More

    ಪಾದರಾಯನಪುರದಿಂದ ಗೋಡೆ ಹಾರಿ ಹೋಗಿ, ತಿರುಗಾಡಿ ಬರುವ ಜನರು!

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ಪಾದರಾಯನಪುರ ವಾರ್ಡ್‌ನಲ್ಲಿ ಸೀಲ್‌ಡೌನ್ ಮಾಡಲಾಗಿದ್ದು, ಅಲ್ಲಿನ ಜನರು ಅನಧಿಕೃತವಾಗಿ ಗೋಡೆ ಕಾಂಪೌಂಡ್ ಹಾರಿ ಸಂಚಾರ ಮಾಡುತ್ತಿದ್ದಾರೆ!

    ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರು ಕಂಡುಬಂದ 20 ಪ್ರದೇಶಗಳನ್ನು ಕಂಟೇನ್‌ಮೆಂಟ್ ಮಾಡಲಾಗಿದೆ. ಇದರಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದಿರುವ ಪಾದರಾಯನಪುರ ವಾರ್ಡ್‌ನಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಆದರೆ ಇಲ್ಲಿನ ಜನರು ಅನಗತ್ಯವಾಗಿ ಕಾಂಪೌಂಡ್ ಹಾಗೂ ಗೋಡೆಗಳನ್ನು ಹಾರಿ ಬೇರೆಡೆ ಹೋಗುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಇದನ್ನೂ ಓದಿ VIDEO | ಮೊಬೈಲ್​ ಕಳ್ಳರನ್ನು ಬೆನ್ನಟ್ಟಿ ಹಿಡಿದ ನಾಗರಿಕರು

    ಇದೆಲ್ಲವನ್ನೂ ನೋಡಿ ಆರೋಗ್ಯ ಸಚಿವ ಶ್ರೀರಾಮುಲು ಚಿಂತಿತರಾಗಿದ್ದಾರೆ. ‘‘ಇವರ ಅನಧಿಕೃತ ಸಂಚಾರದಿಂದ ಇತರ ಜನರಿಗೂ ಸೋಂಕು ಹರಡುತ್ತದೆ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’’ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ವಾರ್ಡ್‌ನಲ್ಲಿ ವಿಧಿಸಲಾಗಿರುವ ಸೀಲ್‌ಡೌನ್ ವಿರೋಧಿಸಿ ಪುಂಡಾಟ ನಡೆಸಿದವರಲ್ಲಿ ನಾಲ್ವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜತೆಗೆ ಇಲ್ಲಿ ನಡೆಸಲಾದ ರ‌್ಯಾಂಡಮ್ ಪರೀಕ್ಷೆಯಲ್ಲಿ 7 ಹಾಗೂ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 30ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ.

    ಈ ವಾರ್ಡ್‌ನಲ್ಲಿ ಸಮದಾಯಕ್ಕೆ ಸೋಂಕು ಹರಡಿರುವ ಭೀತಿ ಎದುರಾಗಿರವ ವೇಳೆಯಲ್ಲಿ, ಇಲ್ಲಿನ ಜನರು ಪೊಲೀಸ್ ಪುರುಷರು ಹಾಗೂ ಮಹಿಳೆಯರು ಹೊರ ಹೋಗುವ ಮೂಲಕ ಪಕ್ಕದ ವಾರ್ಡ್‌ಗಳಿಗೂ ಸೋಂಕು ಬರಲು ಕಾರಣವಾಗುತ್ತಿದ್ದಾರೆ.

    ಇದನ್ನೂ ಓದಿ ದೇಶದಲ್ಲಿ ರೈಲು ಸಂಚಾರ ಆರಂಭಕ್ಕೆ ನಾಲ್ವರು ಸಿಎಂಗಳ ವಿರೋಧ

    ತನಿಖೆಗೆ ಮಾಡಲು ಸೂಚನೆ
    ಪಾದರಾಯನಪುರದ ಸೀಲ್‌ಡೌನ್ ಪ್ರದೇಶದಲ್ಲಿ ಕ್ವಾರಂಟೈನ್‌ನಲ್ಲಿರಬೇಕಾದ ಕೆಲ ಮಹಿಳೆಯರು ಅನಧಿಕೃತವಾಗಿ ಹೊರ ಹೋಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ಸೂಚಿಸಲಾಗಿದೆ. ನಾಡಿನ ಜನರ ಆರೋಗ್ಯದ ವಿಷಯದಲ್ಲಿ ಆಟವಾಡುವ ಇಂತಹ ಘಟನೆ ಸಹಿಸುವುದಿಲ್ಲ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ರಾಜ್ಯದ ಜನರ ಆರೋಗ್ಯ ಕಾಪಾಡುವುದೇ ನಮ್ಮ ಮುಖ್ಯ ಧ್ಯೇಯ ಎಂದು ಶ್ರೀರಾಮುಲು ತಿಳಿಸಿದ್ದಾರೆ.

    ಮುಂಬೈ, ಅಹಮದಾಬಾದ್​ನಿಂದ ರಾಜ್ಯದಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts