More

    ಲಾಕ್‌ಡೌನ್ ಸಡಿಲಗೊಳಿಸುವಾಗ ಮುನ್ನೆಚ್ಚರಿಕೆ ವಹಿಸಿ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

    ನವದೆಹಲಿ: ಏಕಾಏಕಿ ಲಾಕ್‌ಡೌನ್ ತೆರವುಗೊಳಿಸುವುದರಿಂದ ಸಮಸ್ಯೆಗಳು ಉದ್ಭವಿಸುವ ಅಪಾಯವಿದ್ದು, ಲಾಕ್‌ಡೌನ್ ಸಡಿಲಗೊಳಿಸುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

    ಡಬ್ಲ್ಯುಎಚ್‌ಒ ವಿಶೇಷ ರಾಭಾರಿ ಡೇವಿಡ್ ನಬರೋ, ಕೋವಿಡ್-19 ಕುರಿತು ನಡೆದ ಅಂತಾರಾಷ್ಟ್ರೀಯ ಆನ್‌ಲೈನ್ ಸಂವಾದದಲ್ಲಿ ಈ ಸೂಚನೆ ನೀಡಿದ್ದಾರೆ.

    ಲಾಕ್‌ಡೌನ್ ತೆರವುಗೊಳಿಸುವ ಮುನ್ನ ಆಯಾ ಪ್ರದೇಶಗಳಲ್ಲಿರುವ ಕರೊನಾ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿಕೊಂಡು ಆ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುವ ಮೂಲಕ ಸೋಂಕು ಬೇರೆ ಪ್ರದೇಶಗಳಿಗೆ ಹರಡುವುದನ್ನು ತಪ್ಪಿಸುವ ಹಾಗೂ ಸಮುದಾಯ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಈ ಆನ್‌ಲೈನ್ ಸಂವಾದದಲ್ಲಿ ಜಗತ್ತಿನ ಪ್ರಮುಖ ಆರೋಗ್ಯ ತಜ್ಞರು ಉಪಸ್ಥಿತರಿದ್ದರು. ಕರೊನಾ ಲಸಿಕೆ ಹಾಗೂ ಲಾಕ್‌ಡೌನ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. (ಏಜೆನ್ಸೀಸ್​)

    ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ಮನೆ ಮಾಡಿದ ವ್ಯಕ್ತಿಯ ಅನುಭವ ಕೇಳಿದ್ರೆ ನಿಮಗೂ ಆಸೆ ಬರಬಹುದು!

    ಮುಖ್ಯಮಂತ್ರಿ ನಿವಾಸದಲ್ಲಿ ಪ್ರತ್ಯಕ್ಷವಾದ ಬೆಕ್ಕಿಗೆ ಹಾಲು ನೀಡಿದ ಸಿಎಂ ಯಡಿಯೂರಪ್ಪ: ವೈರಲ್​ ಆದ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts