More

    ಲೋಕ್ ಅದಾಲತ್‌ನಲ್ಲಿ 365 ಪ್ರಕರಣಗಳು ಇತ್ಯರ್ಥ

    ಯಲಬುರ್ಗಾ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಭೂಸ್ವಾಧೀನ, ಅಮಲ್ಜಾರಿ, ಚೆಕ್‌ಬೌನ್ಸ್, ಮೂಲದಾವಾ, ಜನನ ನೋಂದಣಿ ಹಾಗೂ ಐಪಿಸಿ ಪ್ರಕರಣ ಸೇರಿ ಒಟ್ಟು 365 ಪ್ರಕರಣಗಳು ಇತ್ಯರ್ಥಗೊಂಡವು.

    ಇದನ್ನೂ ಓದಿ: 958 ಪ್ರಕರಣ ರಾಜಿ ಸಂಧಾನ

    ಅದಾಲತ್‌ನಲ್ಲಿ 138 ಭೂಸ್ವಾಧೀನ ಪ್ರಕರಣದಲ್ಲಿ ರೈತರಿಗೆ ಒಟ್ಟು 7.78 ಕೋಟಿ ರೂ, 2 ಅಪಘಾತ ಪ್ರಕರಣದಲ್ಲಿ ಅರ್ಜಿದಾರರಿಗೆ 7 ಲಕ್ಷ ರೂ. ಪರಿಹಾರ ಬಂದಿದೆ. 8 ಚೆಕ್ ಬೌನ್ಸ್, 140 ಜನನ ನೋಂದಣಿ ಪ್ರಕರಣ, 35 ಮೂಲದಾವಾ ಪ್ರಕರಣ, 3 ಅಮಲ್ಜಾರಿ, 6 ಐಪಿಸಿ ಪ್ರಕರಣ, 7 ಬ್ಯಾಂಕಿನ ಸಾಲ ವಸೂಲಾತಿ ಸೇರಿ ಒಟ್ಟು 365 ಪ್ರಕರಣ ಇತ್ಯರ್ಥ.

    ಒಂದಾದ ದಂಪತಿ: ದಾಂಪತ್ಯ ಜೀವನದಲ್ಲಿ ಬಿರುಕು ಬಂದು ವಿಚ್ಛೇದನ ಕೋರಿ ಇತ್ತೀಚೆಗೆ ನ್ಯಾಯಾಲಯ ಮೆಟ್ಟಿಲು ಏರಿದ್ದ ತುಮ್ಮರಗುದ್ದಿಯ ದಂಪತಿಗಳು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಂದಾದರು. ಒಂದಾಗಿ ಜೋಡಿಗೆ ಹಾರ ಹಾಕಿಸುವ ಮೂಲಕ ನ್ಯಾಯಧೀಶರು ಶುಭ ಹಾರೈಸಿದರು.

    ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಕಣ್ಣೂರ, ಸಿವಿಲ್ ನ್ಯಾಯಾಧೀಶೆ ಆಯಿಶಾಬಿ ಮಜೀದ್, ಲೋಕ ಅದಾಲತ್ ಸಂದಾನಕಾರ ಡಿ.ಎಚ್.ನದಾಫ್, ಅಪರ ಸರ್ಕಾರಿ ವಕೀಲ ಎ.ಎಂ.ಶಂಕರಗೌಡ, ಎ.ಎಂ.ಪಾಟೀಲ್, ಇಂದಿರಾ ಉಳ್ಳಾಗಡ್ಡಿ, ಉಮಾ ಕಲ್ಲೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts