More

    ಸಾಲ ವಿತರಣೆಯಲ್ಲಿ ಆದ್ಯತಾ ವಲಯದ ಪ್ರಗತಿ ಅವಶ್ಯ

    ಶಿವಮೊಗ್ಗ: ಕೃಷಿ, ಶಿಕ್ಷಣ, ವಸತಿಗೆ ಸಂಬಂಧಿಸಿದಂತೆ ಸಾಲ ವಿತರಣೆಗೆ ಬ್ಯಾಂಕ್‌ಗಳು ಹೆಚ್ಚು ಒತ್ತು ನೀಡಬೇಕು. ಆ ಮೂಲಕ ಆದ್ಯತಾ ವಲಯದಲ್ಲಿ ಪ್ರಗತಿ ಸಾಧಿಸಬೇಕು ಎಂದು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಹೇಳಿದರು.

    ಬುಧವಾರ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, 2023-24 ನೇ ಸಾಲಿನ ವಾರ್ಷಿಕ ಗುರಿಯಲ್ಲಿ ಈವರೆಗೆ ಕೃಷಿ ವಲಯದಲ್ಲಿ ಶೇ. 51.25, ಎಂಎಸ್‌ಎಂಇ ವಲಯದಲ್ಲಿ ಶೇ. 105.77, ಶಿಕ್ಷಣ ಸಾಲದಲ್ಲಿ ಶೇ. 10.75, ವಸತಿ ಶೇ. 11.46 ಸೇರಿ ಒಟ್ಟಾರೆ ಆದ್ಯತಾ ವಲಯದಲ್ಲಿ ಶೇ. 57.02 ಪ್ರಗತಿ ಸಾಧಿಸಲಾಗಿದೆ. ಈ ವಲಯದಲ್ಲಿ ಇನ್ನಷ್ಟು ಪ್ರಗತಿ ಅವಶ್ಯ ಎಂದು ತಿಳಿಸಿದರು.
    ಆದ್ಯತಾ ವಲಯದಲ್ಲಿ ಅತಿ ಕಡಿಮೆ ಪ್ರಗತಿ ಸಾಧಿಸಿದ, ಸಿಡಿ ಅನುಪಾತ ಶೇ. 15ಕ್ಕಿಂತ ಕಡಿಮೆ ಇರುವ ಬ್ಯಾಂಕುಗಳಿಗೆ ನಿಗಧಿತ ಪ್ರಗತಿ ಸಾಧಿಸುವ ಕುರಿತು ಆರ್‌ಬಿಐ ಶಿಸ್ತಿನ ಕ್ರಮ ಜರುಗಿಸಬೇಕು. ಸಭೆಗೆ ಗೈರಾದ ಬ್ಯಾಂಕ್‌ಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
    ಬ್ಯಾಂಕಿಂಗ್ ವ್ಯವಸ್ಥೆ ವಿಶ್ವಾಸ ಮೇಲೆ ನಿಂತಿದ್ದು, ಆದ್ಯತಾ ವಲಯಕ್ಕೆ ಸಂಬಂಧಿಸಿ ಶೈಕ್ಷಣಿಕ ಸಾಲ ನೀಡುವಲ್ಲಿ ಸ್ವಲ್ಪ ಉದಾರ ನೀತಿಯನ್ನು ಬ್ಯಾಂಕ್‌ಗಳು ತೋರಬೇಕು. ಸಿಬಿಲ್ ಸ್ಕೋರ್ ಇಲ್ಲವೆಂದು ಅರ್ಜಿ ತಿರಸ್ಕರಿಸುವುದು ಆಗಬಾರದು. ಅವಶ್ಯ ಇರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕೆಲಸ ಮಾಡಬೇಕು ಎಂದರು.
    ಕೆನರಾ ಬ್ಯಾಂಕ್ ಡಿಜಿಎಂ ಆರ್.ದೇವರಾಜ್ ಮಾತನಾಡಿ, ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ಕೃಷಿ ವಲಯದಲ್ಲಿ ಶೇ. 51.25, ಎಂಎಸ್‌ಎಂಇ ವಲಯದಲ್ಲಿ ಶೇ. 105.77 ಸೇರಿದಂತೆ ಆದ್ಯತಾ ಮತ್ತು ಆದ್ಯತಾರಹಿತ ವಲಯದಲ್ಲಿ ಶೇ. 59.18 ಪ್ರಗತಿ ಸಾಧಿಸಿದೆ. ಸಿಡಿ ಅನುಪಾತದಲ್ಲಿ ಶೇ. 76.47 ಸಾಧಿಸಲಾಗಿದೆ. ವಸತಿ, ಸ್ವ ಉದ್ಯೋಗ ಸಂಬಂಧಿಸಿದ ಅರ್ಜಿಗಳು ಕೆಲ ಬ್ಯಾಂಕ್‌ಗಳಲ್ಲಿ ವಿಲೇವಾರಿಗೆ ಬಾಕಿ ಇವೆ. ಅವುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸೂಚಿಸಿದರು.
    ಆರ್‌ಬಿಐ ಅಧಿಕಾರಿ ಬಿಸ್ವಾಸ್ ಮಾತನಾಡಿ, ಆದ್ಯತಾ ವಲಯ, ಎಂಎಸ್‌ಎಂಇ, ಶಿಕ್ಷಣ ಮತ್ತು ವಸತಿ ವಲಯದಲ್ಲಿ ನಿಗದಿತ ಗುರಿ ಸಾಧಿಸಬೇಕು. ಬ್ಯಾಂಕ್‌ಗಳು ತಮ್ಮಲ್ಲಿರುವ ಎಲ್ಲ ಉಳಿತಾಯ ಖಾತೆಗಳನ್ನು ಡಿಜಿಟಲ್ ವ್ಯಾಪ್ತಿಗೆ ತರಬೇಕು. ಜಿಲ್ಲೆಯಲ್ಲಿ ಈವರೆಗೆ ಶೇ. 89 ಖಾತೆಗಳು ಡಿಜಿಟಲೀಕರಣವಾಗಿದೆ. ಇದರಲ್ಲಿ ಶೇ. 100 ಸಾಧನೆ ಆಗಬೇಕು ಎಂದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಚ್.ಅಮರನಾಥ್, ನಬಾರ್ಡ್ ಡಿಡಿಎಂ ಶರತ್ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts