VIDEO | ಮೊಬೈಲ್​ ಕಳ್ಳರನ್ನು ಬೆನ್ನಟ್ಟಿ ಹಿಡಿದ ನಾಗರಿಕರು

theft may
Published on

ಬೆಂಗಳೂರು: ಮೊಬೈಲ್​ ಕದಿಯುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಂದ್ರಾ ಲೇಔಟ್‌ನ ಸೈಯದ್ ನದೀಮ್(23), ಚೋಳರಪಾಳ್ಯದ ಇರ್ಫಾನ್​ ಪಾಷಾ (20) ಮತ್ತು ಪಾದರಾಯನಪುರದ ಮೌಷಕ್ ಅಹಮ್ಮದ್ (44) ಬಂಧಿತರು.

ಸೋಮವಾರ ಬೆಳಗ್ಗೆ ಅಂಗವಿಕಲನ ಮೊಬೈಲ್​ ಕಸಿದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಮೂವರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದಕ್ಕೂ ಮೊದಲು ಇವರು ಸಿದ್ದಾಪುರ, ಕನಕಪುರ ರಸ್ತೆ ಹಾಗೂ ಬನಶಂಕರಿಯಲ್ಲಿ ಮೂರು ಮೊಬೈಲ್​ ಕಳವು ಮಾಡಿದ್ದರು.

ಮೊಬೈಲ್​ನಲ್ಲಿ ಮಾತನಾಡಿಕೊಂಡು ದಾರಿಯಲ್ಲಿ ನಡೆದು ಹೋಗುತ್ತಿರುವವರನ್ನು ಟಾರ್ಗೆಟ್​ ಮಾಡಿ ಕಳವು ಮಾಡುತ್ತಿದ್ದರು.

ಸಿದ್ದಾಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳು ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net