More

    ಲಾಕ್‌ಡೌನ್ ಸಮಯದಲ್ಲಿ ರಥೋತ್ಸವ ನಡೆದಿದ್ದನ್ನು ಮುಚ್ಚಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಏನಾಯ್ತು?

    ಕಲಬುರಗಿ: ಕರೊನಾ ವೈರಸ್ ಹಾವಳಿ ತಡೆಗೆ ಈಗ ಎಲ್ಲೆಡೆ ಲಾಕ್‌ಡೌನ್ ಮಾಡಲಾಗಿದೆ. ನಿಷೇಧಾಜ್ಞೆ ಕೂಡ ವಿಧಿಸಲಾಗಿದೆ. ಯಾರೂ ಸಭೆ ಸಮಾರಂಭ ಮಾಡುವಂತಿಲ್ಲ. ಅಂಥದ್ದರಲ್ಲಿ ರಥೋತ್ಸವವನ್ನೇ ಮಾಡಿ ಬಿಟ್ಟರೆ?

    ಈ ರೀತಿಯ ಘಟನೆ ಕಲಬುರಗಿ ಜಿಲ್ಲೆಯ ಸಾವಳಗಿ (ಬಿ) ಗ್ರಾಮದಲ್ಲಿ ನಡೆದಿದೆ. ಏಪ್ರಿಲ್ 7ರಂದು ಶಿವಲಿಂಗೇಶ್ವರ ಜಾತ್ರೆ ನಿಮಿತ್ತ ರಥೋತ್ಸವ ನಡೆದಿತ್ತು. ಈ ವಿಷಯವನ್ನು ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ನಿಯಮಗಳ ಪ್ರಕಾರ ಜಿಲ್ಲಾಡಳಿತದ ಗಮನಕ್ಕೆ ತರಬೇಕಾಗಿತ್ತು. ಆದರೆ 15 ದಿನಗಳಾದರೂ ಆತ ಜಿಲ್ಲಾಡಳಿತದ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದರು.

    ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಜಗದೀಶರೆಡ್ಡಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ, ಶಿಸ್ತು ಪ್ರಾಧಿಕಾರದ ಅಧಿಕಾರಿ ಬಿ. ಶರತ್ ಆದೇಶ ಹೊರಡಿಸಿದ್ದಾರೆ. ‘‘ತಮಗೆ ವಹಿಸಿದ ಕರ್ತವ್ಯ ನಿರ್ವಹಣೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’’ ಎಂದು ಸಹಾಯಕ ಆಯುಕ್ತರು ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

    ಮೆಡಿಕಲ್ ಶಾಪ್‌ಗಳಲ್ಲಿ ನೆಗಡಿ, ಕೆಮ್ಮು, ಜ್ವರಕ್ಕಾಗಿ ಔಷಧ ಖರೀದಿಸ್ತೀರಾ? ಸರ್ಕಾರಕ್ಕೆ ತಲುಪಲಿದೆ ನಿಮ್ಮ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts