More

    ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಬಳಸಿ

    ಕಂಪ್ಲಿ:ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವೈಯಕ್ತಿಕ ಸಾಧನೆಯೊಂದಿಗೆ ಸಾಮೂಹಿಕ ಗುರಿ ಸಾಧಿಸುವಲ್ಲಿ ಜಾಗೃತಿ ತೋರಬೇಕು ಎಂದು ಕೊಪ್ಪಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಹೇಳಿದರು.

    ಇದನ್ನು ಓದಿ:ಸಾಲ ವಿತರಣೆಯಲ್ಲಿ ಆದ್ಯತಾ ವಲಯದ ಪ್ರಗತಿ ಅವಶ್ಯ

    ಪಟ್ಟಣದಲ್ಲಿ ಎಸ್‌ಕೆಡಿಆರ್‌ಪಿ ಬಿ.ಸಿ.ಟ್ರಸ್ಟ್‌ನ 2,661ನೇ ನೂತನ ಸ್ವಸಹಾಯ ಸಂಘವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸ್ವಸಹಾಯ ಸಂಘಗಳ ಮೂಲಕ ಹೊಸತನ್ನು ಸಾಧಿಸುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು.

    ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಬಳಸಿ ಗುರಿ ಸಾಧಿಸಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ನೂತನ ಸ್ವಸಹಾಯ ಸಂಘಗಳ ಸದಸ್ಯರಿಗೆ ದಾಖಲೆ ಹಸ್ತಾಂತರಿಸಿದರು. ಮೇಲ್ವಿಚಾರಕರಾದ ಶೈಲಾ, ಮಂಜುನಾಥ, ಪ್ರಬಂಧಕ ಮುರುಗೇಶ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts