ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌ಡಿಕೆ ಕಣಕ್ಕೆ: ನಾಳೆ ನಗರದಲ್ಲಿ ಎರಡು ಪಕ್ಷದ ನಾಯಕರಿಂದ ಮಹತ್ವದ ಸಭೆ…!

BJP and JDS
Published on

ಮಂಡ್ಯ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಹುತೇಕ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇದರ ಬೆನ್ನಲ್ಲೆ ಎರಡು ಪಕ್ಷದ ನಾಯಕರು ಕ್ಷೇತ್ರವಾರು ಸಭೆ ಮಾಡುತ್ತಿದ್ದು, ಮಾ.28ರಂದು ಮಂಡ್ಯ ನಗರದಲ್ಲಿಯೂ ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 11ಗಂಟೆಗೆ ನಗರದ ಸುರಭಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಭೆ ಆಯೋಜಿಸಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಎರಡು ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೊದಲ ಹಂತದ ಸಭೆ ಆಗಿರುವುದರಿಂದ ಸೀಮಿತ ಸಂಖ್ಯೆಯ ಮುಖಂಡರೊಂದಿಗೆ ಚರ್ಚೆ ನಡೆಯಲಿದೆ. ಮುಂದಿನ ಭಾಗವಾಗಿ ಕ್ಷೇತ್ರವಾರು ಸಮಾವೇಶಕ್ಕೆ ಯೋಜನೆ ರೂಪಿಸಲಾಗಿದೆ.
ಪ್ರಮುಖವಾಗಿ ಚುನಾವಣೆಯ ಎದುರಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸುವುದರ ಜತೆಗೆ ಮೈತ್ರಿ ಪಕ್ಷದ ಅಭ್ಯರ್ಥಿ ಒಗ್ಗಟ್ಟಾಗಿದ್ದಾರೆಂದು ತೋರಿಸುವುದಾಗಿದೆ. ಮಾತ್ರವಲ್ಲದೆ ಯಾವುದೇ ಅಸಮಾಧಾನವಿದ್ದರೂ ಬಗೆಹರಿಸುವ ನಿಟ್ಟಿನಲ್ಲಿ ಸಭೆಯ ಪ್ರಮುಖ ವಿಷಯವಾಗಿರಲಿದೆ.

Vijayendra HDK
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net