More

    ಪಾಸ್​ಗಳಿಗೆ ಹೆಚ್ಚು ಬೇಡಿಕೆ

    ಪಾಸ್​ಗಳಿಗೆ ಹೆಚ್ಚು ಬೇಡಿಕೆ

    ಚಿಕ್ಕಮಗಳೂರು: ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳಲು ಸಹ ಸಾಕಷ್ಟು ಮಂದಿ ಸರದಿಯಲ್ಲಿರುವುದು ಗಮನಕ್ಕೆ ಬಂದಿದ್ದು, ಭಾನುವಾರ ಆರು ಮಂದಿ ಜಿಲ್ಲಾಡಳಿತದ ಅನುಮತಿ ಪಡೆದು ತಮಿಳುನಾಡಿಗೆ ತೆರಳಿದ್ದಾರೆ.

    ಅಂತರ ಜಿಲ್ಲೆಗಳಿಗೆ 100 ಮಂದಿ ತೆರಳಿದ್ದರೆ, ಇವರಲ್ಲಿ ಬಳ್ಳಾರಿಗೆ ಇಬ್ಬರು, ಬೆಂಗಳೂರಿಗೆ 21, ಮಂಗಳೂರಿಗೆ 50 ಹಾಗೂ ಕೊಪ್ಪಳಕ್ಕೆ 27 ಮಂದಿ ಸೇರಿದ್ದಾರೆ. ಸ್ಥಳೀಯವಾಗಿ ಪ್ರಯಾಣಿಕರು ಸಂಚರಿಸಿದ್ದಾರೆ. ಚಿಕ್ಕಮಗಳೂರು, ಕಡೂರು ಹಾಗೂ ಮೂಡಿಗೆರೆ ಡಿಪೋಗಳಿಗೆ ಸೇರಿದ 21 ಬಸ್​ಗಳು ಸಂಚರಿಸಿದ್ದು, ಒಟ್ಟು 519 ಮಂದಿ ಪ್ರಯಾಣ ಮಾಡಿದ್ದಾರೆ. ಬಸ್​ನಲ್ಲಿ ಪರಸ್ಪರ ಅಂತರ ಕಾಯ್ದುಕೊಂಡಿರುವುದಲ್ಲದೆ, ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.

    ಇನ್ನೂ ಕೂಡ ಹೊರ ರಾಜ್ಯಗಳಿಗೆ ತೆರಳುವ ಸಾಕಷ್ಟು ಮಂದಿ ಇದ್ದು, ಬಿಹಾರ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ತೆರಳುವ ಸಾಕಷ್ಟು ಕಾರ್ವಿುಕರು ಜಿಲ್ಲೆಯಲ್ಲಿರುವುದು ಗಮನಕ್ಕೆ ಬಂದಿದೆ.

    ಕರೊನಾ ಸೇನಾನಿಗಳಿಗೆ ರಕ್ಷಣೆ ಅಗತ್ಯ: ಕಾಫಿನಾಡನ್ನು ಕರೊನಾ ಮುಕ್ತಗೊಳಿಸಲು ಗಡಿಭಾಗದಲ್ಲಿ ಹಗಲಿರುಳು ಕಾಯುತ್ತಿರುವ ಕರೊನಾ ಸೇನಾನಿಗಳಿಗೆ ಸೂಕ್ತ ರಕ್ಷಣಾ ಪರಿಕರ ನೀಡುವತ್ತ ಜಿಲ್ಲಾಡಳಿತ ಗಮನ ಹರಿಸಬೇಕೆನ್ನುವ ಅಭಿಪ್ರಾಯ ಕೇಳಿ ಬಂದಿದೆ.

    ಕಳೆದ ಎರಡು ಲಾಕ್​ಡೌನ್​ನಲ್ಲಿ ಎಚ್ಚರಿಕೆಯಿಂದ ಆರೋಗ್ಯ ಇಲಾಖೆ, ಪೊಲೀಸರು ನಗರ ಸೇರಿದಂತೆ ಚೆಕ್​ಪೋಸ್ಟ್​ಗಳಲ್ಲಿ ಕೆಲಸ ನಿರ್ವಹಿಸಿದರೂ ಜಿಲ್ಲೆಗೆ ಆಗಮಿಸುವ ವಿದೇಶೀಯರು ಸೇರಿ ಜಿಲ್ಲೆಯಲ್ಲಿದ್ದ ಜನರನ್ನು ಕರೊನಾ ಅವರಿಸದಂತೆ ತಡೆಯುವುದಷ್ಟೆ ಅವರ ಕೆಲಸವಾಗಿತ್ತು. ಅದರಲ್ಲಿ ಯಶಸ್ಸನ್ನು ಸಾಧಿಸಿ ಹಸಿರು ವಲಯದಲ್ಲಿಯೇ ಜಿಲ್ಲೆ ಉಳಿದುಕೊಂಡಿದೆ.

    ಪಾಸಿಟಿವ್ ಜಿಲ್ಲೆಗಳಿಗೂ ಪಾಸು: ಕಳೆದ ಲಾಕ್​ಡೌನ್ ಸಂದರ್ಭದಲ್ಲಿ ಈ ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಗಳು ಮೂರನೇ ಲಾಕ್​ಡೌನ್ ಅವಧಿಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದ್ದರೂ ಸರ್ಕಾರದಿಂದ ಅಂತರ್ಜಿಲ್ಲೆಗಳಿಗೆ ಪಾಸ್ ಮೂಲಕ ಓಡಾಡಲು ಅವಕಾಶ ನೀಡಲಾಗಿದೆ. ಪಾಸ್ ಪಡೆದವರು ಜಿಲ್ಲೆಗೆ ಪ್ರವೇಶಿಸುವಾಗ ಮೊದಲು ಅವರನ್ನು ಪ್ರಶ್ನಿಸುವುದೇ ಗಡಿಭಾಗದ ಚೆಕ್​ಪೋಸ್ಟ್​ನಲ್ಲಿರುವ ಸಿಬ್ಬಂದಿ. ಕರೊನಾ ಶಂಕೆ ಇದ್ದರೂ ಮೊದಲು ಸ್ಕ್ರೀನಿಂಗ್ ಮೂಲಕ ಪತ್ತೆ ಹಚ್ಚುವ ಕೆಲಸ ಮಾಡುವುದೇ ಅವರು. ಹಾಗೆಯೇ ಅನುಮಾನ ಬಂದರೆ ಅವರನ್ನು ತಡೆಯುವುದು ಸಹ ಚೆಕ್​ಪೋಸ್ಟ್ ಸಿಬ್ಬಂದಿಯೆ. ಇಷ್ಟೆಲ್ಲ ಸವಾಲುಗಳಿರುವ ಚೆಕ್​ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಡಳಿತದಿಂದ ಕರೊನಾ ಸೋಂಕು ಭೀತಿ ತಡೆಯಲು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಅಗ್ರಹ ೇಕಳಿ ಬಂದಿದೆ.

    ಸೋಂಕು ಪೀಡಿತ ಜಿಲ್ಲೆಯಿಂದ ಆಗಮಿಸಿದವರನ್ನು ತಪಾಸಣೆ ಮಾಡುವ ಕಾಲಕ್ಕೆ ಚೆಕ್​ಪೋಸ್ಟ್ ಸಿಬ್ಬಂದಿಗೆ ಗ್ಲಾಸ್ ಹೆಲ್ಮೆಟ್, ಕೈಗವಸು ಪ್ರತಿಯೊಂದು ವಾಹನ ತಪಾಸಣೆಯ ತಕ್ಷಣವೇ ಸ್ಯಾನಿಟೈಸರ್ ಬಳಸಬೇಕು. ಇವುಗಳನ್ನು ನೀಡಲಾಗಿದ್ದರೂ ಬಳಸುವುದು ಮಾತ್ರ ಕಂಡು ಬರುತ್ತಿಲ್ಲ. ಹೊರ ಜಿಲ್ಲೆಗಳಿಂದ ಬಂದವರನ್ನು ತಪಾಸಣೆ ಮಾಡುವಾಗ ಅಂತರ ಕಾಪಾಡಲು ರಸ್ತೆ ಬದಿ ಪ್ರತ್ಯೇಕ ಸ್ಥಳ ಗುರುತಿಸಬೇಕೆನ್ನುವ ಕೋರಿಕೆಯೂ ಕೇಳಿ ಬಂದಿದೆ.

    ವಾಹನಗಳಲ್ಲಿ ಬರುವವರು ಯಾರೆನ್ನುವುದೇ ತಿಳಿಯದು. ಅವರ ತಪಾಸಣೆ ಕಾಲಕ್ಕೆ ಪಾಸ್ ಹಾಗೂ ಮೊಬೈಲ್​ಗಳನ್ನು ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ಈ ವಸ್ತುಗಳನ್ನು ನೀಡದಿದ್ದಲ್ಲಿ ಕರ್ತವ್ಯದ ನಡುವೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಇದು ಇನ್ನು ಸವಾಲಿನ ಕೆಲಸವಾಗಬಹುದು. ಆದರೆ ಅವುಗಳನ್ನು ಬಳಸದಿರುವುದು ಮಾತ್ರ ಪ್ರಶ್ನೆಯಾಗಿ ಉಳಿಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts