More

    ಜೂನ್ 1 ರವರೆಗೆ ಮಹಾ ಲಾಕ್​ಡೌನ್ ವಿಸ್ತರಣೆ ; ರಾಜ್ಯ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ

    ಮುಂಬೈ : ಮುಂದುವರೆಯುತ್ತಿರುವ ಕರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ವಿಧಿಸಲಾಗಿರುವ ಲಾಕ್​ಡೌನ್​ಅನ್ನು ಜೂನ್ 1 ರ ಬೆಳಿಗ್ಗೆ 7 ಗಂಟೆವರೆಗೆ ವಿಸ್ತರಿಸಲಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಸೀತಾರಾಂ ಕುಂಟೆ ನಿನ್ನೆ ತಡವಾಗಿ ಈ ಆದೇಶ ಹೊರಡಿಸಿದ್ದಾರೆ.

    ಹಾಲಿ ಇರುವ ನಿರ್ಬಂಧಗಳು ಮೇ 15 ರ ಬೆಳಿಗ್ಗೆಗೆ ಅಂತ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ, ಈ ನಿರ್ಬಂಧಗಳನ್ನು ಮುಂದಕ್ಕೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಮುನ್ನ ಅವಕಾಶ ನೀಡಿದ್ದಂತೆಯೇ ಅಗತ್ಯ ವಸ್ತುಗಳ ಮಾರಾಟಕ್ಕೆ ಸೀಮಿತ ಅವಕಾಶ ಮುಂದುವರೆಯಲಿದೆ. 

    ಜೊತೆಗೆ, ಯಾವುದೇ ವ್ಯಕ್ತಿಗಳು ಮಹಾರಾಷ್ಟ್ರ ಪ್ರವೇಶಿಸುವ ಮುಂಚೆ 48 ಗಂಟೆಗಳ ಒಳಗೆ ಬಂದಿರುವ ಆರ್​ಟಿಪಿಸಿಆರ್​ ಪರೀಕ್ಷೆಯ ನೆಗೆಟೀವ್ ವರದಿಯನ್ನು ತೋರಿಸುವುದು ಕಡ್ಡಾಯ ಎನ್ನಲಾಗಿದೆ. (ಏಜೆನ್ಸೀಸ್)

    ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

    ಈ ಚಿತ್ರದಲ್ಲಿ ಜನಪ್ರಿಯ ಕಾಮೆಡಿಯನ್ ಇದ್ದಾರೆ… ಯಾರು ಹೇಳ್ತೀರಾ ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts