More

    KGF ಸಿನಿಮಾ ಬಗ್ಗೆ ವಿದೇಶಿಗನಿಂದ ರ್ಯಾಪ್ ಸಾಂಗ್, ಪ್ರತಿಕ್ರಿಯೆ ನೀಡಿದ ಪ್ರಶಾಂತ್ ನೀಲ್

    ‘ಕೆಜಿಎಫ್’ ಕನ್ನಡ ಚಿತ್ರರಂಗದ ಕಡೆ ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಅದ್ಭುತ ಸಿನಿಮಾ. ಚಾಪ್ಟರ್ 1 ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಹಾಗಾಗಿ ಚಾಪ್ಟರ್ 2 ಚಿತ್ರಕ್ಕಾಗಿ ಎಲ್ಲೆಡೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಆದರೆ ಕೋವಿಡ್ ಕಾರಣದಿಂದ ಇದು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಲಂಡನ್ ಮೂಲದ ವ್ಯಕ್ತಿಯೊಬ್ಬ ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿ, ಅದಕ್ಕಾಗಿ ವಿಶೇಷವಾದ ಸಾಂಗ್ ಮಾಡಿದ್ದಾನೆ.

    ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ನೋಡಿದ ಲಂಡನ್ ಪ್ರಜೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಾನು ಮೊದಲ ಬಾರಿ ಭಾರತದ ಸಿನಿಮಾ ನೋಡಿದ್ದು, ಅದು ಕೆಜಿಎಫ್. ಈ ಸಿನಿಮಾ ನೋಡಿದಮೇಲೆ ಹಾಡೊಂದನ್ನು ಮಾಡಿದ್ದೇನೆ. ನೀವೆಲ್ಲರೂ ನೋಡಿ ಎಂಜಾಯ್ ಮಾಡ್ತೀರಾ ಅಂತ ನನಗೆ ಭರವಸೆ ಇದೆ’ ಎಂದಿದ್ದಾರೆ. ಈ ಹಾಡು ನೋಡಿದ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಚೆನ್ನಾಗಿದೆ, ಧನ್ಯವಾದ ಎಂದು ಹೇಳಿದ್ದಾರೆ. 

    ಜೀ ತೆಕ್ಕೆಗೆ ಸ್ಯಾಟಲೈಟ್:

    ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕನ್ನು ಜೀ ಗ್ರೂಪ್ ಖರೀದಿಸಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಟಿವಿ ಹಕ್ಕನ್ನು ಜೀ ಸಂಸ್ಥೆ ಪಡೆದುಕೊಂಡಿದೆ.
    ಸದ್ಯದ ಮಾಹಿತಿ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.

    ಇಲ್ಲಿದೆ ನೋಡಿ ರ್ಯಾಪ್ ಸಾಂಗ್:

    ಭೂಕುಸಿತದ ಭಯಾನಕ ವಿಡಿಯೋ: ಬಸ್​​ನಲ್ಲಿದ್ದ ಪ್ರಯಾಣಿಕರು ಬಚಾವಾಗಿದ್ದೆ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts