More

    ಕೊಳ್ಳೇಗಾಲದಲ್ಲಿ ‘ಕಾಡುಪಾಪ’ಗಳನ್ನು ಸೆರೆ‌ ಹಿಡಿದು ಮಾರಾಟಕ್ಕಾಗಿ ಸಾಗಿಸುತ್ತಿದ್ದರ ಬಂಧನ

    ಚಾಮರಾಜನಗರ: ಅಪರೂಪದ ಪ್ರಾಣಿ ‘ಕಾಡುಪಾಪ’ಗಳನ್ನು ಸೆರೆ ಹಿಡಿದು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

    ಮಲೆ‌ ಮಹದೇಶ್ವರ ಬೆಟ್ಟದ ಗುರುಬಸಪ್ಪನೊಡ್ಡು ನಿವಾಸಿ ವೀರಭದ್ರ (58), ಮೈಸೂರಿನ ದೊಣ್ಣನಾಯಕಾನ್ಯ ಗ್ರಾಮದ ಪಿ.ರಾಜು ಬಂಧಿತರು. ಮತ್ತೊಬ್ಬ ಆರೋಪಿ ಮಹದೇಶ್ವರ ಬೆಟ್ಟದ ಆನೆಗೊಲದ ಮಹದೇವ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

    ಬಂಧಿತರು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಅರಿಶಿಣ ಫ್ಯಾಕ್ಟರಿ ಮುಂದೆ ಬುಧವಾರ ರಾತ್ರಿ ಬೈಕ್​ನಲ್ಲಿ ಎರಡು ಕಾಡುಪಾಪಗಳನ್ನು ಕಬ್ಬಿಣದ ಪಂಜರ ಸಮೇತ ಚೀಲದಲ್ಲಿ ಹಾಕಿಕೊಂಡು ಬೆಂಗಳೂರು ಕಡೆ ಮಾರಾಟ ಮಾಡುವುದಕ್ಕೆ ಕೊಳ್ಳೇಗಾಲದತ್ತ ಬರುತ್ತಿದ್ದರು.

    ಕೊಳ್ಳೇಗಾಲದಲ್ಲಿ 'ಕಾಡುಪಾಪ'ಗಳನ್ನು ಸೆರೆ‌ ಹಿಡಿದು ಮಾರಾಟಕ್ಕಾಗಿ ಸಾಗಿಸುತ್ತಿದ್ದರ ಬಂಧನ

    ಈ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯರಾಜ್ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿದಳದ ಹೆನ್​ ಕಾನ್ಸ್​ಟೇಬಲ್ ರಾಮಚಂದ್ರ, ತಕ್ಕಿವುಲ್ಲಾ, ಶಂಕರ್, ಬಸವರಾಜು, ಸ್ವಾಮಿ, ಕಾನ್ಸ್​ಟೇಬಲ್ ಬಸವರಾಜು, ಚಾಲಕ ಪ್ರಭಾಕರ್ ಇದ್ದರು.

    ಮಗನಿಂದಲೇ ತಾಯಿಗೆ ಮಹಾ ಮೋಸ: ಮಂಚದ ಮೇಲೆ ಮಲಗಿಕೊಂಡೇ ಎಸಿ ಕೋರ್ಟ್​ಗೆ ಬಂದ ವೃದ್ಧೆ! ಕೊಳ್ಳೇಗಾಲದಲ್ಲಿ ಘಟನೆ

    ಪತ್ನಿಯ ಕಿರುಕುಳ: ಮದ್ವೆಯಾದ ಮೂರೇ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಪತಿ

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ಕತ್ತು ಕೊಯ್ದ ಸ್ಥಿತಿಯಲ್ಲಿ ಹಾಸ್ಟೆಲ್​ನ ಶೌಚಗೃಹದಲ್ಲಿ ಬಿಇ ವಿದ್ಯಾರ್ಥಿ ಶವ ಪತ್ತೆ! ಕಾಲೇಜಿಗೆ ಸೇರಿದ 14 ದಿನಕ್ಕೇ ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts