More

    ಕೌನ್ಸೆಲಿಂಗ್‌ನಲ್ಲಿ 320 ಶಿಕ್ಷಕರು ಭಾಗಿ; ನಾನಾ ಕಾರಣಕ್ಕೆ 11 ಅಭ್ಯರ್ಥಿಗಳು ಗೈರು

    ಹಾವೇರಿ: ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ಹಿನ್ನೆಲೆಯಲ್ಲಿ ವಿಳಂಭವಾಗಿದ್ದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಜಿಲ್ಲೆಯಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಗೆ ಆಯ್ಕೆಯಾಗಿದ್ದ 331 ಅಭ್ಯರ್ಥಿಗಳ ಪೈಕಿ 320 ಅಭ್ಯರ್ಥಿಗಳು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು.
    ನಗರದ ಗುರು ಭವನದಲ್ಲಿ ಅ.21 ಹಾಗೂ 25ರಂದು ಶಿಕ್ಷಣ ಇಲಾಖೆ ವತಿಯಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಜರುಗಿತು. ಡಿಡಿಪಿಐ ಗಿರೀಶ ಪದಕಿ ಹಾಗೂ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಎಫ್.ಬಿ.ಬಿಂಗೇರಿ ನೋಡೆಲ್ ಆಫೀಸರ್ ಆಗಿ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದರು.
    ಜಿಲ್ಲೆಯ ಏಳು ವಿಭಾಗಗಳ ವಿವಿಧ ಪ್ರಾಥಮಿಕ ಸರ್ಕಾರಿ ಶಾಲೆಗಳಿಗೆ ಒಟ್ಟು 331 ಶಿಕ್ಷಕರ ಆಯ್ಕೆ ಮಾಡಲಾಗಿತ್ತು. ಇದರಲ್ಲಿ 320 ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು. ಉಳಿದ 11ರಲ್ಲಿ ಒಂದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದು, 8 ಅಭ್ಯರ್ಥಿಗಳು ಹಾವೇರಿ ಜಿಲ್ಲೆ ಸ್ಥಳ ನಿರಾಕರಿಸಿದ್ದು, ಇಬ್ಬರು ಗೈರಾಗಿದ್ದಾರೆ. ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ವೇಳೆ ಅಭ್ಯರ್ಥಿಗಳ ಸ್ಥಳ ಹಾಗೂ ವಿಷಯ ಆಯ್ಕೆ ಪೂರ್ಣಗೊಂಡಿದೆ.
    ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನಾ ಕಾರ್ಯ ನಡೆದಿದೆ. ಇದರಲ್ಲಿ ಈಗಾಗಲೇ 6 ಅಭ್ಯರ್ಥಿಗಳಿಗೆ ಸೇವೆ ಹಾಜರಾಗಲು ನೇಮಕಾತಿ ಪತ್ರ ನೀಡಲಾಗಿದೆ. 94 ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು ಅವರೂ ಶೀಘ್ರದಲ್ಲೇ ಅಭ್ಯರ್ಥಿಗಳು ಸೇವೆಗೆ ಹಾಜರಾಗಲಿದ್ದಾರೆ ಎಂದು ಡಿಡಿಪಿಐ ಗಿರೀಶ ಪದಕಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts