ಸಂಸ್ಕಾರವಂತರಾಗಿ ಬದುಕು ಕಟ್ಟಿಕೊಳ್ಳಿ

live-a-cultured-life

ವಿಜಯಪುರ: ವಿದ್ಯಾರ್ಥಿನಿಯರು ಪಾಲಕರಿಗೆ ನೋವಾಗದಂತೆ ಸಂಸ್ಕಾರವನ್ನು ರೂಡಿಸಿಕೊಂಡು, ತಲೆ ತಗ್ಗಿಸಿ ನಡೆಯದೆ, ತಲೆಯೆತ್ತಿ ನಡೆಯುವಂತೆ ಸಾಧನೆ ಮಾಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಸಿ ಕೆ ಹೊಸಮನಿ ಹೇಳಿದರು.

ಬುಧವಾರ ನಗರದ ಬಿಡಿಇ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದ 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕಾಲೇಜು ಸಂಸತ್ತಿನ ಪ್ರಮಾಣವಚನ ಸ್ವೀಕಾರ, ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.\

ಭವಿಷ್ಯ ಉತ್ತಮವಾಗಲು ಮೊಬೈಲ್, ಮದುವೆ ಇತ್ಯಾದಿ ಚಟುವಟಿಕೆಗೆ ಮನಗೊಡದೆ, ಇಷ್ಟಪಟ್ಟು, ಆಯ್ಕೆಮಾಡಿಕೊಂಡ ವಿಷಯವನ್ನು ಅಭ್ಯಾಸಮಾಡಿ ಯಶಸ್ಸು ಗಳಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಉಪಾಧ್ಯಕ್ಷ ಎ.ಡಿ. ದೇಶಪಾಂಡೆ ಮಾತನಾಡಿ, ಸತತ ಪರಿಶ್ರಮ, ಅಚ್ಚುಕಟ್ಟಾದ ದಿನಚರಿ, ಧ್ಯೇಯೋದ್ಧೇಶಗಳತ್ತ ಗಮನ ಕೇಂದ್ರೀಕರಿಸಿ ಗುರಿ ತಲುಪಬೇಕು ಎಂದರು.

ಕಾಲೇಜು ಸಂಸತ್ತಿನ ಉಪಾಧ್ಯಕ್ಷೆ ಸುವರ್ಣಾ ವಾಲಿಕಾರ, ಪಿ.ಬಿ. ಸಾಂಗ್ಲಿಕರ, ಆರ್.ಎಸ್. ದೀಕ್ಷಿತ, ಪಿ.ಎಂ.ಯಾಳವಾರ, ಸೀಮಾ ಹೊನವಾಡ, ಎಸ್.ಬಿ. ಕುಲಕರ್ಣಿ, ಜಿ.ಡಿ. ಸಲಗಾರ, ಕಿರಣ ಹರಿದಾಸ, ರಂಜಿತಾ ಸುತಗುಂಡಿ, ಗಿರೀಶ ಕುಲಕರ್ಣಿ, ನೇಹಾ ಮಂಟೂರ, ಯು.ಬಿ. ಆಶ್ರೀತ, ಶಂಕರ ಎಚ್. ದಡ್ಡಿ ಉಪಸ್ಥಿತರಿದ್ದರು.

ಜಂಟಿ ಕಾರ್ಯದರ್ಶಿ ಆರ್.ಪಿ .ಚಿಕ್ಕಲಕಿ ಉಪಸ್ಥಿತರಿದ್ದರು. ಪ್ರಾಚಾರ್ಯ ಪಿ.ಟಿ. ಕೋಟ್ನೀಸ ಸ್ವಾಗತಿಸಿದರು. ಕೆ.ಪಿ. ಜಹಗೀರದಾರ ಮತ್ತು ರಘೂತ್ತಮ ಅರ್ಜುಣಗಿ ನಿರೂಪಿಸಿದರು. ಐಶ್ವರ್ಯಾ ಕಲಾದಗಿ ವಂದಿಸಿದರು.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…