More

    ದೆಹಲಿಯ ಯುಮನಾ ತೀರದಲ್ಲಿ ಮನಕಲಕುವ ದೃಶ್ಯ: ಸ್ಮಶಾನದಿಂದ ಎಸೆದ ಕೊಳೆತ ಬಾಳೆಹಣ್ಣೇ ಇವರಿಗೆ ಊಟ!

    ನವದೆಹಲಿ: ಕರೊನಾ ಹೆಮ್ಮಾರಿಯಿಂದ ಜನರನ್ನು ರಕ್ಷಿಸುವ ಸಲುವಾಗಿ ವಿಶ್ವಾದ್ಯಂತ ಲಾಕ್‌ಡೌನ್‌ ಜಾರಿ ಮಾಡಿದ್ದರೂ, ಪ್ರತಿಯೊಬ್ಬರಿಗೂ ಆಹಾರಕ್ಕೆ ಕೊರತೆಯಾಗದಂತೆ ಸರ್ಕಾರಗಳು ಏನೆಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ಲಾಕ್‌ಡೌನ್‌ ಭೀಕರತೆಯನ್ನು ತೋರಿಸುವ ದೃಶ್ಯಗಳು ಕಾಣಿಸುತ್ತಲೇ ಇವೆ.

    ಅಂಥದ್ದೇ ಒಂದು ಮನಕಲಕುವ ದೃಶ್ಯ ಕಂಡುಬಂದದ್ದು ನವದೆಹಲಿಯ ಸ್ಮಶಾನ ಒಂದರಲ್ಲಿ. ಮೃತಪಟ್ಟವರ ಅಂತಿಮ ವಿಧಿವಿಧಾನಕ್ಕಾಗಿ ನಿಗಂಬೋಧ್ ಘಾಟ್‌ನ ಸ್ಮಶಾನದಲ್ಲಿ ಬಾಳೆಹಣ್ಣುಗಳನ್ನು ತಂದಿಡಲಾಗಿತ್ತು. ಆದರೆ ಅದು ಕೊಳೆತ ಕಾರಣ ಅದನ್ನು ಸಮೀಪವೇ ಇದ್ದ ಯುಮುನಾ ನದಿಯ ದಂಡೆಯಲ್ಲಿ ಎಸೆಯಲಾಗಿತ್ತು. ಹೀಗೆ ಬಾಳೆಹಣ್ಣುಗಳನ್ನು ಎಸೆಯುತ್ತಿರುವ ಸುದ್ದಿ ತಿಳಿಯುತ್ತಲೇ ಸಮೀಪವೇ ಇದ್ದ ವಲಸೆ ಕಾರ್ಮಿಕರು ಶರವೇಗದಲ್ಲಿ ಓಡೋಡಿ ಬಂದು ಆ ಬಾಳೆಹಣ್ಣುಗಳನ್ನು ಆರಿಸಿ ಆರಿಸಿ ತಿನ್ನುತ್ತಿದ್ದ ದೃಶ್ಯ ಮನಕಲಕುವಂತಿತ್ತು.

    ಇದು ಕೊಳೆತ ಹಣ್ಣು, ಹೇಗೆ ತಿನ್ನುತ್ತೀರಿ ಎಂದು ಅಲ್ಲಿಯೇ ಒಬ್ಬರನ್ನು ವಿಚಾರಿಸಿದಾಗ, ‘ಇಲ್ಲ ಇದು ಬಾಳೆ ಹಣ್ಣು, ಸುಲಭವಾಗಿ ಕೆಡುವುದಿಲ್ಲ. ನಾವು ಚೆನ್ನಾಗಿರುವ ಹಣ್ಣಗಳನ್ನು ಆರಿಸಿದರೆ ಅವು ಸ್ವಲ್ಪ ಕಾಲ ನಮಗೆ ಉಳಿಯುತ್ತವೆ” ಎಂದು ಸಿಕ್ಕಷ್ಟು ಹಣ್ಣುಗಳನ್ನು ಚೀಲಕ್ಕೆ ತುಂಬಿಸಿಕೊಂಡ.

    ‘ಈಗ ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಆದ್ದರಿಂದ ಬಾಳೆಹಣ್ಣುಗಳನ್ನು ಆಯ್ದುಕೊಳ್ಳುತ್ತಿದ್ದೇವೆ’ ಎಂದು ಉತ್ತರ ಪ್ರದೇಶದ ಅಲಿಗರ್‌ನ ವಲಸೆ ಕಾರ್ಮಿಕನೊಬ್ಬ ಹೇಳಿದ. ಲಾಕ್‌ಡೌನ್‌ ವಿಸ್ತರಣೆ ಆಗಿರುವ ಕಾರಣ ಸದ್ಯ ನಮಗೆ ಯಮುನಾ ತೀರವೇ ಮನೆಯಾಗಿದೆ. ಇಲ್ಲಿಯೇ ಉಳಿದುಕೊಂಡಿದ್ದೇವೆ’ ಎಂದರೆ, ಇನ್ನೊಬ್ಬ ಕಾರ್ಮಿಕ, ಎರಡು ದಿನಗಳಿಂದ ನನಗೆ ಆಹಾರ ಸಿಕ್ಕಿಲ್ಲ. ಆದ್ದರಿಂದ ಬಾಳೆಹಣ್ಣು ನೋಡಿದ ತಕ್ಷಣ ನನಗೆ ತಡೆದುಕೊಳ್ಳಲು ಆಗಲಿಲ್ಲ ಎಂದು ಹೇಳಿದ.

    ವಲಸಿಗರು ತಮ್ಮ ಊರುಗಳಿಗೆ ಹೋಗತೊಡಗಿದರೆ, ಸಾಂಕ್ರಾಮಿಕ ರೋಗವು ಶೀಘ್ರವಾಗಿ ಹರಡಬಹುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ ಆಗಿರುವ ಕಾರಣ, ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರನ್ನು ತಡೆದು ಒಂದು ಕಡೆ ಆಶ್ರಯ ನೀಡಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದೆ. ಆದರೂ, ಕೆಲ ವಲಸಿಗರಿಗೆ ಈ ವ್ಯವಸ್ಥೆ ಲಭಿಸಿಲ್ಲ, ಕೆಲವೆಡೆ ಆಹಾರಕ್ಕಾಗಿಯೂ ಈ ಕಾರ್ಮಿಕರು ಒದ್ದಾಡುವ ಪರಿಸ್ಥಿತಿ ಇದೆ.

    ಏಜೆನ್ಸೀಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts