More

    ಅತ್ತೆ-ಸೊಸೆಯಂತೆ ಲೋಕಅದಾಲತ್​ಗೆ ಬಂದವರು ಅಮ್ಮ-ಮಗಳಂತೆ ಹಾರ ಬದಲಾಯಿಸಿಕೊಂಡ್ರು!

    ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಅದಾಲತ್‌ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ಸು ಕಂಡಿದೆ.

    ವಿಮಾ ಕ್ಲೈಮ್ ಮೊತ್ತ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಅತ್ತೆ ಸೊಸೆ ನಡುವಿನ ಮನಸ್ತಾಪವನ್ನು ಈ ಲೋಕಅದಾಲತ್​ ಕೊನೆಯಾಗಿಸಿದೆ. ಆದಾಲತ್‌ಗೆ ಅತ್ತೆ-ಸೊಸೆಯಂತೆ ಹಾಜರಾಗಿದ್ದವರು ರಾಜೀ ಬಳಿಕ ತಾಯಿ- ಮಗಳಂತೆ ಒಂದಾಗಿ ತೆರಳಿದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಇದನ್ನೂ ಓದಿರಿ ಜಾರಕಿಹೊಳಿ ಸಿಡಿ ಪ್ರಕರಣ ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪೋ?

    ಮಾಡನಾಯಕನಹಳ್ಳಿ ಕರಿಬಸಮ್ಮರ ಪುತ್ರ ಚಿದಾನಂದಪ್ಪ ಅಪಘಾತದಲ್ಲಿ ನಿಧನ ಹೊಂದಿದ್ದು, ವಿಮೆ ಪಾಲಿಸಿ ಮೊತ್ತ 8 ಲಕ್ಷ ರೂ. ಹಂಚಿಕೆ ವಿಷಯದಲ್ಲಿ ಅತ್ತೆ-ಸೊಸೆ ನಡುವೆ ಉಂಟಾದ ಮನಸ್ತಾಪ ಬಗೆಹರಿಯದೆ ಒಂದೂವರೆ ವರ್ಷದ ಹಿಂದೆ ಕೋರ್ಟ್ ಮೆಟ್ಟಿಲೇರಿತ್ತು.

    ಅದಾಲತ್‌ನಲ್ಲಿದ್ದ ಹಿರಿಯ ನ್ಯಾಯಾಧೀಶರಾದ ಜಿತೇಂದ್ರನಾಥ್, ಗಿರೀಶ್, ವಾದಿ-ಪ್ರತಿವಾದಿ ವಕೀಲರಾದ ವಿಶ್ವನಾಥಯ್ಯ, ಎಚ್.ಎಸ್.ಮಂಜುನಾಥ್, ಎಲ್‌ಐಸಿ ಅಧಿಕಾರಿ ಮಧುಸೂದನ್, ಮಧ್ಯಸ್ಥಗಾರ ಚಂದ್ರಪ್ಪ ಮತ್ತಿರರ ಸಮ್ಮುಖದಲ್ಲಿ ಅತ್ತೆ-ಸೊಸೆ ಪರಸ್ಪರ ಹಾರ ಬದಲಾಯಿಸಿಕೊಂಡು ಕೇಸಿನ ರಾಜಿಗೆ ಸಮ್ಮತಿಸಿದರು.

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts