More

    ಕೋವಿಡ್-19 ಕಾಲದ ಬೂಟುಗಳು: ಸಾಮಾಜಿಕ ಅಂತರ ಕಾಪಾಡಲು ಸಹಕಾರಿ

    ನವದೆಹಲಿ: ಈ ಕರೊನಾ ವೈರಸ್ ಹರಡುವಿಕೆ ಜಗತ್ತಿನಲ್ಲಿ ಅನೂಹ್ಯ ಬದಲಾವಣೆಗಳನ್ನು ತರುತ್ತಿದೆ.
    ಕರೊನಾ ವೈರಸ್​ ವಿರುದ್ಧ ಜಾಗೃತಿ ಮೂಡಿಸುವ ಕರೊನಾ ವೈರಸ್ ಹೇರ್​​ಸ್ಟೈಲ್ ಕೀನ್ಯಾದಲ್ಲಿ ಪ್ರಸಿದ್ಧಿಗೆ ಬಂದದ್ದಾಯಿತು. ಮಾಸ್ಕ್ ಧರಿಸುವುದು ಕಡ್ಡಾಯವಾದ ಮೇಲೆ ವಿವಾಹ ಮಹೋತ್ಸವದಲ್ಲಿ ವಧು-ವರರ ರೇಷ್ಮೆ ಪೋಷಾಕುಗಳಲ್ಲಿ ಮಾಸ್ಕ್ ಕೂಡ ಸ್ಥಾನ ಗಿಟ್ಟಿಸಿತು. ಇದೀಗ ಪಾದರಕ್ಷೆಯ ಸರತಿ.
    ರೊಮೇನಿಯನ್ ಚಮ್ಮಾರನೊಬ್ಬ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಜನರಿಗೆ ಅನುಕೂಲವಾಗುವಂತೆ ಉದ್ದನೆಯ ಮೂತಿಯ ಬೂಟುಗಳನ್ನು ತಯಾರಿಸಿದ್ದು, ಸಾವಿರಾರು ಜನರ ಗಮನ ಸೆಳೆದಿದೆ.
    ರೊಮೇನಿಯಾದ ಕ್ಲೂಜ್‌ನ ಟ್ರಾನ್ಸಿಲ್ವೇನಿಯ ನಗರದ ಬೂಟು ತಯಾರಕ ಗ್ರಿಗೋರ್ ಲುಪ್, ಯಾರಿಸುತ್ತಿರುವ ಬೂಟು ಯುರೋಪಿಯನ್ ಗಾತ್ರ (75) ದಲ್ಲಿರುತ್ತವೆ. 

    ಇದನ್ನೂ ಓದಿ : ನಿತ್ಯವೂ ನೂರಾರು ನಿರ್ಗತಿಕರಿಗೆ ಕೈ ತುತ್ತು ನೀಡುತ್ತಿದ್ದಾರೆ ಈ ದಂಪತಿ

    “ಈ ಬೂಟುಗಳನ್ನು ಧರಿಸಿದ ಇಬ್ಬರು ಪರಸ್ಪರ ಮುಖಾಮುಖಿಯಾಗಿದ್ದರೆ, ಅವರ ನಡುವೆ ಸುಮಾರು ಒಂದೂವರೆ ಮೀಟರ್ ಇರುತ್ತದೆ.” ಎನ್ನುತ್ತಾರೆ ಲುಪ್. 2001 ರಲ್ಲಿ ಪಾದರಕ್ಷೆ ಉತ್ಪಾದನಾ ಕೇಂದ್ರ ಆರಂಭಿಸಿದ ಅವರು ಬೂಟುಗಳನ್ನು ಸ್ವತಃ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ದೇಶಾದ್ಯಂತ ಹಲವೆಡೆಯಿಂದ ಇವರಿಗೆ ಬೂಟು ತಯಾರಿಕೆಗೆ ಆರ್ಡರ್​​ಗಳು ಬರುತ್ತವೆ.
    ನಟರಿಗಾಗಿ ಮಾಡಿದ ಉದ್ದನೆಯ ಪಾದರಕ್ಷೆಗಳ ಮಾದರಿಯನ್ನು ಇವರು ಉಳಿಸಿಕೊಂಡಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುವ ಒಂದು ಜೋಡಿ ಬೂಟ್ ತಯಾರಿಸಲು ಅವರಿಗೆ ಎರಡು ದಿನಗಳು ಬೇಕಾಗುತ್ತದೆ, ಇದಕ್ಕೆ ಅಂದಾಜು ಒಂದು ಚದರ್ ಮೀಟರ್ ಚರ್ಮ ಬೇಕಾಗುತ್ತದೆ. ಒಂದು ಜೋಡಿ ಶೂ.ಗಳ ದರ ಅಂದಾಜು 11,400 ರೂ.ಇರುತ್ತದೆ. 

    ಕೋವಿಡ್-19 ಕಾಲದ ಬೂಟುಗಳು: ಸಾಮಾಜಿಕ ಅಂತರ ಕಾಪಾಡಲು ಸಹಕಾರಿ

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಬಾಲಕಿ ಈಗ ಎಂಟು ತಿಂಗಳ ಗರ್ಭಿಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts