More

    LIVE: ಸ್ವಚ್ಛ ಮಹೋತ್ಸವ- ದೇಶದ ನಂ.1 ಸ್ವಚ್ಛ ನಗರ ಯಾವುದು?

    ನವದೆಹಲಿ: ದೇಶದ ನಗರಗಳ ಸ್ವಚ್ಛತಾ ಶ್ರೇಣಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಘೋಷಿಸಬೇಕಾಗಿತ್ತು. ಆದರೆ, ಕಾರ್ಯಬಾಹುಳ್ಯದ ಕಾರಣ ಅವರು ಇಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಐದನೇ ಆವೃತ್ತಿಯ ಪ್ರಶಸ್ತಿ ಪುರಸ್ಕಾರಗಳು ಪ್ರಕಟವಾಗಲಿವೆ. 2020ರ ಸ್ವಚ್ಛ ಸರ್ವೇಕ್ಷಣಾ ಫಲಿತಾಂಶದಲ್ಲಿ ಒಟ್ಟು 129 ನಗರಗಳ ಸ್ಥಿತಿಗತಿ ಬಹಿರಂಗವಾಗಲಿವೆ. ಕಾರ್ಯಕ್ರಮದ ನೇರ ಪ್ರಸಾರ ಮೇಲಿನ ವಿಡಿಯೋದಲ್ಲಿ ವೀಕ್ಷಿಸಬಹುದು.

    ಪ್ರಧಾನಿ ನರೇಂದ್ರ ಮೋದಿಯವರು ಈ ವಾರ್ಷಿಕ ಸರ್ವೇಯನ್ನು 2016ರಲ್ಲಿ ಪರಿಚಯಿಸಿದ್ದರು. ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ Swachh Bharat Urban (@SwachhBharatGov) ಪ್ರಸಾರವಾಗಲಿದೆ. ಮೊದಲ ಆವೃತ್ತಿಯ ಟಾಪ್ ಶ್ರೇಣಿಯನ್ನು ಮೈಸೂರು ಗೆದ್ದರೆ, ನಂತರ 2017,2018,2019ರಲ್ಲಿ ಸತತ ಮೂರು ವರ್ಷ ಇಂದೋರ್ ಅಗ್ರಸ್ಥಾನಿಯಾಗಿ ಮುಂದುವರಿದಿತ್ತು.

    ಮೈಸೂರು 3ನೇ ಸ್ವಚ್ಛ ನಗರ, ಬೆಂಗಳೂರಿಗೆ 194ನೇ ರ‍್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts