಮಾಡಲಾಗಿದೆ ಎಂದು ತಿಳಿಸಿದರು.

    ಕ್ರಿಕೇಟ್ ಟೂರ್ನ್‌ಮೆಂಟ್‌ನಲ್ಲಿ 8 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದವು. ಮುಖಂಡರಾದ ಪುರಸಭೆ ಸದಸ್ಯೆ ಯಶೋದಮ್ಮ ಮಹದೇವಪ್ಪ, ರವಿಕುಮಾರ, ರಾಜಾ ಶ್ಯಾಮಸುಂದರ ನಾಯಕ, ರಾಜಾ ರಾಮಚಂದ್ರನಾಯಕ, ಶರಣಪ್ಪಮೆದಾ, ವೆಂಕೋಬ, ರಹಮತ್ ಅಲಿ, ಮೇಟಿಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts