More

    ಕುಸಿದು ಬಿದ್ದ ಗೋಡೆ, ಛಾವಣಿ

    ಕುರುಗೋಡು: ಪಟ್ಟಣ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ 42.04 ಮಿ.ಮೀ. ಮಳೆಯಾಗಿದ್ದರಿಂದ ಗುತ್ತಿಗನೂರು ಗ್ರಾಮದ ರೈತ ಚಾನಾಳ್ ಗುರುಸಿದ್ದಪ್ಪ, ದಮ್ಮೂರು ಮಲ್ಲಮ್ಮ ನಾಗನಗೌಡ, ಕೋಳೂರು ಬಡಿಗೇರ್ ಬಸವರಾಜ್ ಆಚಾರಿ ಅವರ ಮನೆಯ ಗೋಡೆಗಳು, ಛಾವಣಿ ಸಂಪೂರ್ಣ ಕುಸಿದು ಬಿದ್ದಿವೆ. ಬಾದನಹಟ್ಟಿ ಮತ್ತು ಏರಂಗಳ್ಳಿ ಗ್ರಾಮಗಳ ನಡಯವಿನ ಹಳ್ಳದ ಸೇತುವೆಯ ದಡ ಸೋಸಿ ನೀರು ಹರಿಯುತ್ತಿದ್ದು, ಪಕ್ಕದ ನೂರಾರು ಎಕರೆ ಭತ್ತದ ಗದ್ದೆಗಳಿಗೆ ನುಗ್ಗಿದೆ. ಸಿದ್ದಮ್ಮನಹಳ್ಳಿ ಗ್ರಾಮದ ಹಳ್ಳದ ಸೇತುವೆ ಸಂಪೂರ್ಣ ಮುಳುಗಿ, ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಕುಡತಿನಿ, ಸಂಡೂರು, ತೋರಣಗಲ್ಲು ಮತ್ತಿತರ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

    ರುದ್ರಪಾದ ಗ್ರಾಮದ ಹಳ್ಳದ ಸೇತುವೆ ಮೇಲೆ ಎರಡು ದಿನದಿಂದ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ. ಈ ಸೇತುವೆ ಮೂಲಕ ಕಂಪ್ಲಿ, ಸಿರುಗುಪ್ಪ, ಸಿಂಧನೂರು, ರಾಯಚೂರು ಆದೋನಿ, ಕರ್ನೂಲ್ ಮತ್ತಿತರ ಊರುಗಳಿಗೆ, ಪಕ್ಕದ ರಾಜ್ಯಕ್ಕೆ ತೆರಳುವವರಿಗೆ ಸಂಕಷ್ಟ ಎದುರಾಗಿದೆ. ನದಿಯಲ್ಲಿ ಮೊಸಳೆಗಳ ಕಾಟ ತುಂಬಾ ಇರುವ ಕಾರಣ ಸೇತುವೆ ಮೇಲೆ ಬರುವ ಅಪಾಯವೂ ಇದೆ. ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಬಹುತೇಕ ಸರ್ಕಾರಿ ಶಾಲೆಗಳಿಗೆ ಮಳೆ ನೀರು ನುಗ್ಗಿದೆ. ಶಾಲೆಯ ಅಂಗಳ ಕೆಸರುಮಯವಾಗಿವೆ.


    ಕುಸಿದ ಮನೆಗಳಿಗೆ, ಜಲಾವೃತಗೊಂಡ ಜಮೀನುಗಳಿಗೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಸಂಗ್ರಹಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಕಳಿಸಿಕೊಡುವುದಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts